Karnataka Exit Poll Results 2023 Highlights: ಚಾಮುಂಡೇಶ್ವರಿ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ವಿರುದ್ಧ ಸಿದ್ದರಾಮಯ್ಯ ಗರಂ

| Updated By: ಅಕ್ಷಯ್​ ಪಲ್ಲಮಜಲು​​

Updated on:May 11, 2023 | 2:35 AM

Karnataka Assembly Election Opinion Poll 2023 Highlights Updates: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಎಕ್ಸಿಟ್​​ ಪೋಲ್ ಅಥವಾ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿವೆ. ಮತಗಟ್ಟೆ ಸಮೀಕ್ಷಾ ವರದಿಗಳ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ದೊರೆಯಲಿದೆ? ಯಾರು ನಿರ್ಣಾಯಕರಾಗಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

Karnataka Exit Poll Results 2023 Highlights: ಚಾಮುಂಡೇಶ್ವರಿ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ವಿರುದ್ಧ ಸಿದ್ದರಾಮಯ್ಯ ಗರಂ
ಚುನಾವಣೋತ್ತರ ಸಮೀಕ್ಷೆ ಫಲಿತಾಂಶ 2023Image Credit source: news9live.com

Karnataka Assembly Election Opinion Poll 2023 Highlights Updates: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಎಕ್ಸಿಟ್​​ ಪೋಲ್ ಅಥವಾ ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಂಡಿವೆ. ಮತಗಟ್ಟೆ ಸಮೀಕ್ಷಾ ವರದಿಗಳ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ದೊರೆಯಲಿದೆ? ಯಾರು ನಿರ್ಣಾಯಕರಾಗಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ. ಮೇ 13ರಂದು ಶನಿವಾರ ಫಲಿತಾಂಶ ಪ್ರಕಟಗೊಳ್ಳಲಿದ್ದು ಸ್ಪಷ್ಟ ಚಿತ್ರಣ ದೊರೆಯಲಿದೆ.

LIVE NEWS & UPDATES

The liveblog has ended.
  • 10 May 2023 10:02 PM (IST)

    Karnataka Exit Poll Results 2023 LIVE: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ. 85%ರಷ್ಟು ಮತದಾನ

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ. 85%ರಷ್ಟು ಮತದಾನವಾಗಿದೆ. ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತದಾನದ ಶೇಕಡಾವಾರು ವಿವರ ಹೀಗಿದೆ.

    178-ಹೊಸಕೋಟೆ ವಿಧಾನಸಭಾ ಕ್ಷೇತ್ರ: 90.86%

    179-ದೇವನಹಳ್ಳಿ ವಿಧಾನಸಭಾ ಕ್ಷೇತ್ರ: 84.61%

    180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ: 84.30%

    181-ನೆಲಮಂಗಲ ವಿಧಾನಸಭಾ ಕ್ಷೇತ್ರ: 79.60%

  • 10 May 2023 09:28 PM (IST)

    Karnataka Exit Poll Results 2023 LIVE: ಬಜರಂಗದಳ ವಿಚಾರ ಒಂದು ವಿವಾದದ ವಿಚಾರವೇ ಅಲ್ಲ: ಸಿದ್ಧರಾಮಯ್ಯ

    ಮೈಸೂರು: ನಾನು ಜನರ ನಾಡಿಮಿಡಿತ ಅರ್ಥಮಾಡಿಕೊಂಡಿರುವುದು ಸರಿಯಿದೆ. ನಾನೇನು ಫಲಿತಾಂಶದ ನಿರೀಕ್ಷೆ ಮಾಡಿದ್ದೆನೋ ಅದೇ ಫಲಿತಾಂಶ ಬರಲಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು. ಕರಾವಳಿ ಭಾಗದಲ್ಲಿ ಈ ಬಾರಿ ನಮ್ಮ ಸೀಟು ಹೆಚ್ಚಾಗಲಿದೆ. ಬಜರಂಗದಳ ವಿಚಾರ ಒಂದು ವಿವಾದದ ವಿಚಾರವೇ ಅಲ್ಲ. ನಾವು ನಮ್ಮ ಪ್ರಣಾಳಿಕೆಯಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ಬಿಜೆಪಿಯವರು ಅದನ್ನು ಅಪಪ್ರಚಾರ ಮಾಡಿದರು ಎಂದು ವಾಗ್ದಾಳಿ ಮಾಡಿದರು.

  • 10 May 2023 09:06 PM (IST)

    Karnataka Exit Poll Results 2023 LIVE: ಈ ಬಾರಿ ಕಾಂಗ್ರೆಸ್​ಗೆ ಬಹುಮತ ಬರಲಿದೆ ಎಂದ ಸಿದ್ದರಾಮಯ್ಯ

    ಮೈಸೂರು: ಈ ಬಾರಿ ಕಾಂಗ್ರೆಸ್​ಗೆ ಬಹುಮತ ಬರಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ನಿವಾಸದಲ್ಲಿ ಮಾತನಾಡಿದ ಅವರು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್​ 130ರಿಂದ 150 ಸ್ಥಾನ ಗೆಲ್ಲುತ್ತೆ. ಕರಾವಳಿ ಭಾಗದಲ್ಲೂ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.

  • 10 May 2023 08:55 PM (IST)

    Karnataka Exit Poll Results 2023 LIVE: ಎಬಿಪಿ-ಸಿವೋಟರ್​​ ಸಮೀಕ್ಷೆ ಪ್ರಕಟ

    ಎಬಿಪಿ-ಸಿವೋಟರ್​​ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ಗೆ 106 ಸ್ಥಾನ, ಬಿಜೆಪಿಗೆ 89 ಸ್ಥಾನ, ಜೆಡಿಎಸ್​ಗೆ 25 ಸ್ಥಾನ ಮತ್ತು ಇತರರಿಗೆ 4 ಸ್ಥಾನ ಸಾಧ್ಯತೆ ಇದೆ.

  • 10 May 2023 08:42 PM (IST)

    Karnataka Exit Poll Results 2023 LIVE: ಹಳೇ ಮೈಸೂರಿನಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ

    ಟಿವಿ9 ಕನ್ನಡ ಸಿ- ವೋಟರ್‌ ಮತದಾನೋತ್ತರ ಸಮೀಕ್ಷೆ ಪ್ರಕಾರ ಹಳೇ ಮೈಸೂರಿನಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧ್ಯತೆ ಇದೆ. ಕಾಂಗ್ರೆಸ್‌ಗೆ 28-32 ಸ್ಥಾನ, ಜೆಡಿಎಸ್‌ಗೆ 19-23, ಬಿಜೆಪಿಗೆ 4, ಇತರರಿಗೆ 3 ಸ್ಥಾನ ಸಾಧ್ಯತೆ ಇದೆ. ಹಳೇ ಮೈಸೂರು ಭಾಗದಲ್ಲಿ ಒಟ್ಟು ಕ್ಷೇತ್ರಗಳ ಸಂಖ್ಯೆ 55.

  • 10 May 2023 08:39 PM (IST)

    Karnataka Exit Poll Results 2023 LIVE: ಗ್ರೌಂಡ್ ರಿಪೋರ್ಟ್‌ ಲಭ್ಯವಾಗಿದೆ, ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ

    ಬೆಂಗಳೂರು: ರಾಜ್ಯದಲ್ಲಿ ಈ ಸಲ ಬದಲಾವಣೆ ಗಾಳಿ ಬೀಸಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ. ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ. ಬೆಲೆ ಏರಿಕೆಯಿಂದ ರಾಜ್ಯದ ಜನ ತತ್ತರಿಸಿದ್ದಾರೆ. ಗ್ರೌಂಡ್ ರಿಪೋರ್ಟ್‌ ಲಭ್ಯವಾಗಿದೆ, ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ, ಯಾವುದೇ ಅನುಮಾನ ಬೇಡ ಎಂದು ಹೇಳಿದರು.

  • 10 May 2023 08:31 PM (IST)

    Karnataka Exit Poll Results 2023 LIVE: ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಜಗದೀಶ್ ಶೆಟ್ಟರ್​ ಹೇಳಿದಿಷ್ಟು

    ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿದೆ. ಬೇರೆ ಯಾವುದೇ ಪಕ್ಷದೊಂದಿಗೆ, ವಿಶೇಷವಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

  • 10 May 2023 08:28 PM (IST)

    Karnataka Exit Poll Results 2023 LIVE: ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ ಸಿಎಂ ಬೊಮ್ಮಾಯಿ

    ಹಾವೇರಿ: ಶಿಗ್ಗಾಂವಿ ಕ್ಷೇತ್ರದ ಕಾರ್ಯಕರ್ತರಿಗೆ ಸಿಎಂ ಬೊಮ್ಮಾಯಿ ಧನ್ಯವಾದ ತಿಳಿಸಿದರು. ಶಿಗ್ಗಾಂವಿ ಕ್ಷೇತ್ರದಿಂದ ನಾಲ್ಕನೆ ಬಾರಿ ಆಯ್ಕೆ ಮಾಡಲು ಶ್ರಮಿಸಿದವರಿಗೆ ಧನ್ಯವಾದ ತಿಳಿಸಿದರು. ಬಳಿಕ ಕಾರ್ಯಕರ್ತರ ಜೊತೆ ಫೋಟೋ ತೆಗಿಸಿಕೊಂಡು ಸಂತಸದಿಂದ ಕೈ ಕುಲುಕಿದರು.

  • 10 May 2023 08:25 PM (IST)

    Karnataka Exit Poll Results 2023 LIVE: ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ

    ಟಿವಿ9 ಕನ್ನಡ ಸಿ-ವೋಟರ್‌ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ. ಸಮೀಕ್ಷೆಯಂತೆ ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಸಾಧ್ಯತೆ ಇದೆ. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 18-22 ಸ್ಥಾನ, ಬಿಜೆಪಿಗೆ 12-16 ಸ್ಥಾನ, ಜೆಡಿಎಸ್‌ಗೆ 0-2, ಇತರರಿಗೆ 0-1 ಸ್ಥಾನ ಸಾಧ್ಯತೆ ಇದೆ.

  • 10 May 2023 08:11 PM (IST)

    Karnataka Exit Poll Results 2023 LIVE: ಟುಡೇಸ್ ಚಾಣಕ್ಯ ಸಮೀಕ್ಷೆಯಂತೆ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ

    ಟುಡೇಸ್ ಚಾಣಕ್ಯ ಸಮೀಕ್ಷೆಯಂತೆ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಾಧ್ಯತೆ ಇದೆ. ಸಮೀಕ್ಷೆಯಂತೆ ಕಾಂಗ್ರೆಸ್‌ಗೆ 120 ಸ್ಥಾನ, ಬಿಜೆಪಿಗೆ 92 ಸ್ಥಾನ, ಜೆಡಿಎಸ್‌ಗೆ 12 ಮತ್ತು ಇತರರಿಗೆ 0-3 ಸ್ಥಾನ ಸಾಧ್ಯತೆ ಇದೆ. ಸರ್ಕಾರ ರಚನೆಗೆ ಮ್ಯಾಜಿಕ್ ನಂಬರ್‌ 113.

  • 10 May 2023 08:09 PM (IST)

    Karnataka Exit Poll Results 2023 LIVE: ಇಂಡಿಯಾಟುಡೆ-ಏಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಕಾಂಗ್ರೆಸ್‌ಗೆ ಅಭೂತಪೂರ್ವ ಬಹುಮತ ಸಾಧ್ಯತೆ

    ಇಂಡಿಯಾಟುಡೆ-ಏಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಟವಾಗಿದೆ. ಸಮೀಕ್ಷೆಯಂತೆ ಕಾಂಗ್ರೆಸ್‌ಗೆ ಅಭೂತಪೂರ್ವ ಬಹುಮತ ಸಾಧ್ಯತೆ ಇದೆ. ಕಾಂಗ್ರೆಸ್‌ಗೆ 122-140 ಸ್ಥಾನ, ಬಿಜೆಪಿಗೆ 62-80 ಸ್ಥಾನ, ಜೆಡಿಎಸ್‌ 20-25, ಇತರರಿಗೆ 0-3 ಸ್ಥಾನ ಸಾಧ್ಯತೆ ಇದೆ. ಸರ್ಕಾರ ರಚನೆಗೆ ಮ್ಯಾಜಿಕ್ ನಂಬರ್‌ 113 ಬೇಕು.

  • 10 May 2023 07:59 PM (IST)

    Karnataka Exit Poll Results 2023 LIVE: ಎಕ್ಸಿಟ್ ಪೊಲ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದ ಸಿಎಂ ಬೊಮ್ಮಾಯಿ

    ಹಾವೇರಿ: ಎಕ್ಸಿಟ್ ಪೊಲ್​​ 100% ಕರೆಕ್ಟ್ ಆಗಿರುವುದಿಲ್ಲ. ರಿಯಲ್ ಫಲಿತಾಶ ಬರುವಾಗ ಪ್ಲಸ್ ಮೈನಸ್ ಆಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಶಿಗ್ಗಾಂವಿ ಪಟ್ಟಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಬರುತ್ತದೆ. ಎಕ್ಸಿಟ್ ಪೊಲ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬಿಜೆಪಿ ಬಹುಮತ ಸಿಗುತ್ತದೆ. ಹಾಗಾಗಿ ಯಾವುದೇ ರೆಸಾರ್ಟ್ ರಾಜಕೀಯ ಮಾಡುವ ಪ್ರಶ್ನೆ ಇಲ್ಲ. ಮೇ 13 ರ ಫಲಿತಾಂಶ ಬರುವ ತನಕ ಕಾದು ನೋಡಿ. ನಾವೇ ಕಿಂಗ್ ಆಗುತ್ತೇವೆ. ಜೆಡಿಎಸ್​ ಕಿಂಗ್ ಮೇಕರ್ ಆಗುವುದಿಲ್ಲ. ಬಿಜೆಪಿಗೆ ಸಂಪುರ್ಣ ಬಹುಮತ ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

  • 10 May 2023 07:55 PM (IST)

    Karnataka Exit Poll Results 2023 LIVE: ಬೆಂಗಳೂರಿನಲ್ಲಿ ಬಿಜೆಪಿಗೆ ಪ್ರಧಾನಿ ಮೋದಿ ಅಲೆ ವರವಾಗುತ್ತಾ?

