ಪ್ರಧಾನಿ ಮೋದಿಯವರ ಸಾಧನೆ ಕುಮಾರಸ್ವಾಮಿ ಕೊಂಡಾಡಿದಾಗ ಎನ್ ಡಿಎ ಸದಸ್ಯರೆಲ್ಲ ಮೇಜುತಟ್ಟಿ ಹರ್ಷಿಸಿದರು!

|

Updated on: Jun 07, 2024 | 2:46 PM

ನೂತನವಾಗಿ ಆಯ್ಕೆಯಾಗಿರುವ ಎನ್ ಡಿಎ ಮಿತ್ರಪಕ್ಷಗಳ ಸದಸ್ಯರನ್ನು ಅಭಿನಂದಿಸಿದ ಬಳಿಕ ಕುಮಾರಸ್ವಾಮಿಯವರು, ಪ್ರಧಾನಿ ಮೋದಿಯವರನ್ನು ಎನ್ ಡಿಎ ಸಂಸದೀಯ ಮಂಡಳಿಯ ನಾಯಕರಾಗಿ ಅರಿಸಲು ತಮ್ಮ ಪಕ್ಷದ ವತಿಯಿಂದ ಅನುಮೋದನೆ ನೀಡುತ್ತೇನೆ ಎಂದು ಹೇಳಿದರು.

ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ಎನ್ ಡಿಎ ಮೈತ್ರಿಕೂಟದ ಸಂಸದೀಯ ಮಂಡಳಿಯ ನಾಯಕನಾಗಿ (Leader of NDA Parliamentary Board) ಆಯ್ಕೆ ಮಾಡುವ ಪ್ರಸ್ತಾಪಕ್ಕೆ ಅನುಮೋದನೆ ಸೂಚಿಸಲು ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ವೇದಿಕೆಗೆ ಬಂದ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಇಂಗ್ಲಿಷ್ ನಲ್ಲಿ ಮಾತಾಡಿದರು. ನೂತನವಾಗಿ ಆಯ್ಕೆಯಾಗಿರುವ ಎನ್ ಡಿಎ ಮಿತ್ರಪಕ್ಷಗಳ ಸದಸ್ಯರನ್ನು ಅಭಿನಂದಿಸಿದ ಬಳಿಕ ಕುಮಾರಸ್ವಾಮಿಯವರು, ಪ್ರಧಾನಿ ಮೋದಿಯವರನ್ನು ಎನ್ ಡಿಎ ಸಂಸದೀಯ ಮಂಡಳಿಯ ನಾಯಕರಾಗಿ ಅರಿಸಲು ತಮ್ಮ ಪಕ್ಷದ ವತಿಯಿಂದ ಅನುಮೋದನೆ ನೀಡುತ್ತೇನೆ ಎಂದು ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಅವರು ನೇತೃತ್ವದಲ್ಲಿ ದೇಶ ಸಾಧಿಸಿರುವ ಅಗಾಧ ಪ್ರಗತಿಯ ಬಗ್ಗೆ ಕುಮಾರಸ್ವಾಮಿ ಮಾತಾಡಿದಾಗ, ಪ್ರಧಾನಿ ಮೋದಿ ಸೇರಿದಂತೆ ಎಲ್ಲ ಸದಸ್ಯರು ಮೇಜು ತಟ್ಟಿ ಹರ್ಷ ವ್ಯಕ್ತಪಡಿಸಿದರು. ಕುಮಾರಸ್ವಾಮಿಯವರ ನಂತರ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅನುಮೋದನೆ ಸೂಚಿಸಲು ಆಗಮಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:     ಕುಮಾರಸ್ವಾಮಿ ಕೇಂದ್ರ ಸಚಿವರಾಗುತ್ತಾರಾ, ರಾಜ್ಯದಿಂದ ಎಷ್ಟು ಮಂದಿಗೆ ಸಿಗಬಹುದು ಮೋದಿ ಸಂಪುಟದಲ್ಲಿ ಸ್ಥಾನ?