ಕನ್ನಡ ರಾಜ್ಯೋತ್ಸವ: ಕಲರ್ ಫುಲ್ ಲೈಟಿಂಗ್​​ನಿಂದ ಕಂಗೊಳಿಸ್ತಿರೋ ವಿಧಾನಸೌಧಕ್ಕೆ ಜನರು ಫಿದಾ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 02, 2023 | 10:47 PM

ಕನ್ನಡ ರಾಜ್ಯೋತ್ಸವ(Kannada Rajyotsava)ಹಿನ್ನಲೆ ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಅದರಂತೆ ಇದೀಗ ರಾಜ್ಯೋತ್ಸವದ ಮೆರುಗನ್ನು ಹೆಚ್ಚಿಸುವುದಕ್ಕಾಗಿ ವಿಧಾನಸೌಧ(Vidhan Soudha) ಕ್ಕೆ ಬಣ್ಣ ಬಣ್ಣದ ಲೈಟ್ಸ್​ಗಳಿಂದ ಅಲಂಕರಿಸಲಾಗಿದೆ. ಅದರ ಝಲಕ್​ ಇಲ್ಲಿದೆ.

ಬೆಂಗಳೂರು, ನ.02: ಕನ್ನಡ ರಾಜ್ಯೋತ್ಸವ(Kannada Rajyotsava)ಹಿನ್ನಲೆ ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಅದರಂತೆ ಇದೀಗ ರಾಜ್ಯೋತ್ಸವದ ಮೆರುಗನ್ನು ಹೆಚ್ಚಿಸುವುದಕ್ಕಾಗಿ ವಿಧಾನಸೌಧ(Vidhan Soudha) ಕ್ಕೆ ಬಣ್ಣ ಬಣ್ಣದ ಲೈಟ್ಸ್​ಗಳಿಂದ ಅಲಂಕರಿಸಲಾಗಿದೆ. ಹೌದು, ವಿಧಾನಸೌಧ ಚಿತ್ತಾರದ ಬೆಳಕಿನಿಂದ ಕಂಗೊಳಿಸುತ್ತಿದೆ. ನಾಡ ಧ್ವಜ, ರಾಷ್ಟ್ರ ಧ್ವಜಗಳ ಬಣ್ಣಗಳ ಮೂಲಕ ಬೆಳಕಿನ ಅಲಂಕಾರ ಮಾಡಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ವಿಧಾನಸೌಧದ ಬೆಳಕು ಕಂಡು ಜನರು ಫುಲ್ ಖುಷ್​ ಆಗಿದ್ದು, ಸೆಲ್ಪಿ ಫೋಟೊಗಳಿಗಾಗಿ ಮುಗಿ ಬಿದ್ದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