AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರಣ್ ರಾಜ್ ಸಿನಿಮಾ ಜೊತೆ ‘ಕರ್ಣ’ ಧಾರಾವಾಹಿ ಮಾಡ್ತಿರೋದೇಕೆ? ಆ ವಿಶೇಷ ವ್ಯಕ್ತಿಯೇ ಕಾರಣ

ಕಿರಣ್ ರಾಜ್ ಅವರು 'ಕರ್ಣ' ಧಾರಾವಾಹಿಯ ಯಶಸ್ಸಿನ ಬಗ್ಗೆ ಮಾತನಾಡುತ್ತಾ, ತಮ್ಮ ಅಜ್ಜಿಯ ಪ್ರೋತ್ಸಾಹವೇ ಈ ಧಾರಾವಾಹಿಯಲ್ಲಿ ಅಭಿನಯಿಸಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಅವರು ತಮ್ಮ ನಟನಾ ವೃತ್ತಿಜೀವನದ ಬಗ್ಗೆ, ಪಾತ್ರಗಳನ್ನು ಆಯ್ಕೆ ಮಾಡುವ ವಿಧಾನ ಮತ್ತು ಕನ್ನಡ ಕಿರುತೆರೆ ಉದ್ಯಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕರ್ಣ ಪಾತ್ರ ಮತ್ತು ತಮ್ಮ ನಿಜ ಜೀವನದ ನಡುವಿನ ವ್ಯತ್ಯಾಸವನ್ನು ವಿವರಿಸಿದ್ದಾರೆ.

ಕಿರಣ್ ರಾಜ್ ಸಿನಿಮಾ ಜೊತೆ ‘ಕರ್ಣ’ ಧಾರಾವಾಹಿ ಮಾಡ್ತಿರೋದೇಕೆ? ಆ ವಿಶೇಷ ವ್ಯಕ್ತಿಯೇ ಕಾರಣ
ಕಿರಣ್ ರಾಜ್
ರಾಜೇಶ್ ದುಗ್ಗುಮನೆ
|

Updated on: Jul 17, 2025 | 11:57 AM

Share

‘ಕರ್ಣ’ ಧಾರಾವಾಹಿ ಮೂಲಕ ಕಿರಣ್ ರಾಜ್ (Kiran Raj) ಅವರು ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಈ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆದಿದೆ. ‘ಕನ್ನಡತಿ’ ಧಾರಾವಾಹಿ ಬಳಿಕ ಅವರು ಹಿರಿತೆರೆಯಲ್ಲಿ ತೊಡಗಿಕೊಂಡರು. ಈಗ ‘ಜಾಕಿ 42’ ಸಿನಿಮಾ ಕೆಲಸಗಳ ಮಧ್ಯೆಯೇ ಅವರು ಕಿರುತೆರೆಗೂ ಸಮಯ ಮೀಸಲಿಟ್ಟಿದ್ದಾರೆ. ಇದಕ್ಕೆ ಕಾರಣ ಅವರ ಅಜ್ಜಿ. ಈ ಅಚ್ಚರಿಯ ವಿಚಾರವನ್ನು ಕಿರಣ್ ರಾಜ್ ಟಿವಿ9 ಕನ್ನಡ ಡಿಜಿಟ್ ಜೊತೆ ಹಂಚಿಕೊಂಡಿದ್ದಾರೆ.

ಅಜ್ಜಿಗಾಗಿ..

‘ಕರ್ಣ’ ಧಾರಾವಾಹಿಗೆ ಒಳ್ಳೆಯ ಟಿಆರ್​ಪಿ ಸಿಕ್ಕ ಬಗ್ಗೆ ಕಿರಣ್ ರಾಜ್ ಖುಷಿ ಹೊರಹಾಕಿದ್ದಾರೆ. ‘ಧಾರಾವಾಹಿ ನಂಬರ್ 1 ಬಂದಿದ್ದು ಖುಷಿ ತಂದಿದೆ. ಜನರು ನನ್ನನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಒಂದೊಳ್ಳೆಯ ಕಥೆ ಸಿಕ್ಕರೆ ಟಿವಿಯಲ್ಲಿ ಮಾಡಬೇಕು ಎಂದುಕೊಂಡಿದ್ದೆ. ಆಗ ಕರ್ಣ ಬಂತು. ನಾನು ಧಾರಾವಾಹಿ ಮಾಡಲು ನನ್ನ ಅಜ್ಜಿ ಕೂಡ ಕಾರಣ. ಅವರಿಗೆ 70 ವರ್ಷ ಆಗಿದೆ. ಅವರು ಊರಲ್ಲಿ ಇರುತ್ತಾರೆ. ಅವರು ನೋಡೋದು ಧಾರಾವಾಹಿ ಮಾತ್ರ. ಹೀಗಾಗಿ, ಅವರ ಖುಷಿಗೆ ಈ ಧಾರಾವಾಹಿ ಮಾಡುತ್ತಿದ್ದೇನೆ’ ಎಂದಿದ್ದಾರೆ ಕಿರಣ್ ರಾಜ್.

ಜನರು ಇಷ್ಟ ಪಡೋ ಪಾತ್ರ ಮಾಡಬೇಕು..

