Karnataka Assembly Election: ಮೊದಲ ಮತದಾರರಾಗಿ ಬಂದ 96 ವರ್ಷದ ಹಿರಿಯ ಅಜ್ಜಿ

|

Updated on: May 10, 2023 | 8:07 AM

ಇಂದು (ಮೇ.10) ರಾಜ್ಯದೆಲ್ಲೆಡೆ ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಅದರಂತೆ ಇದೀಗ ಮೈಸೂರಿನ ಚಾಮುಂಡಿಪುರಂ ಮತಗಟ್ಟೆ ಸಂಖ್ಯೆ 233 ರಕ್ಕೆ 96 ವರ್ಷದ ಅಜ್ಜಿ ಗುಂಡೂರಾವ್ ನಗರದ ಬಂಗಾರಮ್ಮ ಆಗಮಿಸಿ ಮತದಾನ ಮಾಡಿದ್ದಾರೆ.

ಮೈಸೂರು: ಇಂದು (ಮೇ.10) ರಾಜ್ಯದೆಲ್ಲೆಡೆ ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಅದರಂತೆ ಇದೀಗ ಮೈಸೂರಿನ ಚಾಮುಂಡಿಪುರಂ ಮತಗಟ್ಟೆ ಸಂಖ್ಯೆ 233 ರಕ್ಕೆ ಆಗಮಿಸಿದ 96 ವರ್ಷದ ಗುಂಡೂರಾವ್ ನಗರದ ಬಂಗಾರಮ್ಮ ಅವರು ಮೊದಲ ಮತದಾರರಾಗಿ ಬಂದು ಮತದಾನ ಮಾಡುವ ಮೂಲಕ ಮಾದರಿಯಾದರು. ಇಂದು ರಾಜ್ಯದ 224 ಕ್ಷೇತ್ರದಲ್ಲಿ ಏಕಕಾಲದಲ್ಲಿ ಮತದಾನ ನಡೆಯುತ್ತಿದ್ದು, ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತದಾನ ಮಾಡುತ್ತಿದ್ದಾರೆ. ಮುಂಜಾನೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಈಗಾಗಲೇ ಮತದಾರರು ಮತಗಟ್ಟೆಗೆ ಬಂದು ಮತ ಹಾಕುತ್ತಿದ್ದಾರೆ.

ಕರ್ನಾಟಕ ಚುನಾವಣೆ 2023 ಲೈವ್​ ಅಪ್ಡೇಟ್ಸ್​

ಇನ್ನಷ್ಟು ಚುನಾವಣಾ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