ಬೆಳಗಾವಿ ಬಿಜೆಪಿ ನಾಯಕರಲ್ಲಿ ಹಿಂದೆ ವೈಮನಸ್ಸುಗಳಿದ್ದವು ಎನ್ನುವ ಶಶಿಕಲಾ ಜೊಲ್ಲೆ ಲೋಕಸಭಾ ಚುನಾವಣೆ ಸಾಮೂಹಿಕ ಹೋರಾಟ ನಡೆಸುತ್ತೇವೆ ಅನ್ನುತ್ತಾರೆ!
ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರಗಳಲ್ಲದೆ ಕಾರವಾರದ ಬಿಜೆಪಿ ಅಭ್ಯರ್ಥಿಯನ್ನು ಸಹ ಗೆಲ್ಲಿಸುತ್ತೇವೆ ಎಂದು ಅವರು ಹೇಳಿದರು. ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಜರುಗಿದ ಪ್ರಮಾದಗಳು ಪುನರಾವರ್ತನೆಗೊಳ್ಳಲಾರವು ಎಂದು ಹೇಳುವ ಶಶಿಕಲಾ ಜೊಲ್ಲೆ ರಮೇಶ್ ಜಾರಕಿಹೊಳಿ ಅವರ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಬೆಳಗಾವಿ: ನಿಪ್ಪಾಣಿ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ (Shashikala Jolle) ಬೆಳಗಾವಿ ಬಿಜೆಪಿ ನಾಯಕರ ನಡುವೆ ಒಳಜಗಳಗಳಿರುವುದನ್ನು ಅಂಗೀಕರಿಸುತ್ತಾರೆ. ಇಂದು ಬೆಳಗಾವಿಯಲ್ಲಿ ಇತರ ಕೆಲ ಜಿಲ್ಲಾ ಬಿಜೆಪಿ ನಾಯಕರೊಡನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಹಿಂದೆ ತಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದಿರಬಹುದು (differences) ಅದರೆ ಈಗ ಎಲ್ಲರೂ ಒಂದಾಗಿರುವುದಾಗಿ ಹೇಳಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha polls) ಪಕ್ಷದ ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ ಸಾಮೂಹಿಕವಾಗಿ ಕೆಲಸ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ಜೊಲ್ಲೆ ಹೇಳಿದರು. ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರಗಳಲ್ಲದೆ ಕಾರವಾರದ ಬಿಜೆಪಿ ಅಭ್ಯರ್ಥಿಯನ್ನು ಸಹ ಗೆಲ್ಲಿಸುತ್ತೇವೆ ಎಂದು ಅವರು ಹೇಳಿದರು. ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಜರುಗಿದ ಪ್ರಮಾದಗಳು ಪುನರಾವರ್ತನೆಗೊಳ್ಳಲಾರವು ಎಂದು ಹೇಳುವ ಶಶಿಕಲಾ ಜೊಲ್ಲೆ ರಮೇಶ್ ಜಾರಕಿಹೊಳಿ ಅವರ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
New Year 2026 Live: ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!

