ಲೋಕಸಭಾ ಚುನಾವಣೆ ಫಲಿತಾಂಶ: ಗೆಲುವು ನಿಶ್ಚಿತ ಅದರೆ ಜಯದ ಅಂತರ ನೋಡಬೇಕಿದೆ ಎಂದ ರಾಘವೇಂದ್ರ

|

Updated on: Jun 04, 2024 | 11:17 AM

ಲೋಕಸಭಾ ಚುನಾವಣೆ ಫಲಿತಾಂಶ: ಹಲವಾರು ಬಗೆಯ ಅಪಪ್ರಚಾರಗಳ ಹೊರತಾಗಿಯೂ ತಾನು ಮುನ್ನಡೆ ಸಾಧಿಸಿ ಗೆಲುವಿನತ್ತ ಮುನ್ನುಗುತ್ತಿರುವುದು ಜನರಿಗೆ ತನ್ನ ಮೇಲಿರುವ ಪ್ರೀತಿ, ಅಭಿಮಾನ ಮತ್ತು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಇಟ್ಟುಕೊಂಡಿರುವ ವಿಶ್ವಾಸವನ್ನು ತೋರಿಸುತ್ತದೆ ಎಂದು ರಾಘವೇಂದ್ರ ಹೇಳಿದರು.

ಶಿವಮೊಗ್ಗ: ಸಂಸದ ಬಿವೈ ರಾಘವೇಂದ್ರ (BY Raghavendra) ಗೆಲುವಿನ ವಿಶ್ವಾಸದಲ್ಲಿದ್ದಾರೆ. ನಗರದಲ್ಲಿಂದು ಮತ ಎಣಿಕೆ ಕೇಂದ್ರದಿಂದ ಹೊರಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಎನ್ ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಕ್ಕು ನರೇಂದ್ರ ಮೋದಿಯವರು (PM Narendra Modi) ಮತ್ತೊಮ್ಮೆ ಪ್ರಧಾನಿಯಾಗುವ ನಿರೀಕ್ಷೆ ನಿಜವಾಗುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ (Shivamogga LS seat) ಐದಾರರು ಸುತ್ತಿನ ಮತಎಣಿಕೆಯ ನಂತರ ತಾನು 35,000 ಮತಗಳ ಅಂತರ ಸಾಧಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು ಹಲವಾರು ಬಗೆಯ ಅಪಪ್ರಚಾರಗಳ ಹೊರತಾಗಿಯೂ ತಾನು ಮುನ್ನಡೆ ಸಾಧಿಸಿ ಗೆಲುವಿನತ್ತ ಮುನ್ನುಗುತ್ತಿರುವುದು ಜನರಿಗೆ ತನ್ನ ಮೇಲಿರುವ ಪ್ರೀತಿ, ಅಭಿಮಾನ ಮತ್ತು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಇಟ್ಟುಕೊಂಡಿರುವ ವಿಶ್ವಾಸವನ್ನು ತೋರಿಸುತ್ತದೆ ಎಂದು ರಾಘವೇಂದ್ರ ಹೇಳಿದರು. ಮತದಾನೋತ್ತರ ಸಮೀಕ್ಷೆಗಳು ಸಹ ನಿಜವಾಗುತ್ತಿವೆ, ತನ್ನ ಗೆಲುವಂತೂ ನಿಶ್ಚಿತ ಆದರೆ, ಗೆಲುವಿನ ಅಂತರ ಎಷ್ಟಿರಲಿದೆ ಅನ್ನೋದನ್ನು ನೋಡಬೇಕಿದೆ ಎಂದು ರಾಘವೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶಿವಮೊಗ್ಗ ಡಿಸಿಸಿ ಬ್ಯಾಂಕ್​ ‌ಹಗರಣದಲ್ಲಿ ಎಂಪಿ ಪಾತ್ರವೂ ಇದೆ: ಬಿವೈ ರಾಘವೇಂದ್ರ ವಿರುದ್ಧ ಬೇಳೂರು ಗಂಭೀರ ಆರೋಪ