ಆಹಾ.. ಇಷ್ಟೊಂದು ಕ್ಲೋಸ್ ಆದ ತನಿಶಾ-ವರ್ತೂರು ಸಂತೋಷ್; ಗುಸುಗುಸು ಮಾತು ಶುರು
ತನಿಶಾ ಕುಪ್ಪಂಡ ಮತ್ತು ವರ್ತೂರು ಸಂತೋಷ್ ಅವರು ಒಂದೇ ತಂಡದಲ್ಲಿ ಇದ್ದಾರೆ. ಈ ವೇಳೆ ಅವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಿದೆ. ಅವರಿಬ್ಬರು ಇಷ್ಟು ಸಲುಗೆಯಿಂದ ನಡೆದುಕೊಂಡಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ತುಕಾಲಿ ಸಂತು, ವಿನಯ್ ಗೌಡ ಮುಂತಾದವರು ಈ ಬಗ್ಗೆ ಈಗಾಗಲೇ ಗುಸುಗುಸು ಮಾತನಾಡಿಕೊಳ್ಳಲು ಶುರುಮಾಡಿದ್ದಾರೆ.
ಬಿಗ್ ಬಾಸ್ ಮನೆ ಎಂದರೆ ಅಲ್ಲಿ ವಿವಾದ ಮಾತ್ರವಲ್ಲ, ಸಖತ್ ಫನ್ ಕೂಡ ಇರುತ್ತದೆ. ವಿವಿಧ ಟಾಸ್ಕ್ ಸಲುವಾಗಿ ಎದುರಾಗುವ ಕಿರಿಕ್ಗಳ ನಡುವೆಯೂ ಮೋಜು ಮಸ್ತಿಯ ಪ್ರಸಂಗಗಳ ಜರುಗುತ್ತವೆ. ಆರಂಭದಲ್ಲಿ ದೂರ ದೂರ ಇದ್ದವರು ನಂತರದಲ್ಲಿ ಬಹಳ ಆಪ್ತವಾದ ಉದಾಹರಣೆ ಇದೆ. ಸದ್ಯಕ್ಕೆ ಬಿಗ್ ಬಾಸ್ (Bigg Boss Kannada Season 10) ಮನೆಯಲ್ಲಿ ಹಳ್ಳಿ ಟಾಸ್ಕ್ ನಡೆಯುತ್ತಿದೆ. ಎರಡು ಗುಂಪುಗಳ ನಡುವೆ ಹಣಾಹಣಿ ಶುರುವಾಗಿದೆ. ತನಿಶಾ ಕುಪ್ಪಂಡ (Tanisha Kuppanda) ಮತ್ತು ವರ್ತೂರು ಸಂತೋಷ್ (Varthur Santhosh) ಅವರು ಒಂದು ತಂಡದಲ್ಲಿ ಇದ್ದಾರೆ. ಈ ವೇಳೆ ಅವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಿದೆ. ಅವರಿಬ್ಬರು ಇಷ್ಟು ಸಲುಗೆಯಿಂದ ನಡೆದುಕೊಂಡಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ತುಕಾಲಿ ಸಂತು ಮುಂತಾದವರು ಈ ಬಗ್ಗೆ ಈಗಾಗಲೇ ಗುಸುಗುಸು ಮಾತನಾಡಿಕೊಳ್ಳಲು ಶುರುಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಇಲ್ಲಿದೆ. ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆಯೂ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ನೋಡಬಹುದು. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರತಿ ರಾತ್ರಿ 9.30ಕ್ಕೆ ಎಪಿಸೋಡ್ ಪ್ರಸಾರ ಆಗುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.