    Tv9 ಕನ್ನಡ C-Voter​ ಸಮೀಕ್ಷೆ ಪ್ರಕಾರ ಬೃಹತ್ ಬೆಂಗಳೂರಿನಲ್ಲಿ ಬಿಜೆಪಿ ಮೇಲುಗೈ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಬಿಜೆಪಿ 15-19 ಸ್ಥಾನ, ಕಾಂಗ್ರೆಸ್ 11-15 ಸ್ಥಾನ, ಜೆಡಿಎಸ್ 1-4 ಸ್ಥಾನ, ಇತರರು 0-1 ಸ್ಥಾನ ಗೆಲ್ಲೋ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಬಿಜೆಪಿಗೆ ಮೋದಿ ಅಲೆ ವರ ಸಾಧ್ಯತೆ ಎನ್ನಲಾಗುತ್ತಿದೆ.

  • 10 May 2023 07:52 PM (IST)

    Karnataka Exit Poll Results 2023 LIVE: ಇಂಡಿಯಾಟಿವಿ-CNX ಸಮೀಕ್ಷೆ ಪ್ರಕಾರ ಕಾಂಗ್ರೆಸ್​ಗೆ ಬಹುಮತ

    ಇಂಡಿಯಾಟಿವಿ-CNX ಸಮೀಕ್ಷೆ ಪ್ರಕಾರ ಕಾಂಗ್ರೆಸ್​ಗೆ ಬಹುಮತ ಎಂದು ಹೇಳಲಾಗುತ್ತಿದೆ. ಸಮೀಕ್ಷೆ ಪ್ರಕಾರ ಕಾಂಗ್ರೆಸ್​ 110-120 ಸ್ಥಾನ, ಬಿಜೆಪಿ 80-90 ಸ್ಥಾನ, ಜೆಡಿಎಸ್​​ 20-24 ಸ್ಥಾನ, ಇತರರಿಗೆ 1-3 ಸ್ಥಾನ ಸಾಧ್ಯತೆ ಇದೆ.

  • 10 May 2023 07:46 PM (IST)

    Karnataka Exit Poll Results 2023 LIVE: ಬೆಂಗಳೂರಿನಲ್ಲಿ ಶೇಕಡಾ 54.53ರಷ್ಟು ಮತದಾನ

    ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದಿದೆ. ಸಂಜೆ 6ರವರೆಗೆ ಬೆಂಗಳೂರಿನಲ್ಲಿ ಶೇಕಡಾ 54.53ರಷ್ಟು ಮತದಾನವಾಗಿದೆ.

    ಬೆಂಗಳೂರು ಉತ್ತರ ಶೇಕಡಾ 53.03ರಷ್ಟು ಮತದಾನ

    ಬೆಂಗಳೂರು ದಕ್ಷಿಣ ಶೇಕಡಾ 52.28ರಷ್ಟು ಮತದಾನ

    ಬೆಂಗಳೂರು ನಗರದಲ್ಲಿ ಶೇಕಡಾ 57.17ರಷ್ಟು ಮತದಾನ

    ಬೆಂಗಳೂರು ಸೆಂಟ್ರಲ್​ ಶೇಕಡಾ 55.63ರಷ್ಟು ಮತದಾನ

  • 10 May 2023 07:43 PM (IST)

    Karnataka Exit Poll Results 2023 LIVE: ಟೈಮ್ಸ್​ ನೌ-ETG ಸಮೀಕ್ಷೆ ಪ್ರಕಾರ ಕಾಂಗ್ರೆಸ್​ ಬಹುಮತ ಸಾಧ್ಯತೆ

    ಟೈಮ್ಸ್​ ನೌ-ETG ಸಮೀಕ್ಷೆ ಪ್ರಕಾರ ಕಾಂಗ್ರೆಸ್​ ಬಹುಮತ ಸಾಧ್ಯತೆ ಇದೆ. ಕಾಂಗ್ರೆಸ್​ಗೆ 113 ಸ್ಥಾನ, ಬಿಜೆಪಿಗೆ 85 ಸ್ಥಾನ, ಜೆಡಿಎಸ್​​ಗೆ 23 ಸ್ಥಾನ ಮತ್ತು ಇತರರಿಗೆ 2 ಸ್ಥಾನ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  • 10 May 2023 07:41 PM (IST)

    Karnataka Exit Poll Results 2023 LIVE: ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್​ ಹೆಚ್ಚು ಸ್ಥಾನ ಸಾಧ್ಯತೆ

    Tv9 ಕನ್ನಡ C-Voter​ ಸಮೀಕ್ಷೆ ಪ್ರಕಾರ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಹೆಚ್ಚು ಸ್ಥಾನ ಸಾಧ್ಯತೆ ಇದೆ. ಕಾಂಗ್ರೆಸ್​ಗೆ 13 ರಿಂದ 17 ಸ್ಥಾನ, ಬಿಜೆಪಿಗೆ 11 ರಿಂದ 15 ಸ್ಥಾನ, ಜೆಡಿಎಸ್​ 0-2 ಸ್ಥಾನ, ಇತರರಿಗೆ 0-3 ಸ್ಥಾನ.  ಒಟ್ಟು 31 ಸ್ಥಾನಗಳ ಪೈಕಿ ಕಾಂಗ್ರೆಸ್​ಗೆ ಹೆಚ್ಚು ಸ್ಥಾನ ಸಾಧ್ಯತೆ ಇದೆ.

  • 10 May 2023 07:32 PM (IST)

    Karnataka Exit Poll Results 2023 LIVE: ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಬಲ

    ಟಿವಿ9 ಕನ್ನಡ-ಸಿವೋಟರ್‌ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಸಮೀಕ್ಷೆಯಂತೆ ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಗೆ 24-28 ಸ್ಥಾನ, ಕಾಂಗ್ರೆಸ್​​ಗೆ 22-26 ಮತ್ತು ಜೆಡಿಎಸ್‌ಗೆ 1 ಹಾಗೂ ಇತರರಿಗೆ 0-1 ಸ್ಥಾನ ಸಾಧ್ಯತೆ ಇದೆ.

  • 10 May 2023 07:25 PM (IST)

    Karnataka Exit Poll Results 2023 LIVE: ಟಿವಿ9 ಕನ್ನಡ ಸಿವೋಟರ್‌ ಸಮೀಕ್ಷೆ ಇಲ್ಲಿದೆ

    ಟಿವಿ9 ಕನ್ನಡ ಸಿವೋಟರ್‌ ಸಮೀಕ್ಷೆಯಂತೆ ಕಾಂಗ್ರೆಸ್​ಗೆ 100-112 ಸ್ಥಾನ, ಬಿಜೆಪಿಗೆ 83-95 ಸ್ಥಾನ, ಜೆಡಿಎಸ್​ 21-29 ಸ್ಥಾನ, ಇತರರಿಗೆ 2-6 ಸ್ಥಾನ ಸಾಧ್ಯತೆ ಇದೆ.

  • 10 May 2023 07:23 PM (IST)

    Karnataka Exit Poll Results 2023 LIVE: Tv9 ಭಾರತ್​ವರ್ಷ್-PolStrat ಸಮೀಕ್ಷೆ ಪ್ರಕಾರ ಅತಂತ್ರ ಫಲಿತಾಂಶ

    Tv9 ಭಾರತ್​ವರ್ಷ್-PolStrat ಸಮೀಕ್ಷೆ ಪ್ರಕಟವಾಗಿದ್ದು, ಅತಂತ್ರ ಫಲಿತಾಂಶ ಹೊರಬಿದ್ದಿದೆ. Tv9-PolStrat ಸಮೀಕ್ಷೆಯಂತೆ ಬಿಜೆಪಿಗೆ 88-98 ಸ್ಥಾನ, ಕಾಂಗ್ರೆಸ್​ಗೆ 99-110 ಸ್ಥಾನ, ಜೆಡಿಎಸ್​​ಗೆ 21-26 ಸ್ಥಾನ, ಇತರರಿಗೆ 0-4 ಸ್ಥಾನ ಸಾಧ್ಯತೆ ಇದೆ.

  • 10 May 2023 06:54 PM (IST)

    Karnataka Exit Poll Results 2023 LIVE: ನ್ಯೂಸ್ ಆಫ್‌ ನೇಷನ್‌ ಸಮೀಕ್ಷೆಯಂತೆ ಬಿಜೆಪಿಗೆ ಸರಳ ಬಹುಮತ

    ನ್ಯೂಸ್ ಆಫ್‌ ನೇಷನ್‌ ಸಮೀಕ್ಷೆಯಂತೆ ಬಿಜೆಪಿಗೆ ಸರಳ ಬಹುಮತ ಸಿಗುವ ಸಾಧ್ಯತೆ ಇದೆ. ಸಮೀಕ್ಷೆಯಂತೆ, ಬಿಜೆಪಿಗೆ 114 ಸ್ಥಾನ ಸಿಗುವ ಸಾಧ್ಯತೆ ಇದ್ದು, ಕಾಂಗ್ರೆಸ್‌ಗೆ 86 ಸ್ಥಾನ ಸಾಧ್ಯತೆ ಇದೆ. ಜೆಡಿಎಸ್​ಗೆ 21 ಸ್ಥಾನ, ಇತರ 3 ಸ್ಥಾನ ಸಿಗುವ ಸಾಧ್ಯತೆ ಇದೆ.

  • 10 May 2023 06:51 PM (IST)

    Karnataka Exit Poll Results 2023 LIVE: ರಿಪಬ್ಲಿಕ್ ಸಮೀಕ್ಷೆ ಏನು ಹೇಳುತ್ತದೆ

    ರಿಪಬ್ಲಿಕ್‌-PMARQ ಸಮೀಕ್ಷೆಯಂತೆ ಬಿಜೆಪಿಗೆ 85-100 ಸ್ಥಾನ, ಕಾಂಗ್ರೆಸ್‌ಗೆ 94-108, ಜೆಡಿಎಸ್‌ಗೆ 24-32 ಸ್ಥಾನ ಸಿಗುವ ಸಾಧ್ಯತೆ ಇದೆ. ರಿಪಬ್ಲಿಕ್‌-PMARQ ಸಮೀಕ್ಷೆಯಂತೆ ಇತರರಿಗೆ 2-6 ಸ್ಥಾನ ಸಾಧ್ಯತೆ ಇದೆ.

  • 10 May 2023 06:49 PM (IST)

    Karnataka Exit Poll Results 2023 LIVE: ಜನ್‌ಕೀ ಬಾತ್‌ ಸಮೀಕ್ಷೆ ಏನು ಹೇಳುತ್ತೆ?

    ಜನ್‌ಕೀ ಬಾತ್‌ ಸಮೀಕ್ಷೆಯಂತೆ ಬಿಜೆಪಿಗೆ ಬಹುಮತ ಸಾಧ್ಯತೆ ಇದೆ. ಸಮೀಕ್ಷೆ ಪ್ರಕಾರ, ಬಿಜೆಪಿಗೆ 94-117 ಸ್ಥಾನ ಸಿಗುವ ಸಾಧ್ಯತೆ ಇದ್ದು, ಕಾಂಗ್ರೆಸ್​ಗೆ 91-106 ಸ್ಥಾನಗಳು ಸಿಗುವ ಸಾಧ್ಯತೆ ಇದೆ.

  • 10 May 2023 06:41 PM (IST)

    Karnataka Exit Poll Results 2023 LIVE: ಜೀ ನ್ಯೂಸ್​​-ಮ್ಯಾಟ್ರಿಜ್​​ ಮತದಾನೋತ್ತರ ಸಮೀಕ್ಷೆ

    ಜೀ ನ್ಯೂಸ್​​-ಮ್ಯಾಟ್ರಿಜ್​​ ಮತದಾನೋತ್ತರ ಸಮೀಕ್ಷೆ ಪ್ರಕಟಗೊಂಡಿದೆ. ಸಮೀಕ್ಷೆ ಪ್ರಕಾರ ಕಾಂಗ್ರೆಸ್​ 108ರಿಂದ 118, ಬಿಜೆಪಿ 79-89 ಸ್ಥಾನ? ಮತ್ತು JDS​ 25ರಿಂದ 35 ಸ್ಥಾನ ಹಾಗೂ ಇತರರಿಗೆ 2-4 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  • 10 May 2023 06:28 PM (IST)

    Karnataka Exit Poll Results 2023 LIVE: ಇವಿಎಂ ಮತ್ತು ವಿವಿಪ್ಯಾಟ್​ಗಳನ್ನು ಸೀಲ್

    ಕಲಬುರಗಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಮುಕ್ತಾಯವಾಗಿದೆ. ಕಲಬುರಗಿಯ ಮತಗಟ್ಟೆಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್​ಗಳನ್ನು ಸೀಲ್ ಮಾಡಿ ಭದ್ರಪಡಿಸಲಾಗುತ್ತಿದೆ. ಮೇ 13ರಂದು ಮತ ಎಣಿಕೆ ನಡೆಯಲಿದೆ.

