ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್

Updated on: Apr 20, 2026 | 10:21 PM

ಕಿರಣ್ ರಾಜ್ ಅವರು ಧಾರಾವಾಹಿ ಮಾತ್ರವಲ್ಲದೇ ಸಿನಿಮಾದಲ್ಲಿ ಕೂಡ ಬ್ಯುಸಿ ಆಗಿದ್ದಾರೆ. ಈಗ ಅವರು ‘ಶೇರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರತಿ ಸಿನಿಮಾದಲ್ಲಿ ಅವರ ಪಾತ್ರ ಬೇರೆ ಬೇರೆ ರೀತಿ ಇರುತ್ತದೆ. ಆ ಬಗ್ಗೆ ಕೇಳಿಬಂದ ಮೆಚ್ಚುಗೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಕಿರಣ್ ರಾಜ್ ಮಾತನಾಡಿದ್ದಾರೆ.

ನಟ ಕಿರಣ್ ರಾಜ್ ಅವರು ಧಾರಾವಾಹಿ ಮಾತ್ರವಲ್ಲದೇ ಸಿನಿಮಾದಲ್ಲಿ ಕೂಡ ಬ್ಯುಸಿ ಆಗಿದ್ದಾರೆ. ಈಗ ಅವರು ‘ಶೇರ್’ (Sherr) ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರತಿ ಸಿನಿಮಾದಲ್ಲಿ ಅವರ ಪಾತ್ರ ಬೇರೆ ಬೇರೆ ರೀತಿ ಇರುತ್ತದೆ. ಆ ಬಗ್ಗೆ ಕೇಳಿಬಂದ ಮೆಚ್ಚುಗೆಯ ಕುರಿತು ಕಿರಣ್ ರಾಜ್ (Kiran Raj) ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ‘ನಾನು ನಿರ್ದೇಶಕರ ನಟ. ಅವರಿಂದ ಬಂದ ಸೂಚನೆಯನ್ನು ಪಾಲಿಸುವ ಕೆಲಸಗಾರ ನಾನು. ಆ ರೀತಿ ನಾನು ಕೆಲಸ ಮಾಡುತ್ತೇನೆ. ಆ ಮೂಲಕ ನನ್ನ ಪ್ರತಿಭೆ ತೋರಿಸುತ್ತೇನೆ. ಅದರ ಕ್ರೆಡಿಟ್ ಎಲ್ಲವೂ ನಿರ್ದೇಶಕರಿಗೆ ಸಲ್ಲಬೇಕು. ಈ ಸಿನಿಮಾದಲ್ಲಿ ನಾನು ಅನಾಥ ಹುಡುಗನ ಪಾತ್ರ ಮಾಡಿದ್ದೇನೆ. ಆ್ಯಕ್ಷನ್ ಹೀರೋ ರೀತಿ ನನ್ನ ಜರ್ನಿ ಮುಂದುವರಿಯುತ್ತದೆ. ಈ ಸಿನಿಮಾದಲ್ಲಿ ನನ್ನದೇ ಮುಖ್ಯ ಪಾತ್ರವಲ್ಲ. ಯಾಕೆಂದರೆ ಸಾಕಷ್ಟು ಕಲಾವಿದರು ಇದ್ದಾರೆ. ಎಲ್ಲರ ಪಾತ್ರಕ್ಕೂ ಅಷ್ಟೇ ಮಹತ್ವ ಇದೆ’ ಎಂದು ಕಿರಣ್ ರಾಜ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More