Sapthami Gowda: ಜನರ ಮಧ್ಯೆ ‘ಕಾಂತಾರ’ ನಾಯಕಿ ಸಪ್ತಮಿ ಗೌಡ ಬಿಂದಾಸ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ

| Updated By: ಮದನ್​ ಕುಮಾರ್​

Updated on: Sep 30, 2022 | 2:12 PM

Kantara | Sapthami Gowda: ಜನರ ಜೊತೆ ಸಪ್ತಮಿ ಗೌಡ ಅವರು ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಅವರೊಂದಿಗೆ ನಟ ಪ್ರಮೋದ್​ ಶೆಟ್ಟಿ ಕೂಡ ಹೆಜ್ಜೆ ಹಾಕಿದ್ದಾರೆ.

ಬಹುನಿರೀಕ್ಷಿತ ‘ಕಾಂತಾರ’ (Kantara) ಸಿನಿಮಾ ರಿಲೀಸ್​ ಆಗಿದೆ. ಈ ಚಿತ್ರದಲ್ಲಿ ರಿಷಬ್​ ಶೆಟ್ಟಿ (Rishab Shetty) ಹೀರೋ ಆಗಿ ನಟಿಸಿದ್ದು, ಅವರಿಗೆ ಸಪ್ತಮಿ ಗೌಡ ಜೋಡಿ ಆಗಿದ್ದಾರೆ. ಮೊದಲ ದಿನ ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡಲು ಬೆಂಗಳೂರಿನ ಸಂತೋಷ್​ ಚಿತ್ರಮಂದಿರಕ್ಕೆ ಇಡೀ ಟೀಮ್​ ಆಗಮಿಸಿದೆ. ಈ ವೇಳೆ ಥಿಯೇಟರ್​ ಮುಂಭಾಗದಲ್ಲಿ ನೆರೆದಿದ್ದ ಜನರ ನಡುವೆ ಸಪ್ತಮಿ ಗೌಡ (Sapthami Gowda) ಅವರು ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಅವರೊಂದಿಗೆ ನಟ ಪ್ರಮೋದ್​ ಶೆಟ್ಟಿ ಕೂಡ ಹೆಜ್ಜೆ ಹಾಕಿದ್ದಾರೆ. ಎಲ್ಲೆಡೆಯಿಂದ ‘ಕಾಂತಾರ’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘ಹೊಂಬಾಳೆ ಫಿಲ್ಮ್ಸ್​’ ಬ್ಯಾನರ್​ನಲ್ಲಿ ಈ ಸಿನಿಮಾ ಮೂಡಿಬಂದಿದೆ.

 

Published On - 2:12 pm, Fri, 30 September 22

Follow us on