  • 10 May 2023 06:18 PM (IST)

    Karnataka Exit Poll Results 2023 LIVE: ಇವಿಎಂ ಪ್ಯಾಕ್ ಮಾಡುತ್ತಿರುವ ಚುನಾವಣಾ ಅಧಿಕಾರಿಗಳು

    ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮುಕ್ತಾಯವಾಗಿದ್ದು, ಮತಗಟ್ಟೆ ಅಧಿಕಾರಿಗಳು ಇವಿಎಂ ಮಷಿನ್ ಸೀಲ್ ಮಾಡುತ್ತಿದ್ದಾರೆ. ಸೀಲ್ ಬಳಿಕ ಪೊಲೀಸ್​ರ ಭದ್ರತೆಯೊಂದಿಗೆ ಸ್ಟ್ರಾಂಗ್ ರೂಮ್​ಗೆ ವಿವಿ ಪ್ಯಾಟ್ ಶಿಫ್ಟ್ ಮಾಡಲಾಗುತ್ತದೆ.

  • 10 May 2023 06:02 PM (IST)

    Karnataka Exit Poll Results 2023 LIVE: ಮತದಾನದ ಅವಧಿ ಅಂತ್ಯ

    ಬೆಂಗಳೂರು: ರಾಜ್ಯದ 224 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನದ ಅವಧಿ ಅಂತ್ಯವಾಗಿದೆ. ಮತಗಟ್ಟೆ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತಿರುವವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಬಹುತೇಕ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯವಾಗಿದೆ. 224 ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆದಿದೆ.

  • 10 May 2023 05:46 PM (IST)

    Kolar Election Live: ಮತಗಟ್ಟೆ ಎದುರು ಮಹಿಳೆಯರ ಮಾರಾಮಾರಿ

    ಕೋಲಾರ: ಮತಗಟ್ಟೆ ಎದುರು ಮಹಿಳೆಯರು ಮಾರಾಮಾರಿ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ಸರ್ಕಲ್ ನ ಬೂತ್ ನಂ 148ರಲ್ಲಿ ನಡೆದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ.

  • 10 May 2023 05:23 PM (IST)

    Davanagere Election Live: ಪತ್ರಕರ್ತರ ಮೇಲೆ ಚುನಾವಣಾ ಸಿಬ್ಬಂದಿ ಹಲ್ಲೆ

    ದಾವಣಗೆರೆ: ಪತ್ರಕರ್ತರ ಮೇಲೆ ಚುನಾವಣಾ ಸಿಬ್ಬಂದಿ ಹಲ್ಲೆ ಹಿನ್ನೆಲೆ ಘಟನೆ ಖಂಡಿಸಿ ಪತ್ರಕರ್ತರಿಂದ ಅರೆ ಬೆತ್ತಲೇ ಪ್ರತಿಭಟನೆ ಮಾಡಿದ್ದಾರೆ. ಹೊನ್ನಾಳಿ ತಾಲೂಕಿನ ಹುಣಸಗಟ್ಟ ಗ್ರಾಮದಲ್ಲಿ‌ ಘಟನೆ ನಡೆದಿದೆ. ಮತದಾನಕ್ಕೆ ಕ್ಯೂನಲ್ಲಿ ನಿಂತವರ ಪೋಟೋ ತೆಗೆಯಲು ಹೋದ ಪತ್ರಕರ್ತ ರಮೇಶ ಎಂಬುವರ ಮೇಲೆ ಚುನಾವಣಾ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಪ್ರಶ್ನೆ ಮಾಡಿದ್ದಕ್ಕೆ ಚುನಾವಣಾ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪತ್ರ ಕರ್ತರು ಆಕ್ರೋಶಗೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದಾರೆ.

  • 10 May 2023 05:14 PM (IST)

    Bengaluru Election Live: ಮತದಾನಕ್ಕೆ ಬಾಕಿ ಉಳಿದಿರೋದು 50 ನಿಮಿಷ ಮಾತ್ರ

    ಬೆಂಗಳೂರು: ಸಂಜೆ 5 ಗಂಟೆ ವೇಳೆಗೆ ಬೆಂಗಳೂರಿನಲ್ಲಿ ಶೇಕಡ 50.91% ಮತದಾನವಾಗಿದ್ದು, ಮತಚಲಾವಣೆಗೆ 50 ನಿಮಿಷ ಮಾತ್ರ ಉಳಿದಿದೆ. ಸಿಲಿಕಾನ್ ಸಿಟಿ ಜನರ ನಿರಾಸಕ್ತಿ ಈ ಬಾರಿ ಶೇಕಾಡವಾರು ಮತದಾನ ಕಡಿಮೆ ಆಗಿದೆ.

    ಬೆಂಗಳೂರು ಉತ್ತರ ಶೇಕಡ 50.20% ಮತದಾನ

    ಬೆಂಗಳೂರು ದಕ್ಷಿಣ 48.42% ಮತದಾನವಾಗಿದೆ

    ಬೆಂಗಳೂರು ಸೆಂಟ್ರಲ್ 51.20% ಮತದಾನವಾಗಿದೆ

    ಬೆಂಗಳೂರು ಅರ್ಬನ್ 52.81% ಮತದಾನವಾಗಿದೆ

  • 10 May 2023 04:50 PM (IST)

    Bellary Election Live: ಮತದಾನ ಕೇಂದ್ರದಲ್ಲಿಯೇ ಹೆರಿಗೆ

    ಬಳ್ಳಾರಿ: ಮತದಾನ ಕೇಂದ್ರದ ಆವರಣದಲ್ಲಿ ತಾಯಿ ಮಗುವಿಗೆ ಜನ್ಮ ನೀಡಿರುವಂತಹ ಅಪರೂಪದ ಘಟನೆಯೊಂದು ಕುರುಗೋಡು ತಾಲೂಕಿನ ಕೊರ್ಲಾಗುಂದಿ ಗ್ರಾಮದ ಮತದಾನ ಕೇಂದ್ರದಲ್ಲಿ ಕಂಡುಬಂದಿದೆ. ಮತದಾನ ಕೇಂದ್ರದಲ್ಲಿಯೇ ಹೆರಿಗೆ ನೋವು ಪ್ರಾರಂಭವಾಗಿದ್ದು, ಕೂಡಲೇ ಪಕ್ಕದ ಕೊಠಡಿ ಗೆ ಕರೆದುಕೊಂಡು ಹೋಗಲಾಗಿದೆ. ಅಷ್ಟರಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

  • 10 May 2023 04:38 PM (IST)

    Uttara Kannada Election Live: ಹೆಚ್ಚುವರಿ 1 ಗಂಟೆ ಅವಕಾಶ ನೀಡಬೇಕೆಂದು ಮತದಾರರ ಒತ್ತಾಯ

    ಉತ್ತರ ಕನ್ನಡ: ಜಿಲ್ಲೆಯ ಹಳಿಯಾಳ ಕ್ಷೇತ್ರದ ಯಲ್ಲಾಪುರ ಮತಗಟ್ಟೆ ಸಂಖ್ಯೆ 101ರಲ್ಲಿ ತಾಂತ್ರಿಕ ದೋಷ ಹಿನ್ನೆಲೆ ಸುಮಾರು 1 ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡಿತ್ತು. ಅಧಿಕಾರಿಗಳ ಎಡವಟ್ಟಿನಿಂದ ಮತಯಂತ್ರ ಹಾಳಾಗಿದೆ. ಮಳೆಯಾದರೆ ಜನರು ವೋಟ್​ ಹಾಕಲು ಹಿಂಜರಿಯುತ್ತಾರೆ. ಹೆಚ್ಚುವರಿ 1 ಗಂಟೆ ಅವಕಾಶ ನೀಡಬೇಕೆಂದು ಮತದಾರರು ಒತ್ತಾಯಿಸಿದ್ದಾರೆ.

  • 10 May 2023 04:25 PM (IST)

    Chikkamagaluru: 20 ದಿನದ‌ ಮಗುವಿನೊಂದಿಗೆ ಬಂದು ಮತದಾನ ಮಾಡಿದ ಬಾಣಂತಿ

    ಚಿಕ್ಕಮಗಳೂರು: 20 ದಿನದ‌ ಮಗುವಿನೊಂದಿಗೆ ಬಂದು ಬಾಣಂತಿ ಮತದಾನ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ಉರ್ದು ಶಾಲೆಯಲ್ಲಿ ಐ.ಜಿ.ರಸ್ತೆ ನಿವಾಸಿ ಚಂದನಾ ಎಂಬ ಬಾಣಂತಿಯಿಂದ ವೋಟಿಂಗ್​ ಮಾಡಿದ್ದಾರೆ.

  • 10 May 2023 04:10 PM (IST)

    Mangalore Election Live: ಬಿಜೆಪಿ, ಪಕ್ಷೇತರ ಅಭ್ಯರ್ಥಿ ಬೆಂಬಲಿಗರ ನಡುವೆ ಗಲಾಟೆ

    ಮಂಗಳೂರು: ಬಿಜೆಪಿ ಬೆಂಬಲಿಗರು, ಪಕ್ಷೇತರ ಅಭ್ಯರ್ಥಿ ಬೆಂಬಲಿಗರ ನಡುವೆ ಗಲಾಟೆ ನಡೆದಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮುದಾಯ ಭವನ ಮತಗಟ್ಟೆ ಬಳಿ ನಡೆದಿದೆ. RSS ಮುಖಂಡ ಹುಬ್ಬಳ್ಳಿ ರಮೇಶ್​ ವಿರುದ್ಧ ಪುತ್ತಿಲ ಬೆಂಬಲಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಟೆಂಟ್​​ಗೆ ಆರ್​​ಎಸ್​ಎಸ್​​ ಮುಖಂಡ ಹುಬ್ಬಳ್ಳಿ ರಮೇಶ್ ಬಂದಿದ್ದಾರೆ. ಈ ವೇಳೆ ರಮೇಶ್ ಭೇಟಿಗೆ ಅರುಣ್ ಕುಮಾರ್​ ಪುತ್ತಿಲ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲಕಾಲ ಬಿಜೆಪಿ, ಪುತ್ತಿಲ ಬೆಂಬಲಿಗರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.

  • 10 May 2023 04:06 PM (IST)

    Bengaluru Election Live: ಮಂಟಪದಿಂದ ಮತಗಟ್ಟೆಗೆ ಬಂದು ಓಟ್ ಹಾಕಿದ ನವದಂಪತಿ

    ಬೆಂಗಳೂರು: ನಗರದಲ್ಲಿ ನವ ದಂಪತಿ ಮತದಾನ ಮಾಡುವ ಮೂಲಕ ಮಾದರಿ ಆಗಿದ್ದಾರೆ. ಮದುವೆ ಮುಗಿದ ಬಳಿಕ ಕಲ್ಯಾಣ ಮಂಟಪದಿಂದ ನೇರವಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದ ನಾಗದೇವನಹಳ್ಳಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಕಿರಣ್, ಹರ್ಷಿತಾ ಜೋಡಿ ಒಟ್ಟಿಗೆ ಮತದಾನ ಮಾಡಿದ ನವದಂಪತಿ.

  • 10 May 2023 03:59 PM (IST)

    Ramanagara Election Live: ಶತಾಯುಷಿ, ಪದ್ಮಶ್ರೀ ಸಾಲುಮರದ ತಿಮಕ್ಕರಿಂದ ಮತದಾನ

    ರಾಮನಗರ: ಶತಾಯುಷಿ, ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮಕ್ಕರಿಂದ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ಲು ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.

  • 10 May 2023 03:40 PM (IST)

    Bengaluru Election Live: ರಾಜ್ಯದಲ್ಲಿ ಶೇಕಡಾ 52.18ರಷ್ಟು ಮತದಾನ

    ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆಯಿಂದಲೇ ಮತದಾನ ಶುರವಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇಕಡಾ 52.18ರಷ್ಟು ಮತದಾನ ನಡೆದಿದೆ.

    ಬೆಂಗಳೂರು ಸೆಂಟ್ರಲ್​ ಶೇಕಡಾ 40.69ರಷ್ಟು, ಬೆಂಗಳೂರು ಉತ್ತರ ಶೇಕಡಾ 41.19ರಷ್ಟು, ಬೆಂಗಳೂರು ದಕ್ಷಿಣ ಶೇಕಡಾ 40.28ರಷ್ಟು ಬೆಂಗಳೂರು ನಗರದಲ್ಲಿ ಶೇಕಡಾ 41.82ರಷ್ಟು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 60.14ರಷ್ಟು, ಬಾಗಲಕೋಟೆ ಜಿಲ್ಲೆಯಲ್ಲಿ ಶೇಕಡಾ 56.42ರಷ್ಟು, ಬೆಳಗಾವಿ ಜಿಲ್ಲೆಯಲ್ಲಿ ಶೇಕಡಾ 53.93ರಷ್ಟು, ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 53.31ರಷ್ಟು,  ಬೀದರ್ ಜಿಲ್ಲೆಯಲ್ಲಿ ಶೇಕಡಾ 50.64ರಷ್ಟು,  ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 49ರಷ್ಟು, ಚಾಮರಾಜನಗರ ಜಿಲ್ಲೆಯಲ್ಲಿ ಶೇಕಡಾ 51.75ರಷ್ಟು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡಾ 58.74ರಷ್ಟು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇಕಡಾ 57.28ರಷ್ಟು, ಚಿತ್ರದುರ್ಗ ಜಿಲ್ಲೆಯಲ್ಲಿ ಶೇಕಡಾ 53.05ರಷ್ಟು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 57.48ರಷ್ಟು, ದಾವಣಗೆರೆ ಜಿಲ್ಲೆಯಲ್ಲಿ ಶೇಕಡಾ 55.80ರಷ್ಟು ಮತದಾನ.

