ಈ ಎಲ್ ಎಕ್ಸ್  (ಆರ್ ಎಲ್ ವಿ) ಯ ಅಂತಿಮ ಹಂತದ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವೀಯಾಗಿ ಪೂರ್ಣಗೊಳಿಸಿದ ಇಸ್ರೋ

Updated on: Jun 23, 2024 | 11:48 AM

ಇಂದು ಬೆಳಗ್ಗೆ 7.10 ಕ್ಕೆ ಅದು ಚಿತ್ರದುರ್ಗ ಜಿಲ್ಲೆಯ ಕುದಾಪುರ ಗ್ರಾಮದಲ್ಲ್ಲಿರುವ ಎಟಿಆರ್ ನಲ್ಲಿ ಮರಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ (ಆರ್ ಎಲ್ ವಿ) ಎಲ್ ಈ ಎಕ್ಸ್ ನ ಮೂರನೇ ಮತ್ತು ಅಂತಿಮ ಹಂತದ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವೀಯಾಗಿ ಪೂರ್ಣಗೊಳಿಸಿದೆ.

ಚಿತ್ರದುರ್ಗ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿನೂತನ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತದೆ ಅನ್ನೋದು ಎಲ್ಲ ಭಾರತೀಯರಿಗೆ ಗೊತ್ತಿರುವ ಸಂಗತಿ. ಇಂದು ಬೆಳಗ್ಗೆ 7.10 ಕ್ಕೆ ಅದು ಚಿತ್ರದುರ್ಗ ಜಿಲ್ಲೆಯ ಕುದಾಪುರ ಗ್ರಾಮದಲ್ಲಿರುವ ಎಟಿಆರ್ ನಲ್ಲಿ (Kudapur ATR) ಮರಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ (ಆರ್ ಎಲ್ ವಿ) ಎಲ್ ಈ ಎಕ್ಸ್ ನ (ELX RLV) ಮೂರನೇ ಮತ್ತು ಅಂತಿಮ ಹಂತದ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವೀಯಾಗಿ ಪೂರ್ಣಗೊಳಿಸಿದೆ. ದೃಶ್ಯಗಳಲ್ಲಿ ಆರ್ ಎಲ್ ವಿ ಆಕಾಶದಿಂದ ಶರವೇಗದಲ್ಲಿ ಹಾರುತ್ತಾ ಬಂದು ಕುದಾಪುರದ ಎಟಿಎಸ್ ನಲ್ಲಿ ಲ್ಯಾಂಡ್ ಆಗುತ್ತಿರುವ ದೃಶ್ಯ ಮೈ ನವಿರೇಳಿಸುತ್ತದೆ. ಇಸ್ರೋ ಸಂಸ್ಥೆಯು ತನ್ನ ಸಂತಸವನ್ನು ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Chandrayaan 3 Success: ಸೋಮನಾಥ್ ಅವರೇ ಚಂದ್ರನ ಜತೆ ನಿಮ್ಮ ಹೆಸರೂ ಸೇರಿಕೊಂಡಿದೆ, ಜತೆಗೆ ಭಾರತೀಯರದ್ದೂ; ಪ್ರಧಾನಿ ಮೋದಿ ಅಭಿನಂದನೆ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More