‘ನಾನು ನಟನಾಗಿ ಒಂದು ಪಾತ್ರ ಮಾಡ್ತಾ ಇದ್ದೀನಿ ಅಷ್ಟೇ. ಹೀಗಾಗಿ, ತೆರೆಮೇಲೆ ಅವರಿಗೆ ಆ ಪಾತ್ರ ಕಾಣಬೇಕೆ ಹೊರತು ನಾನು ಕಾಣಬಾರದು. ನನಗೆ ಏನು ಬೇಕೋ ಅದನ್ನು ಮಾಡೋಕೆ ಆಗಲ್ಲ. ಜನರು ಏನನ್ನು ಇಷ್ಟ ಪಡ್ತಾರೋ ಅದನ್ನು ಮಾಡಬೇಕು. ಪಾತ್ರಗಳಲ್ಲಿ ಎಕ್ಸಿಪಿರಿಮೆಂಟ್ ಮಾಡುತ್ತಲೇ ಇರಬೇಕು’ ಎನ್ನುತ್ತಾರೆ ಅವರು.

ಇದನ್ನೂ ಓದಿ
Image
ನಯನತಾರ ಜೊತೆ ಚಿರಂಜೀವಿ ರೊಮ್ಯಾನ್ಸ್ ; 29 ವರ್ಷ ವಯಸ್ಸಿನ ಅಂತರ
Image
ವೀಕ್ಷಕರು ಹಿಂದೆಂದೂ ಕೇಳಿರದ ರಿಯಾಲಿಟಿ ಶೋನ ತಂದ ಜೀ ಕನ್ನಡ 
Image
ಪವನ್ ಕಲ್ಯಾಣ್ ಚಿತ್ರ ‘ಹರಿ ಹರ ವೀರ ಮಲ್ಲು’ಗೆ ಶುರುವಾಗಿದೆ ಕರ್ನಾಟಕದ ಭಯ
Image
ಮುಂದಿನ ಮೂರು ವರ್ಷ ರಜನಿಕಾಂತ್ ಬ್ಯುಸಿ; ಮತ್ತೆ ಮೂರು ಸಿನಿಮಾ ಫೈನಲ್

ನಮ್ಮ ಆಲೋಚನೆ ವಿಸ್ತ್ರತ ಆಗಬೇಕು..

‘ಎಂಟರ್​ಟೇನ್​ಮೆಂಟ್ ಅನ್ನೋ ಪದದ ಅರ್ಥ ವಿಸ್ತ್ರತವಾಗಿದೆ. ಕನ್ನಡದವರು ವಿದೇಶದ ಸೀರಿಸ್​ಗಳನ್ನು ನೊಡುತ್ತಾರೆ. ಅವುಗಳು ಕನ್ನಡಕ್ಕೂ ಡಬ್ ಆಗಿ ಬರುತ್ತಿವೆ. ಹೀಗಾಗಿ, ನಾವು ಏನಾದರೂ ವಿಶೇಷವಾಗಿ ಮಾಡಿದಾಗಲೇ ಜನರು ನೋಡೋದು’ ಎಂದಿದ್ದಾರೆ ಅವರು. ಈ ಮೂಲಕ ‘ಕರ್ಣ’ ಧಾರಾವಾಹಿಯಲ್ಲಿ ಫೈಟ್ ಹಾಗೂ ಸಾಂಗ್ ಇಟ್ಟಿದ್ದಕ್ಕೆ ಕಾರಣ ನೀಡಿದ್ದಾರೆ.

ಇದನ್ನೂ ಓದಿ: ‘ಕರ್ಣ’ ಗೆದ್ದ ಬಳಿಕ ಕಿರಣ್ ರಾಜ್ ಡೈಲಾಗ್ ನೋಡಿ

ಕರ್ಣ ಪಾತ್ರಕ್ಕೂ ನನಗೂ ಸಖತ್ ವ್ಯತ್ಯಾಸ ಇದೆ..

‘ನನ್ನ ರಿಯಲ್ ಲೈಫ್​ಗೂ ಕರ್ಣ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಯಾರಾದರೂ ಏನಾದರೂ ಕೊಟ್ಟರೆ ಅದನ್ನು ಮರಳಿ ಕೊಡುತ್ತೇನೆ. ತಪ್ಪೇ ಇಲ್ಲದಿದ್ದರೂ ಕರ್ಣ ತಂದೆಗೆ ತಲೆ ಬಾಗುತ್ತಾನೆ. ನನ್ನ ನಿಜ ಜೀವನದಲ್ಲೂ ನಾನು ಅದೇ ರೀತಿ ಇರೋದು. ಕರ್ಣ ಪಾತ್ರಕ್ಕೂ, ನನ್ನ ನಿಜ ಜೀವನಕ್ಕೂ ಇದೊಂದೇ ಹೋಲಿಕೆ ಇದೆ. ಫ್ಯಾಮಿಲಿಯವರು ಬಿಟ್ಟು ಇನ್ಯಾರೇ ಆ ರೀತಿ ಮಾಡಿದರೂ ನಾನು ಅದನ್ನು ಸಹಿಸಿಕೊಳ್ಳಲ್ಲ’ ಎನ್ನುತ್ತಾರೆ ಕಿರಣ್ ರಾಜ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.