    ಧಾರವಾಡ ಜಿಲ್ಲೆಯಲ್ಲಿ ಶೇಕಡಾ 50.25ರಷ್ಟು, ಗದಗ ಜಿಲ್ಲೆಯಲ್ಲಿ ಶೇಕಡಾ 55.04ರಷ್ಟು, ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 46.18ರಷ್ಟು, ಹಾಸನ ಜಿಲ್ಲೆಯಲ್ಲಿ ಶೇಕಡಾ 59.15ರಷ್ಟು, ಹಾವೇರಿ ಜಿಲ್ಲೆಯಲ್ಲಿ ಶೇಕಡಾ 57.21ರಷ್ಟು, ಕೊಡಗು ಜಿಲ್ಲೆಯಲ್ಲಿ ಶೇಕಡಾ 58.24ರಷ್ಟು, ಕೋಲಾರ ಜಿಲ್ಲೆಯಲ್ಲಿ ಶೇಕಡಾ 54.81ರಷ್ಟು, ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 56.45ರಷ್ಟು, ಮಂಡ್ಯ ಜಿಲ್ಲೆಯಲ್ಲಿ ಶೇಕಡಾ 58.39ರಷ್ಟು, ಮೈಸೂರು ಜಿಲ್ಲೆಯಲ್ಲಿ ಶೇಕಡಾ 52.45ರಷ್ಟು, ರಾಯಚೂರು ಜಿಲ್ಲೆಯಲ್ಲಿ ಶೇಕಡಾ 52.73ರಷ್ಟು, ರಾಮನಗರ ಜಿಲ್ಲೆಯಲ್ಲಿ ಶೇಕಡಾ 63.36ರಷ್ಟು, ಶಿವಮೊಗ್ಗ ಜಿಲ್ಲೆಯಲ್ಲಿ ಶೇಕಡಾ 56.10ರಷ್ಟು, ತುಮಕೂರು ಜಿಲ್ಲೆಯಲ್ಲಿ ಶೇಕಡಾ 58.45ರಷ್ಟು, ಉಡುಪಿ ಜಿಲ್ಲೆಯಲ್ಲಿ ಶೇಕಡಾ 60.29ರಷ್ಟು, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 54.94ರಷ್ಟು, ವಿಜಯನಗರ ಜಿಲ್ಲೆಯಲ್ಲಿ ಶೇಕಡಾ 56.29ರಷ್ಟು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 46.61ರಷ್ಟು ಮತದಾನವಾಗಿದೆ.

  • 10 May 2023 03:14 PM (IST)

    Bengaluru Election Live: ಬೆಂಗಳೂರಿನಲ್ಲಿ ಶೇಕಡ 41.43 ಮತದಾನ

    ಮಧ್ಯಾಹ್ನ 3 ಗಂಟೆ ವೇಳೆಗೆ ಬೆಂಗಳೂರಿನಲ್ಲಿ ಶೇಕಡ 41.43 ಮತದಾನವಾಗಿದೆ.

    ಬೆಂಗಳೂರು ಉತ್ತರ ಶೇಕಡ 40.21% ಮತದಾನ

    ಬೆಂಗಳೂರು ದಕ್ಷಿಣ 40.21% ಮತದಾನವಾಗಿದೆ

    ಬೆಂಗಳೂರು ಸೆಂಟ್ರಲ್ 40.75% ಮತದಾನವಾಗಿದೆ

    ಬೆಂಗಳೂರು ಅರ್ಬನ್ 41.43% ಮತದಾನವಾಗಿದೆ

  • 10 May 2023 03:12 PM (IST)

    Mysore Election Live: ನಟಿ ಮಾಳವಿಕ ಅವಿನಾಶ್ ಮತ ಚಲಾವಣೆ

    ಮೈಸೂರು: ನಟಿ ಮಾಳವಿಕ ಅವಿನಾಶ್ ಮತ ಚಲಾವಣೆ ಮಾಡಿದ್ದಾರೆ. ಮೈಸೂರಿನ ಕೃಷ್ಣಮೂರ್ತಿಪುರಂನ ಗುಬ್ಬಚ್ಚಿ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದ್ದಾರೆ. ಬಳಿಕ ಕಾರ್ಯಕರ್ತರ ಜೊತೆ ನಿಂತು ಸೆಲ್ಫಿಗೆ ಫೋಸ್ ನೀಡಿದ್ದಾರೆ.

  • 10 May 2023 02:59 PM (IST)

    Gadag Election Live: ಮತದಾನಕ್ಕೆ ಬಂದ ಮಹಿಳೆಗೆ ಲಾಠಿ ಏಟು ಆರೋಪ

    ಗದಗ: ಮತದಾನಕ್ಕೆ ಬಂದ ಮಹಿಳೆ ಮೇಲೆ ಪೊಲೀಸರು ಹಲ್ಲೆ ನಡೆಸಿದ ಆರೋಪ ಮಾಡಿದ್ದಾರೆ. ಮುಂಡರಗಿ ತಾಲೂಕಿನ ಶೀರನಹಳ್ಳಿ ಮತಗಟ್ಟೆ ಸಂಖ್ಯೆ 216ರಲ್ಲಿ ಘಟನೆ ನಡೆದಿದ್ದು, ಲಾಠಿಯಿಂದ ಹಲ್ಲೆ ನಡೆಸಿದ್ದಾರೆಂದು ಗ್ರಾಮಸ್ಥೆ ಹುಲಗೆಮ್ಮ ಆರೋಪ ಮಾಡಿದ್ದಾರೆ. ಚುನಾವಣಾಧಿಕಾರಿಗಳು, ಸ್ಥಳೀಯರ ನಡುವೆ ವಾಗ್ವಾದ, ನೂಕಾಟ ತಳ್ಳಾಟವಾಗಿದೆ.

  • 10 May 2023 02:44 PM (IST)

    Belagavi Election Live: ಬೆಳಗಾವಿ ಜಿಲ್ಲೆಯಲ್ಲಿ ಬರೋಬ್ಬರಿ ಒಂಬತ್ತು ಕಡೆ ಮತದಾನ ಸ್ಥಗಿತ

    ಬೆಳಗಾವಿ: ತಾಂತ್ರಿಕ ದೋಷದಿಂದಾಗಿ ಜಿಲ್ಲೆಯಲ್ಲಿ ಬರೋಬ್ಬರಿ ಒಂಬತ್ತು ಕಡೆ ಮತದಾನ ಸ್ಥಗಿತವಾಗಿದೆ.   ಕಿತ್ತೂರು ಪಟ್ಟಣ, ದೇವಗಾಂವ, ಮೂಡಲಗಿ ಪಟ್ಟಣ, ಅರಬಾವಿ, ಕಾದ್ರೋಳ್ಳಿ, ನೇಸರಗಿ, ಉಳ್ಳಿಗೇರಿ, ಅಥಣಿ, ಗಳತಗಾ ಗ್ರಾಮದಲ್ಲಿ ಮತದಾನ ಸ್ಥಗಿತವಾಗಿದೆ. ಕಿತ್ತೂರು ಪಟ್ಟಣದಲ್ಲಿ ಎರಡೂವರೆ ಗಂಟೆಯಿಂದ ಮತದಾನ ಸ್ಥಗಿತವಾಗಿದೆ. ಇನ್ನೂಳಿದ ಮತಗಟ್ಟೆಗಳಲ್ಲಿ ಒಂದು ಗಂಟೆ, ಅರ್ಧ ಗಂಟೆಯಿಂದ ಸ್ಥಗಿತಗೊಂಡಿದೆ. ಮತಗಟ್ಟೆ ಮುಂಭಾಗದಲ್ಲಿ ಕಾದು ಕಾದು ಮತದಾರರು ಸುಸ್ತಾಗಿದ್ದಾರೆ.

  • 10 May 2023 02:40 PM (IST)

    Davanagere Election Live: ದಾವಣಗೆರೆ ‌ಜಿಲ್ಲೆಯಲ್ಲಿ ಶೇಕಡ 40 ಗಡಿ ದಾಟಿದ ಮತದಾನದ ಪ್ರಮಾಣ

    ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆ ‌ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮತದಾನ ಶುರುವಾಗಿದೆ. ಮಧ್ಯಾಹ್ನ ಒಂದು ಗಂಟೆಯವರೆಗೆ ಶೇಕಡಾ 40 ರಷ್ಟು ಮಾತ್ರ ಮತದಾನವಾಗಿದೆ. ಅತಿ ಹೆಚ್ಚು ಮತದಾನ ಜಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ 42 ರಷ್ಟು ಮತದಾನ ದಾಖಲಾಗಿದೆ. ಜಿಲ್ಲೆಯ ಎಳು ವಿಧಾನ ಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದ ಉತ್ತ‌ಮ‌ ಮತದಾನವಾಗಿದೆ.

    • ಜಗಳೂರು-42.%
    • ಹರಿಹರ-40%
    • ದಾವಣಗೆರೆ ಉತ್ತರ-36%
    • ದಾವಣಗೆರೆ ದಕ್ಷಿಣ-32%
    • ಮಾಯಕೊಂಡ -40%
    • ಚನ್ನಗಿರಿ-38%
    • ಹೊನ್ನಾಳಿ-40%
  • 10 May 2023 02:34 PM (IST)

    Vijayapura Election Live: ಇವಿಎಂ ಮಷೀನ್​​ ಪುಡಿಪುಡಿ: 20 ರಿಂದ 25 ಜನ ವಶಕ್ಕೆ

    ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರದ ಮಸಬಿನಾಳದಲ್ಲಿ ಇವಿಎಂ ಮಷೀನ್​​ ಪುಡಿಪುಡಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಾಟೆಯಲ್ಲಿ ಭಾಗಿಯಾದ 20-25 ಜನರನ್ನು ವಶಕ್ಕೆ ಪಡೆದಿದ್ದೇವೆ. ಹೆಚ್ಚುವರಿ EVM, ವಿವಿ ಪ್ಯಾಟ್ ಯಂತ್ರಗಳನ್ನು ಕಾರಿನಲ್ಲಿ ತರಲಾಗುತ್ತಿದೆ. ತಪ್ಪು ಮಾಹಿತಿಯಿಂದ ಚುನಾವಣಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ಧಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆನಂದ್​ಕುಮಾರ್​ ಹೇಳಿದ್ದಾರೆ.

  • 10 May 2023 02:25 PM (IST)

    Bengaluru Election Live: ಬೆಂಗಳೂರಿನ ಯಲಹಂಕದಲ್ಲಿ ನಟಿ ರಾಗಿಣಿ ಮತದಾನ

    ಬೆಂಗಳೂರು: ನಗರದ ಯಲಹಂಕ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 212ರಲ್ಲಿ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಮತದಾನ ಮಾಡಿದ್ದಾರೆ.

  • 10 May 2023 02:12 PM (IST)

    Kalaburagi Election Live: ಮತ ಚಲಾಯಿಸಿದ ಮಲ್ಲಿಕಾರ್ಜುನ ಖರ್ಗೆ

    ಕಲಬುರಗಿ: ನಗರದ ಬಸವ ನಗರದ ಸಮುದಾಯ ಆರೋಗ್ಯ ಕೇಂದ್ರದ ಬೂತ್ ನಂಬರ್ 120ರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪತ್ನಿ ರಾಧಾಬಾಯಿ ಮತ ಚಲಾಯಿಸಿದ್ದಾರೆ. ಮತದಾನದ ಸಮಯದಲ್ಲಿ ಪತ್ನಿ ರಾಧಾಬಾಯಿ ಸಮೀಪ ಬಂದ ವೇಳೆ, ಮಲ್ಲಿಕಾರ್ಜುನ ಖರ್ಗೆಯವರು ದೂರ ಹೋಗುವಂತೆ ಸೂಚಿಸಿದ್ದಾರೆ. ಮತದಾನ ಗೌಪ್ಯತೆ ಹಿನ್ನೆಲೆಯಲ್ಲಿ ದೂರ ನಿಲ್ಲುವಂತೆ ಸೂಚಿಸಿದ್ದಾರೆ.  ನಂತರ ಪತ್ನಿ ಮತ ಚಲಾಯಿಸುವಾಗ ತಾವು ದೂರ ನಿಂತಿದ್ದಾರೆ.

  • 10 May 2023 01:55 PM (IST)

    Hassan Election Live: ಮತ ಚಲಾಯಿಸಿದ ಹೆಚ್​.ಡಿ ದೇವೇಗೌಡ

    ಹಾಸನ: ಜಿಲ್ಲೆಯ ಪಡುವಲಹಿಪ್ಪೆ ಗ್ರಾಮದ ಮತಗಟ್ಟೆ ಸಂಖ್ಯೆ 251 ರಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ, ಪತ್ನಿ ಚನ್ನಮ್ಮ ಅವರು ಮತದಾನ ಮಾಡಿದ್ದಾರೆ.

    #WATCH | JD(S) chief and former Prime Minister HD Devegowda casts his vote for #KarnatakaElections2023 pic.twitter.com/6vqAY7Iwdu

  • 10 May 2023 01:49 PM (IST)

    Uttara Kannada Election Live: ಮತ ಚಲಾಯಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮಗೌಡ

    ಕಾರವಾರ: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದ ಮತಗಟ್ಟೆ ಸಂಖ್ಯೆ 182ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಮತದಾನ ಮಾಡಿದ್ದಾರೆ.

