ಗುಪ್ತಾಂಗದ ವಿಡಿಯೋ ಕಳುಹಿಸಿ ಕನ್ನಡ ಕಿರುತೆರೆ ನಟಿಗೆ ಕಿರುಕುಳ; ಆರೋಪಿ ಅರೆಸ್ಟ್
ಕನ್ನಡ ಕಿರುತೆರೆ ನಟಿಯೊಬ್ಬರಿಗೆ ಕಿರುಕುಳ ನೀಡಿದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ನಡೆದ ಬಗ್ಗೆ ವರದಿ ಆಗಿದೆ. ಈ ಸಂಬಂಧ ನಟಿ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ ಕಿರುತೆರೆ ನಟಿಗೆ ವ್ಯಕ್ತಿಯೋರ್ವ ಸೋಶಿಯಲ್ ಮೀಡಿಯಾದಲ್ಲಿ ಗುಪ್ತಾಂಗದ ಫೋಟೋ ಕಳುಹಿಸಿ ಗುಪ್ತಾಂಗದ ವಿಡಿಯೋ ಕಳುಹಿಸಿ ಕಿರುಕುಳ ನೀಡಿದ್ದಾನೆ. ಆ ವ್ಯಕ್ತಿಯ ಅಕೌಂಟ್ನ ಬ್ಲಾಕ್ ಮಾಡಿದ ಹೊರತಾಗಿಯೂ ಬೇರೆ ಖಾತೆಯಿಂದ ಮೆಸೇಜ್ ಮಾಡಲು ಆರಂಭಿಸಿದ್ದಾನೆ. ಆ ಬಳಿಕ ಸ್ವತಃ ನಟಿ ಆತನ ಬಳಿ ತೆರಳಿ ಬುದ್ಧಿವಾದ ಹೇಳಿದ್ದರು. ಆದರೂ ಬದಲಾಗದ ಕಾರಣ ದೂರು ದಾಖಲು ಮಾಡಲಾಗಿದೆ. ಇತ್ತೀಚೆಗೆ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿರುವುದು ಬೇಸರದ ವಿಚಾರ.
ಆರೋಪಿ ಹಾಗೂ ನಟಿ
ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಅನ್ವಯ ಆರೋಪಿ ನವೀನ್ ಎಂಬಾತನನ್ನು ಇಂದು (ನವೆಂಬರ್ 4) ಬಂಧಿಸಲಾಗಿದೆ. ಕೇರಳ ಮೂಲದ ವ್ಯಕ್ತಿ ಇವನಾಗಿದ್ದು, ವೈಟ್ಫೀಲ್ಡ್ ಅಲ್ಲಿ ವಾಸವಿದ್ದಾನೆ. ಡಿಲವರಿ ಮ್ಯಾನೆಜರ್ ಆಗಿ ನವೀನ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈಗ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Nov 04, 2025 08:34 AM