  • 10 May 2023 01:41 PM (IST)

    Raichur Election Live: ಲಿಂಗಸಗೂರಲ್ಲಿ ಕಾಂಗ್ರೆಸ್​, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

    ರಾಯಚೂರು: ಕಾಂಗ್ರೆಸ್​ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ  ಲಿಂಗಸಗೂರು ಪಟ್ಟಣದಲ್ಲಿ ನಡೆದಿದೆ.  ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಕಾರಿಗೆ ಬಿಜೆಪಿ ಪಕ್ಷದ ಬಾವುಟ ಇರುವ ಕಾರಿನಲ್ಲಿ ‌ಮತಗಟ್ಟೆಗೆ ಆಗಮಿಸಿರುವ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಿಜೆಪಿ, ಕಾಂಗ್ರೆಸ್​ ಮುಖಂಡರ ನಡುವೆ ‌ಮಾತಿನ ಚಕಮಕಿ ನಡೆದಿದೆ. ಕೂಡಲೇ ಮಧ್ಯೆ ಪ್ರವೇಶಿಸಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

  • 10 May 2023 01:30 PM (IST)

    Varuna Assembly Constituency: ವರುಣಾ ಕ್ಷೇತ್ರದಲ್ಲಿ ವಿ.ಸೋಮಣ್ಣ ಬೂತ್ ಪರಿಶೀಲನೆಗೆ ವಿರೋಧ

    ಮೈಸೂರು: ವರುಣಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ವಿ.ಸೋಮಣ್ಣ ಅವರು ಬೂತ್ ಪರಿಶೀಲನೆಗೆ ಆಗಮಿಸಿದ ವೇಳೆ ಕಾಂಗ್ರೆಸ್ ಕಾರ್ಯಕರ್ತ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ  ವಾಗ್ವಾದ ನಡೆದಿದೆ.

  • 10 May 2023 01:23 PM (IST)

    Bengaluru Election Live: ಮತ ಚಲಾಯಿಸಿದ ನಟ ಸುದೀಪ್​

    ಬೆಂಗಳೂರು: ಜೆಪಿ ನಗರದ ಆಕ್ಸ್ ಫರ್ಡ್ ಶಾಲೆಯಲ್ಲಿ ನಟ ಕಿಚ್ಚ ಸುದೀಪ್ ಮತದಾನ ಮಾಡಿದ್ದಾರೆ. ಇವರ ಜೊತೆಗೆ ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ.  ​

  • 10 May 2023 01:11 PM (IST)

    Vijayapura Election Live: ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿದ ಗ್ರಾಮಸ್ಥರು

    ವಿಜಯಪುರ: ಗ್ರಾಮಸ್ಥರು ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರು  ಕಾಯ್ದಿರಿಸಲಾಗಿದ್ದ ಇವಿಎಂ ಮಶೀನ್ ಹಾಗೂ ವಿವಿಪ್ಯಾಟ್ ಮಶೀನ್‌ಗಳನ್ನು ಒಡೆದು ಹಾಕಿದ್ದಾರೆ.

  • 10 May 2023 01:06 PM (IST)

    Bengaluru Election Live: ಆ್ಯಂಬುಲೆನ್ಸ್​​ನಲ್ಲಿ ಆಗಮಿಸಿ ವೋಟ್​ ಹಾಕಿದ ರೋಗಿ

    ಬೆಂಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿ ಮತದಾನ ಮಾಡಲು ಆ್ಯಂಬುಲೆನ್ಸ್​​ನಲ್ಲಿ ಆಗಮಿಸಿ ರೋಗಿ ವೋಟ್​ ಹಾಕಿದ್ದಾರೆ. ಆರ್ ಆರ್ ನಗರದ ನಿವಾಸಿ ಶೇಷಾದ್ರಿ (40) ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ತಿಲಕ್ ನಗರದ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮತದಾನ ಮಾಡಲು ಆಂಬ್ಯುಲೆನ್ಸ್​​ನಲ್ಲಿ ಆರ್ ಆರ್ ನಗರಕ್ಕೆ ಬಂದು ಮತದಾನ ಮಾಡಿದ್ದಾರೆ.

  • 10 May 2023 12:57 PM (IST)

    Belagavi Election Live: ಮತದಾನಕ್ಕೂ ಮುನ್ನ ಮತಗಟ್ಟೆ ಆವರಣದಲ್ಲಿ ಸಾವನ್ನಪ್ಪಿದ ವೃದ್ಧೆ

    ಬೆಳಗಾವಿ: ಮತ ಚಲಾಯಿಸಲು ಬಂದಿದ್ದ ವೃದ್ಧೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರ ವ್ಯಾಪ್ತಿಯ ಯರಝರ್ವಿಯಲ್ಲಿ ನಡೆದಿದೆ. ಯರಝರ್ವಿ ಗ್ರಾಮದ  70 ವರ್ಷದ ಪಾರವ್ವ ಸಿದ್ನಾಳ ಮತದಾನಕ್ಕೂ ಮುನ್ನ ಮತಗಟ್ಟೆ ಆವರಣದಲ್ಲಿ ಲೋ ಬಿಪಿಯಿಂದ ಕುಸಿದು ಬಿದ್ದು ನಿಧನರಾಗಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದೆ.

  • 10 May 2023 12:48 PM (IST)

    Hassan Election Live: ಮತದಾನ ಮಾಡಿ ಹೊರ ಬಂದ‌ ಬಳಿಕ ವ್ಯಕ್ತಿ ಸಾವು

    ಹಾಸನ: ಮತದಾನ ಮಾಡಿ ಹೊರ ಬಂದ‌ ಬಳಿಕ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ. ಚಿಕ್ಕೋಲೆ ಗ್ರಾಮದ ಜಯಣ್ಣ(49) ಮೃತ ದುರ್ದೈವಿ. ಚಿಕ್ಕೋಲೆ ಗ್ರಾಮದಲ್ಲಿ ಮತ ಚಲಾಯಿಸಿ ಹೊರಗೆ ಬಂದ ಬಳಿಕ ಹೃದಯಾಘಾತ ಮತಗಟ್ಟೆ ಆವರಣದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

  • 10 May 2023 12:41 PM (IST)

    Nelamangala Election Live: ಮತ ಚಲಾಯಿಸಿದ ಲೈಂಗಿಕ ಅಲ್ಪ ಸಂಖ್ಯಾತರು

    ನೆಲಮಂಗಲ: ನೆಲಮಂಗಲ ನಗರದ ಮತಗಟ್ಟೆ ಸಂಖ್ಯೆ 175ರಲ್ಲಿ ಸುಮಾರು 20 ಜನ ಲೈಂಗಿಕ ಅಲ್ಪಸಂಖ್ಯಾತರು ಮತದಾನ ಮಾಡಿದ್ದಾರೆ. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಧುರಿ ನಾವು ನಮ್ಮ ಹಕ್ಕನ್ನು ನಾವು ಚಲಾವಣೆ ಮಾಡಿದ್ದೇವೆ. ಎಲ್ಲರೂ ಮತ ಚಲಾವಣೆ ಮಾಡಬೇಕು. ಯಾವುದೇ ಸರ್ಕಾರಗಳು ಬಂದರೂ ನಮನ್ನು ಕಡೆಗಣಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯ ಸ್ಥಾನಮಾನ ನೀಡಬೇಕು. ಸರ್ಕಾರ ಈಗ ನೀಡಿರುವ ಅವಕಾಶವನ್ನು ಮತ್ತಷ್ಟು ಹೆಚ್ಚಿಸಬೇಕು. ಮತದಾನ ಮಾಡದವರು ವೇಸ್ಟ್, ನಮ್ಮ ದೇಶದಲ್ಲಿ ಇರಬಾರದು. ದಯಬಿಟ್ಟು ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಕರೆ ನೀಡಿದರು.

  • 10 May 2023 12:34 PM (IST)

    Bengaluru Election Live: ಮತ ಚಲಾಯಿಸಿದ ವಿಶೇಷ ಚೇತನ ವೃದ್ಧೆ

    ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಮತಗಟ್ಟೆಯಲ್ಲಿ ವಿಶೇಷ ಚೇತನ ಅಂಧ 101 ವರ್ಷದ ವೃದ್ಧೆ ಮತದಾನ ಮಾಡಿದ್ದಾರೆ.  ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತಾನಾಡಿದ ಅವರು ನನ್ನ ಹಕ್ಕನ್ನು ನಾನು ಚಲಾಯಿಸಿದ್ದೇನೆ. ಹೀಗಾಗಿ ಎಲ್ಲರೂ ಮತದಾನ ಮಾಡಿ. ಎಲ್ಲರೂ ಬಂದು ಮತದಾನ ಮಾಡಬೇಕು. ವೋಟ್ ಹಾಕದೆ ಇದ್ದರೆ ಅವರು ಇದ್ದು ಇಲ್ಲದಂತೆ ಎಂದು ಹೇಳಿದ್ದಾರೆ.

  • 10 May 2023 12:23 PM (IST)

    Karnataka Elections 2023 Voting Day Live Updates: ಸಾಗರ ವಿಧಾನಸಭಾ ಕ್ಷೇತ್ರದಲ್ಲಿ 101 ವರ್ಷದ ವೃದ್ಧೆ ಮತದಾನ

    ಸಾಗರ ವಿಧಾನಸಭಾ ಕ್ಷೇತ್ರದಲ್ಲಿ 101 ವರ್ಷದ ವೃದ್ಧೆ ಮತ ಚಲಾಯಿಸಿದ್ದಾರೆ. ಸಾಗರ ವಿಧಾನಸಭಾ ಕ್ಷೇತ್ರದ 157ನೇ ಬೂತ್ ನಲ್ಲಿ ಅವಿನಹಳ್ಳಿ ನಿವಾಸಿ ಬಿಬಿ ಜಾನ್ ಮತದಾನ ಮಾಡಿದರು. ಮತದಾನ ಮಾಡುವ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನ ನಡೆದರು ಸಹ ಮತ ಕೇಂದ್ರಕ್ಕೆ ಬಂದು ಮತದಾನ ಮಾಡಿದ್ದಾರೆ.

  • 10 May 2023 12:17 PM (IST)

    Karnataka Elections 2023 Voting Day Live Updates: ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರಿಂದ ಮತದಾನ

    ಮಂಗಳೂರು: ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರ ತಂದೆ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ (107) ಮತದಾನ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಬಂಗಬೆಟ್ಟು ಪಬ್ಲಿಕ್ ಶಾಲೆಯ ಮತಗಟ್ಟೆಗೆ ಬಂದು ಮತಚಲಾಯಿಸಿದ್ದಾರೆ.

  • 10 May 2023 12:10 PM (IST)

    Karnataka Elections 2023 Voting Day Live Updates: ದೋನಹಳ್ಳಿ ಗ್ರಾಮದ ಜನರಿಂದ ಮತದಾನ ಬಹಿಷ್ಕಾರ

    ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೋನಹಳ್ಳಿ ಗ್ರಾಮದ ಜನರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಹಾಸನ ಗ್ರಾಮಕ್ಕೆ ಮೂಲ ಸೌಲಭ್ಯ ಇಲ್ಲಾ ಎಂದು ಗ್ರಾಮದಲ್ಲಿರೋ 120 ಮತದಾರರು ಮತದಾನ ಬಹಿಷ್ಕರಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಬಂದ ಅಧಿಕಾರಿಗಳನ್ನೂ ಗ್ರಾಮಸ್ಥರಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಸಮಸ್ಯೆ ಬಗ್ಗೆ ಈಗಾಗಲೆ ಗಮನಕ್ಕೆ ತಂದರೂ ಏನೂ ಕ್ರಮ ಆಗಿಲ. ಈಗ ಯಾಕೆ ಮತ ಹಾಕಿ ಎಂದು ಹೇಳಲು ಬಂದಿದ್ದೀರಾ ಎಂದು ಗ್ರಾಮಸ್ಥರು ಅಸಮಾಧಾನ ಹೊರ ಹಾಕಿದ್ದಾರೆ.

  • 10 May 2023 12:06 PM (IST)

    Karnataka Elections 2023 Voting Day Live Updates: ಮತದಾನ ಮಾಡಿದ ಲೈಂಗಿಕ ಅಲ್ಪಸಂಖ್ಯಾತರು

    ನೆಲಮಂಗಲ ನಗರದ ಮತಗಟ್ಟೆ ಸಂಖ್ಯೆ 175ರಲ್ಲಿ ಸುಮಾರು 20 ಜನ ಲೈಂಗಿಕ ಅಲ್ಪಸಂಖ್ಯಾತರು ಮತದಾನ ಮಾಡಿದರು. ಈ ವೇಳೆ ಮಾತನಾಡಿದ ಮಾಧುರಿ ಎಂಬುವವರು, ನಾವು ನಮ್ಮ ಹಕ್ಕು ಚಲಾವಣೆ ಮಾಡಿದ್ದೇವೆ. ಎಲ್ಲರೂ ಮತ ಚಲಾವಣೆ ಮಾಡಬೇಕು. ಯಾವುದೇ ಸರ್ಕಾರಗಳು ಬಂದ್ರು ನಮನ್ನ ಕಡೆಗಣಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯ ಸ್ಥಾನ ಮಾನ ನೀಡಬೇಕು. ಸರ್ಕಾರ ಈಗ ನೀಡಿರುವ ಅವಕಾಶವನ್ನ ಮತ್ತಷ್ಟು ಹೆಚ್ಚಿಸಬೇಕು. ಮತದಾನ ಮಾಡದವರು ವೇಸ್ಟ್, ನಮ್ಮ ದೇಶದಲ್ಲಿ ಇರಬಾರದು. ದಯಬಿಟ್ಟು ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನ ಚಲಾಯಿಸಿ ಎಂದರು.

  • 10 May 2023 11:58 AM (IST)

    BengaluruElections 2023 Voting Live: ಬೆಂಗಳೂರಲ್ಲಿ ಈವರೆಗೆ ಶೇ.17.74 ರಷ್ಟು ಮತದಾನ

    ಬೆಂಗಳೂರು: ಬೆಂಗಳೂರಿನಲ್ಲಿ ಬೆಳಗ್ಗೆ 11ರವರೆಗೆ ಶೇಕಡಾ 17.74ರಷ್ಟು ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್​​​ನಲ್ಲಿ ಬರುವ ಚಾಮರಾಜಪೇಟೆ ಕ್ಷೇತ್ರದಲ್ಲಿ ಶೇ. 16, ಚಿಕ್ಕಪೇಟೆ ಕ್ಷೇತ್ರದಲ್ಲಿ ಶೇ. 18, ಗಾಂಧಿನಗರ ಕ್ಷೇತ್ರದಲ್ಲಿ ಶೇ. 17, ರಾಜಾಜಿನಗರ ಕ್ಷೇತ್ರದಲ್ಲಿ ಶೇ. 20, ಆರ್.ಆರ್. ನಗರ ಕ್ಷೇತ್ರದಲ್ಲಿ ಶೇ. 17, ಶಾಂತಿನಗರ ಶೇ. 16, ಶಿವಾಜಿನಗರ ಕ್ಷೇತ್ರದಲ್ಲಿ ಶೇ. 17 ರಷ್ಟು ಮತದಾನವಾಗಿದೆ.

    ಬೆಂಗಳೂರು ಉತ್ತರದ ಸಿ.ವಿ ರಾಮನ್​ನಗರ ಶೇ. 15, ಹೆಬ್ಬಾಳ ಶೇ. 20, ಕೆ.ಆರ್. ಪುರ ಶೇ. 19, ಮಹಾಲಕ್ಷ್ಮೀ ಲೇಔಟ್ ಶೇ 20, ಮಲ್ಲೇಶ್ವರಂ ಶೇ. 21, ಪುಲಿಕೇಶಿನಗರ ಶೇ. 18, ಸರ್ವಜ್ಞನಗರ ಶೇ. 15 ರಷ್ಟು ಮತದಾನವಾಗಿದೆ. ಬೆಂಗಳೂರು ದಕ್ಷಿಣದ  ಬಿಟಿಎಂ ಲೇಔಟ್ ಶೇ. 17, ಬಸವನಗುಡಿ ಶೇ. 19, ಬೊಮ್ಮನಹಳ್ಳಿ ಶೇ. 18, ಗೋವಿಂದರಾಜನಗರ ಶೇ. 19, ಜಯನಗರ ಶೇ. 20, ಪದ್ಮನಾಭನಗರ ಶೇ. 20, ವಿಜಯನಗರ ಶೇ. 16 ರಷ್ಟು ಮತದಾನವಾಗಿದೆ. ಬೆಂಗಳೂರು ನಗರದ ಆನೇಕಲ್ ಕ್ಷೇತ್ರದ ಶೇ. 13, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇ. 17, ಬ್ಯಾಟರಾಯನಪುರ ಶೇ. 17, ದಾಸರಹಳ್ಳಿ ಶೇ. 15, ಮಹಾದೇವಪುರ ಶೇ. 17, ಯಲಹಂಕ ಶೇ. 19, ಯಶವಂತಪುರ ಶೇ. 20 ರಷ್ಟು ಮತದಾನವಾಗಿದೆ.

  • 10 May 2023 11:48 AM (IST)

    Karnataka Elections 2023 Voting Live: ರಾಜ್ಯದಲ್ಲಿ ಈವರೆಗೆ ಶೇ 20.99 ರಷ್ಟು ಮತದಾನ

    ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ರಾಜ್ಯದಲ್ಲಿ ಶೇ.20.99ರಷ್ಟು ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್​ ಶೇಕಡಾ 19.30ರಷ್ಟು, ಬೆಂಗಳೂರು ಉತ್ತರ ಶೇಕಡಾ 17.50ರಷ್ಟು,  ಬೆಂಗಳೂರು ದಕ್ಷಿಣ ಶೇಕಡಾ 19.18ರಷ್ಟು,  ಬೆಂಗಳೂರು ನಗರದಲ್ಲಿ ಶೇಕಡಾ 17.72ರಷ್ಟು, ಬಾಗಲಕೋಟೆ ಜಿಲ್ಲೆಯಲ್ಲಿ ಶೇಕಡಾ 23.44ರಷ್ಟು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 20.23ರಷ್ಟು, ಬೆಳಗಾವಿ ಜಿಲ್ಲೆಯಲ್ಲಿ ಶೇಕಡಾ 20.76ರಷ್ಟು, ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 23.56ರಷ್ಟು, ಬೀದರ್ ಜಿಲ್ಲೆಯಲ್ಲಿ ಶೇಕಡಾ 20.54ರಷ್ಟು,  ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 20.66ರಷ್ಟು, ಚಾಮರಾಜನಗರ ಜಿಲ್ಲೆಯಲ್ಲಿ ಶೇಕಡಾ 16.77ರಷ್ಟು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡಾ 21.46ರಷ್ಟು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇಕಡಾ 22.29ರಷ್ಟು ಮತದಾನವಾಗಿದೆ.

    ಚಿತ್ರದುರ್ಗ ಜಿಲ್ಲೆಯಲ್ಲಿ ಶೇಕಡಾ 18.56ರಷ್ಟು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 28.46ರಷ್ಟು, ದಾವಣಗೆರೆ ಜಿಲ್ಲೆಯಲ್ಲಿ ಶೇಕಡಾ 21.32ರಷ್ಟು,  ಧಾರವಾಡ ಜಿಲ್ಲೆಯಲ್ಲಿ ಶೇಕಡಾ 20.82ರಷ್ಟು, ಗದಗ ಜಿಲ್ಲೆಯಲ್ಲಿ ಶೇಕಡಾ 21.14ರಷ್ಟು,  ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 17.89ರಷ್ಟು,  ಹಾಸನ ಜಿಲ್ಲೆಯಲ್ಲಿ ಶೇಕಡಾ 22.18ರಷ್ಟು, ಹಾವೇರಿ ಜಿಲ್ಲೆಯಲ್ಲಿ ಶೇಕಡಾ 19.44ರಷ್ಟು,  ಕೊಡಗು ಜಿಲ್ಲೆಯಲ್ಲಿ ಶೇಕಡಾ 26.49ರಷ್ಟು, ಕೋಲಾರ ಜಿಲ್ಲೆಯಲ್ಲಿ ಶೇಕಡಾ 19.87ರಷ್ಟು, ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 21.46ರಷ್ಟು, ಮಂಡ್ಯ ಜಿಲ್ಲೆಯಲ್ಲಿ ಶೇಕಡಾ 19.56ರಷ್ಟು, ಮೈಸೂರು ಜಿಲ್ಲೆಯಲ್ಲಿ ಶೇಕಡಾ 19.34ರಷ್ಟು, ರಾಯಚೂರು ಜಿಲ್ಲೆಯಲ್ಲಿ ಶೇಕಡಾ 22.48ರಷ್ಟು,  ರಾಮನಗರ ಜಿಲ್ಲೆಯಲ್ಲಿ ಶೇಕಡಾ 25.21ರಷ್ಟು, ಶಿವಮೊಗ್ಗ ಜಿಲ್ಲೆಯಲ್ಲಿ ಶೇಕಡಾ 22.75ರಷ್ಟು,  ತುಮಕೂರು ಜಿಲ್ಲೆಯಲ್ಲಿ ಶೇಕಡಾ 22.06ರಷ್ಟು, ಉಡುಪಿ ಜಿಲ್ಲೆಯಲ್ಲಿ ಶೇಕಡಾ 30.26ರಷ್ಟು, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 25.46ರಷ್ಟು,  ವಿಜಯನಗರ ಜಿಲ್ಲೆಯಲ್ಲಿ ಶೇಕಡಾ 21.07ರಷ್ಟು,  ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 18.84ರಷ್ಟು ಮತದಾನವಾಗಿದೆ.

  • 10 May 2023 11:42 AM (IST)

    Bengaluru Election Live: ಅಮೇರಿಕಾದಿಂದ ಬಂದು ಮತ ಹಾಕಿದ ಯುವತಿ

    ಬೆಂಗಳೂರು: ಬಸವನಗುಡಿ ಕ್ಷೇತ್ರದ ಯುವತಿ ಮೇಘನಾ ಅಮೇರಿಕಾದಿಂದ ಬಂದು ಮತ ಹಾಕಿದ್ದಾರೆ.

  • 10 May 2023 11:20 AM (IST)

    Mysore Election Live: ಮತ ಚಲಾಯಿಸಿದ ನವದಂಪತಿ

    ಮೈಸೂರು: ಪಿರಿಯಾಪಟ್ಟಣದಲ್ಲಿ ನೂತನ ವಧು ವರರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಪಿರಿಯಾಪಟ್ಟಣದಲ್ಲಿ ಮದುಮಗ ಬಿಪಿನ್ ಕೆ ಎನ್, ಪತ್ನಿ ಅಕ್ಷತಾ ಪಿ ಜೊತೆಗೆ ಮತಗಟ್ಟೆಗೆ ಆಗಮಿಸಿದರು. ಇವರೊಂದಿಗೆ ಬಿಪಿನ್​ರವರ ತಂದೆ ಕೆಎಸ್ ನಾಗೇಂದ್ರ ತಾಯಿ ಸಿಎಸ್ ಗೀತಾ ಆಗಮಿಸಿ ಮೂರು ಜನ ಮತದಾನ ಮಾಡಿದರು.

  • 10 May 2023 11:17 AM (IST)

    Yadgir Election Live: ಮತ ಚಲಾಯಿಸಿದ 105 ವರ್ಷದ ಅಜ್ಜಿ

    ಯಾದಗಿರಿ: ಜಿಲ್ಲೆಯ ಶಹಾಪುರ‌ ಮತಕ್ಷೇತ್ರ ನಗನೂರ ಗ್ರಾಮದಲ್ಲಿ ಶತಾಯುಷಿ ಅಜ್ಜಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ದೇವಕ್ಕಮ್ಮ (105) ಮೊಮ್ಮಗನ ಜೊತೆ ಕಾರಿನಲ್ಲಿ ಬಂದು ಮತ ಚಲಾಯಿಸಿದ್ದಾರೆ.

  • 10 May 2023 11:09 AM (IST)

    Kalaburgi Election Live: ಆಳಂದ ಕ್ಷೇತ್ರದಲ್ಲಿ ಈವರೆಗೆ ಶೇ.18ರಷ್ಟು ಮತದಾನ

    ಕಲಬುರಗಿ: ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು, ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿದೆ. ಆಳಂದ ಕ್ಷೇತ್ರದಲ್ಲಿ ಬೆಳಗ್ಗೆ ಈವರೆಗೆ ಶೇ.18ರಷ್ಟು ಮತದಾನವಾಗಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಶೇ. 13.45ರಷ್ಟು ಮತದಾನವಾಗಿದೆ.

  • 10 May 2023 11:03 AM (IST)

    Mysore Election Live: ಮತದಾನ ಮಾಡಿದ ನಟ ಡಾಲಿ ಧನಂಜಯ್​​

    ಹಾಸನ: ಜಿಲ್ಲೆಯ ಅರಸಿಕೇರಿಯ ಕಾಳೇನಹಳ್ಳಿಯಲ್ಲಿ ನಟ ಧನಂಜಯ್ ಕುಟುಂಬಸ್ಥರ ಜೊತೆ ಆಗಮಿಸಿ ಮತದಾನ ಮಾಡಿದ್ದಾರೆ.

  • 10 May 2023 10:56 AM (IST)

    Mysore Election Live: ಮತ ಚಲಾಯಿಸಿದ ಸಿದ್ದರಾಮಯ್ಯ

    ಮೈಸೂರು: ಮೈಸೂರು ತಾಲೂಕಿನ ಸಿದ್ದರಾಮನಹುಂಡಿ ಗ್ರಾಮದಲ್ಲಿ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಮತದಾನ ಮಾಡಿದ್ದಾರೆ.

  • 10 May 2023 10:52 AM (IST)

    Mysore Election Live: ಮತದಾನ ಮಾಡಿದ ಚುನಾವಣಾ ರಾಯಭಾರಿ ಜಾವಗಲ್ ಶ್ರೀನಾಥ್

    ಮೈಸೂರು: ನಗರದ ಕುವೆಂಪುನಗರದ ಜ್ಞಾನಗಂಗಾ ಶಾಲೆ ಮತಗಟ್ಟೆ ನಂ. 26ರಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮತದಾನ ಮಾಡಿದ್ದಾರೆ. ಮೈಸೂರು ಜಿಲ್ಲಾ ಚುನಾವಣಾ ರಾಯಭಾರಿ ಜಾವಗಲ್ ಶ್ರೀನಾಥ್ ಅವರು ಸರತಿಸಾಲಿನಲ್ಲಿ ಆಗಮಿಸಿ ಮತದಾನ ಮಾಡಿದ್ದಾರೆ.

  • 10 May 2023 10:46 AM (IST)

    Mysore Election Live: ಮತ ಚಲಾಯಿಸಿದ ಯದುವೀರ ಕೃಷ್ಣದತ್ತ ಚಾಮರಾಜ​ ಒಡೆಯರ್

    ಮೈಸೂರು: ನಗರದ ಕೆ ಆರ್ ಮೊಹಲ್ಲಾದ ಶ್ರೀಕಾಂತ ಶಾಲೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ​ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ಮತದಾನ ಮಾಡಿದ್ದಾರೆ.

  • 10 May 2023 10:41 AM (IST)

    Vijayanagar Election Live: ಮತದಾನ ಮಾಡಿದ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮೀಜಿ

    ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜಯಿನಿಯ ಶ್ರೀ ಮರುಳಾಸಿದ್ದೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 238ರಲ್ಲಿ ಉಜ್ಜಯಿನಿ ಪೀಠದ ಜಗದ್ಗುರು  ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಮತದಾನ ಮಾಡಿದ್ದಾರೆ. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಲ್ಲರೂ ತಪ್ಪದೇ ಮತ ಚಲಾವಣೆ ಮಾಡುವಂತೆ ಮನವಿ ಮಾಡಿದ್ದಾರೆ.

  • 10 May 2023 10:35 AM (IST)

    Kanakapura Assembly Election Live: ಮತದಾನ ಮಾಡಿದ ಡಿಕೆ ಶಿವಕುಮಾರ್​​

    ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ಮತಗಟ್ಟೆ ಸಂಖ್ಯೆ 245ರಲ್ಲಿ ಮತದಾನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಮತದಾನ ಮಾಡಿದ್ದಾರೆ.  ಪತ್ನಿ ಉಷಾ, ಪುತ್ರ ಆಕಾಶ್, ಪುತ್ರಿ ಆಭರಣ, ಸಹೋದರ ಡಿ.ಕೆ.ಸುರೇಶ್ ಜೊತೆ ಆಗಮಿಸಿ ಡಿ.ಕೆ.ಶಿವಕುಮಾರ್ ಮತದಾನ ಮಾಡಿದ್ದಾರೆ.

  • 10 May 2023 10:28 AM (IST)

    Dakshina Kannada Election Live: ಮತ ಚಲಾಯಿಸಿದ ಡಾ.ಡಿ.ವಿರೇಂದ್ರ ಹೆಗ್ಗಡೆ

    ಮಂಗಳೂರು: ಕುಟುಂಬ ಸಮೇತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮಂಜುನಾಥೇಶ್ವರ ಅನುಧಾನಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಮತದಾನ ಮಾಡಿದ್ದಾರೆ.

  • 10 May 2023 10:24 AM (IST)

    Hubli Election Live: ಮತಚಲಾಯಿಸಿದ ಪ್ರಲ್ಹಾದ ಜೋಶಿ

    ಹುಬ್ಬಳ್ಳಿ: ಕರ್ನಾಟಕ ವಿಧಾನಸಭಾ ಚುನಾವಣೆಯ ನಿಮಿತ್ತ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ನಗರದ ನಾಗಶೆಟ್ಟಿಕೊಪ್ಪದ ವಿವೇಕಾನಂದನಗರದ ರೋಟರಿ ಶಾಲೆಯಲ್ಲಿ ಮತ ಚಲಾಯಿಸಿದರು‌‌.

  • 10 May 2023 10:21 AM (IST)

    Bengaluru Election Live: ಬೆಂಗಳೂರಲ್ಲಿ ಮತದಾದನ ಮಾಡಿದ ನಿರ್ಮಲಾನಂದನಾಥ ಸ್ವಾಮೀಜಿ

    ಬೆಂಗಳೂರು:ವಿಜಯನಗರದ ಆದಿಚುಂಚನಗಿರಿ ಶಾಲೆ ಮತಗಟ್ಟೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಯವರು ಮತದಾನ ಮಾಡಿದ್ದಾರೆ.

  • 10 May 2023 10:14 AM (IST)

    Kalaburagi Election Live: ಬಿಜೆಪಿ ಪರ ಮತ ಹಾಕಿಸಿದ ಆರೋಪ, ಬಿಎಲ್​ಓ ಬದಲಾವಣೆ

    ಕಲಬುರಗಿ: ಬಿಜೆಪಿ ಪರ ಮತ ಹಾಕಿಸುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದಲ್ಲಿನ ಮತಗಟ್ಟೆ ಅಧಿಕಾರಿಯನ್ನು ಬದಲಾವಣೆ ಮಾಡಲಾಗಿದೆ. ಮತಗಟ್ಟೆ ಸಿಬ್ಬಂದಿ ವಿರುದ್ಧ ಕಾಂಗ್ರೆಸ್ ಏಜೆಂಟ್ ಆಕ್ಷೇಪಣೆ ವ್ಯಕ್ತಪಡಿಸಿದ ಹಿನ್ನೆಲೆ ಕೂಡಲೇ ಮತಗಟ್ಟೆಯ ಓರ್ವ ಬಿಎಲ್​ಓ ಅನ್ನು ಮೇಲಾಧಿಕಾರಿಗಳು ಬದಲಾವಣೆ ಮಾಡಿದ್ದಾರೆ.

  • 10 May 2023 10:03 AM (IST)

    Bengaluru Election Live: ಮದಾನ ಮಾಡಿದ ನಟ ವಿನೋದ್​ ರಾಜ್​​

    ನೆಲಮಂಗಲ: ನಗರದ ಮೈಲನಹಳ್ಳಿ ಮತಗಟ್ಟೆ 107ರಲ್ಲಿ ನಟ ವಿನೋದ್ ರಾಜ್ ಮತದಾನ ಮಾಡಿದ್ದಾರೆ.  ಕಳೆದ ಬಾರಿ ಮತದಾನ ಪ್ರಮಾಣ ಕಡಿಮೆ‌ ಆಗಿತ್ತು. ಹಾಗೆ ಆಗಬಾರದು. ಹಾಗೆ ಆದರೆ ಬ್ರಿಟಿಷರ್ ತರಹ ದೇಶವನ್ನು ರಾಜ್ಯವನ್ನ ಬೇರೆಯವರು ಆಳ್ವಿಕೆ ಮಾಡೋಕೆ ಅವಕಾಶ ಆಗುತ್ತೆ. ಎಲ್ಲರೂ ಮತದಾನ ಮಾಡಿ ಮನವಿ ಮಾಡಿದರು.

  • 10 May 2023 09:57 AM (IST)

    Karnataka Elections 2023 Voting Live: ಮತ ಚಲಾಯಿಸಿದ ಜಗದೀಶ್​ ಶೆಟ್ಟರ್​​

    ಹುಬ್ಬಳ್ಳಿ: ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್​  ಶೆಟ್ಟರ್ ಮತದಾನ ಮಾಡಿದ್ದಾರೆ. ಕೇಶ್ವಾಪುರ ಎಸ್‌ಬಿ‌ಐ ಶಾಲೆಯ ಬೂತ್​​​ ಸಂಖ್ಯೆ 125 ಮತಗಟ್ಟೆಗೆ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದ್ದಾರೆ.

  • 10 May 2023 09:52 AM (IST)

    Karnataka Elections 2023 Voting Live: ರಾಜ್ಯದಲ್ಲಿ ಈವರೆಗೆ ಶೇ. 8.15ರಷ್ಟು ಮತದಾನ

    ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 8.15ರಷ್ಟು ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್​ ಶೇಕಡಾ 8ರಷ್ಟು, ಬೆಂಗಳೂರು ಉತ್ತರ ಶೇಕಡಾ 8ರಷ್ಟು, ಬೆಂಗಳೂರು ದಕ್ಷಿಣ ಶೇಕಡಾ 7ರಷ್ಟು, ಬಾಗಲಕೋಟೆ ಜಿಲ್ಲೆಯಲ್ಲಿ ಶೇಕಡಾ 9ರಷ್ಟು,  ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 8ರಷ್ಟು,  ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇಕಡಾ 9ರಷ್ಟು, ಬೆಳಗಾವಿ ಜಿಲ್ಲೆಯಲ್ಲಿ ಶೇಕಡಾ 8ರಷ್ಟು, ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 9ರಷ್ಟು, ಬೀದರ್ ಜಿಲ್ಲೆಯಲ್ಲಿ ಶೇಕಡಾ 8ರಷ್ಟು, ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 8ರಷ್ಟು,  ಚಾಮರಾಜನಗರ ಜಿಲ್ಲೆಯಲ್ಲಿ ಶೇಕಡಾ 6ರಷ್ಟು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡಾ 10ರಷ್ಟು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇಕಡಾ 9ರಷ್ಟು,  ಚಿತ್ರದುರ್ಗ ಜಿಲ್ಲೆಯಲ್ಲಿ ಶೇಕಡಾ 6ರಷ್ಟು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 12ರಷ್ಟು, ದಾವಣಗೆರೆ ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ಧಾರವಾಡ ಜಿಲ್ಲೆಯಲ್ಲಿ ಶೇಕಡಾ 8ರಷ್ಟು, ಗದಗ ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ಹಾಸನ ಜಿಲ್ಲೆಯಲ್ಲಿ ಶೇಕಡಾ 9ರಷ್ಟು, ಹಾವೇರಿ ಜಿಲ್ಲೆಯಲ್ಲಿ ಶೇಕಡಾ 8ರಷ್ಟು, ಕೊಡಗು ಜಿಲ್ಲೆಯಲ್ಲಿ ಶೇಕಡಾ 11ರಷ್ಟು, ಕೋಲಾರ ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 8ರಷ್ಟು,  ಮಂಡ್ಯ ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ಮೈಸೂರು ಜಿಲ್ಲೆಯಲ್ಲಿ ಶೇಕಡಾ 6ರಷ್ಟು,  ರಾಯಚೂರು ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ರಾಮನಗರ ಜಿಲ್ಲೆಯಲ್ಲಿ ಶೇಕಡಾ 8ರಷ್ಟು,  ಶಿವಮೊಗ್ಗ ಜಿಲ್ಲೆಯಲ್ಲಿ ಶೇಕಡಾ 9ರಷ್ಟು,  ತುಮಕೂರು ಜಿಲ್ಲೆಯಲ್ಲಿ ಶೇಕಡಾ 8ರಷ್ಟು, ಉಡುಪಿ ಜಿಲ್ಲೆಯಲ್ಲಿ ಶೇಕಡಾ 13ರಷ್ಟು,  ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 10ರಷ್ಟು, ವಿಜನಗರ ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 7ರಷ್ಟು ಮತದಾನವಾಗಿದೆ.

  • 10 May 2023 09:35 AM (IST)

    Karnataka Elections 2023 Voting Live: ರಾಜ್ಯದಲ್ಲಿ ಈವರೆಗೆ ಶೇ.7.88 ರಷ್ಟು ಮತದಾನ

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು (ಮೇ.10) ಮತದಾನ ನಡೆದಿದ್ದು, ಈವರೆಗೆ ಶೇ. 7.88 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

  • 10 May 2023 09:30 AM (IST)

    Chamundeshwari Assembly Constituency: ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

    ಮೈಸೂರು: ಜಿಲ್ಲೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಏಳಿಗೆಹುಂಡಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಈ ವೇಳೆ ಗ್ರಾಮಸ್ಥರ ಮನವೊಲಿಸಲು ಚುನಾವಣಾ ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕೆ ಗ್ರಾಮಸ್ಥರು 5 ವರ್ಷಗಳಲ್ಲಿ ಗ್ರಾಮಕ್ಕೆ ರಸ್ತೆ ಸಂಪರ್ಕ ಮಾಡಿ ಕೊಟ್ಟಿಲ್ಲ.  ಕ್ಷೇತ್ರದ ಶಾಸಕ ಜಿಟಿ ದೇವೇಗೌಡ, ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಸಹ ಭೇಟಿ ಕೊಟ್ಟಿಲ್ಲ. ಹೀಗಿದ್ದಾಗ ನಾವು ಏಕೆ ಮತ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.  ನಮ್ಮದು ಕೊನೆಯ ಗ್ರಾಮ ಎಂದು ಯಾರು ತಿರುಗಿಯೂ ನೋಡಲ್ಲ. ಈ ಹಿನ್ನೆಲೆ ನಾವೆಲ್ಲ ವೋಟ್ ಮಾಡಬಾರದು ಎಂದು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.

  • 10 May 2023 09:25 AM (IST)

    Teradal Assembly Election Live: ಮತದಾನ ಮಾಡಿದ ನಟಿ ಉಮಾಶ್ರೀ

    ಬಾಗಲಕೋಟೆ: ಜಿಲ್ಲೆಯ ತೇರಳದಾಳ ಕ್ಷೇತ್ರ ವ್ಯಾಪ್ತಿಯ ರಬಕವಿ ರಬಕವಿಯ ಸರ್ಕಾರಿ ಉರ್ದು ಶಾಲೆಯ ಮತಗಟ್ಟೆ ಸಂಖ್ಯೆ 83ರಲ್ಲಿ ಮಾಜಿ ಸಚಿವೆ, ನಟಿ ಉಮಾಶ್ರೀ ಮತದಾನ ಮಾಡಿದ್ದಾರೆ.

  • 10 May 2023 09:13 AM (IST)

    Chikkamagaluru Election Live: ಮತದಾನ ಮಾಡಿದ ಮದುಮಗಳು

    ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯಲ್ಲಿ ಮುಹೂರ್ತಕ್ಕೂ ಮುನ್ನಮಧುಮಗಳ ಮತದಾನ ಮಾಡಿದ್ದಾಳೆ.

  • 10 May 2023 09:10 AM (IST)

    Bengaluru Election Live: ಮತದಾನ ಮಾಡಿದ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌

    ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್​ ಅವರು ಸರ್ ಎಂ.ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಮಾಡಿದ್ದಾರೆ. ಪತ್ನಿ ವನಿತಾ ಸೂದ್​ ಜೊತೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ.

  • 10 May 2023 09:07 AM (IST)

    Shiggaon Assembly Election Live: ಮತ ಚಲಾಯಿಸಿದ ಸಿಎಂ ಬೊಮ್ಮಾಯಿ

    ಹಾವೇರಿ: ಜಿಲ್ಲೆಯ ಶಿಗ್ಗಾಂವಿಯ ಮತಗಟ್ಟೆ ಸಂಖ್ಯೆ 102ರಲ್ಲಿ ಕುಟುಂಬ ಸಮೇತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮತದಾನ ಮಾಡಿದ್ದಾರೆ.

  • 10 May 2023 09:05 AM (IST)

    Belagavi Election Live: ಮತಚಲಾಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್​

    ಬೆಳಗಾವಿ: ವಿಜಯನಗರದ ಮರಾಠಿ ಶಾಲೆಯ ಮತಗಟ್ಟೆ ಸಂಖ್ಯೆ 60ರಲ್ಲಿ ಕಾಂಗ್ರೆಸ್​ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್​ ಮತದಾನ ಮಾಡಿದ್ದಾರೆ. ಕುಟುಂಬಸ್ಥರ ಜೊತೆ ಆಗಮಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಮತ ಚಲಾಯಿಸಿದ್ದಾರೆ.

  • 10 May 2023 09:01 AM (IST)

    Karnataka Election Voting Live: ಹುಬ್ಬಳ್ಳಿ ಮತಗಟ್ಟೆ 67 ರಲ್ಲಿ ಆರಂಭವಾಗದ ಮತದಾನ

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಮತಗಟ್ಟೆ 67 ರಲ್ಲಿ ಮತದಾನ ಆರಂಭವಾಗಿಲ್ಲ. ಮತದಾನ ಆರಂಭವಾಗದ ಹಿಬ್ನಲೆ ಅಧಿಕಾರಿಗಳೊಂದಿಗೆ ಸಾರ್ವಜನಿಕರ ನಡುವೆ ವಾಗ್ವಾದ ನಡೆದಿದೆ.

  • 10 May 2023 08:46 AM (IST)

    Karnataka Election Voting Live: ಮತಗಟ್ಟೆ ಅಧಿಕಾರಿಗಳ ವಿರುದ್ಧ ಮತದಾರರ ಆಕ್ರೋಶ

    ಬೆಂಗಳೂರು: ನಗರದ ಯಶವಂತಪುರದ ರೋಟರಿ ಮತಗಟ್ಟೆಯಲ್ಲಿ ಗಲಾಟೆ ನಡೆದಿದೆ. ಮತದಾನ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮತದಾರರು ಗಲಾಟೆ ಮಾಡಿದ್ದು, ಮತಗಟ್ಟೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 10 May 2023 08:43 AM (IST)

    Karnataka Election Voting Live: ಮತಚಲಾಯಿಸಿದ 90 ವರ್ಷದ ವೃದ್ಧೆ

    ಬೆಂಗಳೂರು: ಹೆಬ್ಬಾಳ, ಆರ್ ಟಿ ನಗರದಲ್ಲಿವಾಕರ್ ಹಿಡಿದು ಬಂದು 90 ವರ್ಷದ ವೃದ್ದೆ ಮತ ಚಲಾಯಿಸಿದ್ದಾರೆ.

  • 10 May 2023 08:40 AM (IST)

    Karnataka Election Voting Live: ಮತದಾನ ಮಾಡಿದ ನಟ ಗಣೇಶ್​​ ದಂಪತಿ

    ಬೆಂಗಳೂರು: ಆರ್​.ಆರ್​​​.ನಗರದ ಮೌಂಟ್​ ಕಾರ್ಮೆಲ್​ ಕಾಲೇಜಿನಲ್ಲಿ ನಟ ಗಣೇಶ್​​ ದಂಪತಿ ಮತದಾನ ಮಾಡಿದ್ದಾರೆ.

  • 10 May 2023 08:36 AM (IST)

    Karnataka Election 2023 Voting Day Live Updates: ಚೌಡಾಪುರ ಗ್ರಾಮದ ಮತಗಟ್ಟೆ ಬಳಿ ವಾಮಾಚಾರ

    ಬಾಗಲಕೋಟೆ: ಮುಧೋಳ ವಿಧಾನಸಭಾ ಕ್ಷೇತ್ರದ ಚೌಡಾಪುರ ಗ್ರಾಮದ ಮತಗಟ್ಟೆ ಬಳಿ ರಾತ್ರಿ ವಾಮಾಚಾರ ಮಾಡಿರುವ ಆರೋಪ ಕೇಳಿಬಂದಿದೆ.  ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ವಿರುದ್ದ ವಾಮಾಚಾರ ಮಾಡಲು ಇಬ್ಬರು ವ್ಯಕ್ತಿಗಳು ಚೀಲದಲ್ಲಿ ವಾಮಾಚಾರದ ವಸ್ತುಗಳನ್ನು ತಂದಿದ್ದರು ಎನ್ನಲಾಗುತ್ತಿದೆ. ಈ ವೇಳೆ ಗ್ರಾಮದ ಕೆಲವರು ನೋಡಿ, ವಾಮಾಚಾರ ಮಾಡಿಸಲು ಬಂದಿದ್ದವರನ್ನು ತರಾಟೆಗೆ ತೆಗೆದುಕೊಂಡು ಕಳಿಸಿದ್ದಾರೆ. ಗೋವಿಂದ ಕಾರಜೋಳ ಅವರಿಗೆ ಮತಗಳು ಬಾರದಿರಲಿ ಎಂದು ವಾಮಚಾರ ಮಾಡಿಸಲು ಬಂದಿದ್ರು ಎನ್ನುವ ಆರೋಪ ಕೇಳಿಬಂದಿದೆ.

  • 10 May 2023 08:31 AM (IST)

    Karnataka Election 2023 Voting Day Live Updates: ನಟ ರಮೇಶ್ ಅರವಿಂದ್ ಮತದಾನ

    ಬೆಂಗಳೂರು: ಬನಶಂಕರಿಯ ಬಿಎನ್​ಎಮ್​ ಶಾಲೆ ಬೂತ್ ನಂ.145ರಲ್ಲಿ ನಟ ರಮೇಶ್ ಅರವಿಂದ್ ಮತದಾನ ಮಾಡಿದ್ದಾರೆ.

  • 10 May 2023 08:24 AM (IST)

    Karnataka Election 2023 Voting Day Live Updates: ಮತದಾನ ಮಾಡಿ ಫೋಟೋ ಹರಿಬಿಟ್ಟ ಮತದಾರ

    ಗೌಪ್ಯ ಮತದಾನದ ನಿಯಮ ಉಲ್ಲಂಘನೆಯಾಗಿದೆ. ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದಲ್ಲಿ ಮತದಾರ ಮತದಾನ ಮಾಡಿ ಫೋಟೋ ಹರಿಬಿಟ್ಟಿದ್ದಾರೆ. ಕೈ ಅಭ್ಯರ್ಥಿ ಸಿದ್ದು ಕೊಣ್ಣೂರಿಗೆ ವೋಟ್ ಹಾಕಿ, ಫೋಟೋ ತೆಗೆದುಕೊಂಡಿದ್ದಾರೆ. ಸದ್ಯ ಫೋಟೊ ವೈರಲ್ ಆಗಿದೆ.

  • 10 May 2023 08:22 AM (IST)

    Karnataka Election 2023 Voting Day Live Updates: ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಶ್ರೀಗಳಿಂದ ಮತದಾನ

    ಹುಬ್ಬಳ್ಳಿಯ ಮೂರು ಸಾವಿರ ಮಠದ ಶಾಲೆಯ ಮತಗಟ್ಟೆಯಲ್ಲಿ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಮತದಾನ ಮಾಡಿದರು.

  • 10 May 2023 08:20 AM (IST)

    Karnataka Election 2023 Voting Day Live Updates: ಮತದಾನ ಮಾಡಿದ ಸುಧಾ ಮೂರ್ತಿ, ನಾರಾಯಣಮೂರ್ತಿ

    ಜಯನಗರ ಬಿಇಎಸ್ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮತ ಚಲಾಯಿಸಿದರು.

  • 10 May 2023 08:16 AM (IST)

    Karnataka Election 2023 Voting Day Live Updates: ದೈಹಿಕ ತೊಂದರೆ ಇದ್ದರೂ ಮತಗಟ್ಟೆಯಲ್ಲೇ ಮತದಾನ ಮಾಡಿದ ಅಜ್ಜ

    ದೈಹಿಕ ತೊಂದರೆ ಇದ್ರು 87 ವರ್ಷದ ವಯೋವೃದ್ದ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಕಲಬುರಗಿ ನಗರದ ಎನ್ ವಿ ಶಾಲೆಯ ಬೂತ್ ಗೆ ಆಗಮಿಸಿ ಡಾ.ಸಂಗಪ್ಪ ಅನ್ನೋ ವೃದ್ದ ಕುಟುಂಬದವರ ಸಹಾಯದಿಂದ ಮತದಾನ ಮಾಡಿದರು. ಉತ್ತಮ ಸರ್ಕಾರ ಬರಬೇಕು ಅಂದ್ರೆ ಎಲ್ಲರು ಬಂದು ಮತ ಹಾಕಬೇಕು ಅಂತ ಮನವಿ ಮಾಡಿದರು.

  • 10 May 2023 08:14 AM (IST)

    Karnataka Election 2023 Voting Day Live Updates: ಗೊರವಿಗೊಂಡನಹಳ್ಳಿ ಮತಗಟ್ಟೆ ಸಂಖ್ಯೆ 101ರಲ್ಲಿ ಮತಯಂತ್ರ ದೋಷ

    ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗೊರವಿಗೊಂಡನಹಳ್ಳಿ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದು ಮತದಾನ ಆರಂಭವಾಗಿಲ್ಲ. ಬೆಳಗ್ಗೆ 7ಗಂಟೆಯಿಂದ ಮತದಾರರು ಕಾಯುತ್ತಿದ್ದಾರೆ.

  • 10 May 2023 08:13 AM (IST)

    Karnataka Election 2023 Voting Day Live Updates: ದಂಪತಿಗಳ ಸಮೇತ ಆಗಮಿಸಿ ಮತ ಚಲಾಯಿಸಿದ ರೇಣುಕಾಚಾರ್ಯ

    ಹೊನ್ನಾಳಿ ನಗರದ ಹಿರೇಮಠದಲ್ಲಿರುವ ಶ್ರೀ ಚನ್ನಕೇಶವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂ 105 ರಲ್ಲಿ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇಣುಕಾಚಾರ್ಯ ಹಾಗೂ ಪತ್ನಿ ಸುಮಾ ರೇಣುಕಾಚಾರ್ಯ ಮತ ಚಲಾಯಿಸಿದರು.

  • 10 May 2023 08:01 AM (IST)

    Karnataka Election Voting Live: ಮತದಾನ ಮಾಡಿದ ಸುಧಾಕರ್​​

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದ ಮತಗಟ್ಟೆಯಲ್ಲಿ ಡಾ.ಕೆ.ಸುಧಾಕರ್ ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ.

  • 10 May 2023 08:00 AM (IST)

    Karnataka Election Voting Live: ಎಂ.ಕೃಷ್ಣಪ್ಪ- ಮತದಾರರ ನಡುವೆ ವಾಗ್ವಾದ

    ಬೆಂಗಳೂರು: ಬನಶಂಕರಿ ಎರಡನೇ ಹಂತ ಬೂತ್ ನಂ.145ರ ಬಿಎನ್​ಎಮ್​ ಶಾಲೆಯಲ್ಲಿ ಗಲಾಟೆ ನಡೆದಿದೆ. ಮತ ಚಲಾಯಿಸಲು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ ಕ್ಯೂ ಬಿಟ್ಟು ಹೋಗಿದ್ದಾರೆ.  ಈ ವೇಳೆ ಮತದಾರರು ಮತ್ತು ಎಂ.ಕೃಷ್ಣಪ್ಪ ನಡುವೆ ವಾಗ್ವಾದ ನಡೆದಿದೆ. ಜನಪ್ರತಿನಿಧಿಯಾಗಿ ಜನರಿಗೆ ಸಹಾಯ ಮಾಡಬೇಕು. ಅದನ್ನು ಬಿಟ್ಟು ನೀವು ವೋಟ್ ಹಾಕಿ ಓಡಿ ಹೋದರೆ ಹೇಗೆ? ಕ್ಯೂನಲ್ಲಿ ನಿಂತಿರುವವರು ನಾವು ಏನು ಮಾಡಬೇಕು ಅಂತ ಜನರು ಗರಂ ಆಗಿದ್ದಾರೆ.

  • 10 May 2023 07:51 AM (IST)

    Karnataka Election Voting Live: ವಿಜಯಪುರದಲ್ಲಿ ಬಸನಗೌಡ ಪಾಟೀಲ್​ ಯತ್ನಾಳ ಮತದಾನ

    ವಿಜಯಪುರ: ನಗರದ ಎಸ್.ಎಸ್.ಪ್ರೌಢಶಾಲೆಯ ಮತಗಟ್ಟೆ 61ರಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ ಮತದಾನ ಮಾಡಿದ್ದಾರೆ.

  • 10 May 2023 07:47 AM (IST)

    Karnataka Election Voting Live: ಮತ ಚಲಾಯಿಸಿದ ಬಿಎಸ್​ ಯಡಿಯೂರಪ್ಪ

    ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಮತಗಟ್ಟೆ ಸಂಖ್ಯೆ 134ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದ್ದಾರೆ. ಇದೇ ವೇಳೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಬಿ.ವೈ.ವಿಜಯೇಂದ್ರ ಮತದಾನ ಮಾಡಿದ್ದಾರೆ.

  • 10 May 2023 07:44 AM (IST)

    Karnataka Election Voting Live: ಚಿತ್ರದುರ್ಗದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ

    ಚಿತ್ರದುರ್ಗ: ಚಿತ್ರದುರ್ಗದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಜೋಗಿಮಟ್ಟಿ ರಸ್ತೆಯ ಮತಗಟ್ಟೆ ಸಂಖ್ಯೆ 103ರ ಬಳಿ ದೇಶದ್ರೋಹಿಗಳ ಪರ ಪಕ್ಷಕ್ಕೆ ಮತ ಹಾಕದಂತೆ ಮತದಾರರಿಗೆ ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪ ಮಾಡುತ್ತಿದ್ದಾರೆ.

  • 10 May 2023 07:40 AM (IST)

    Karnataka Election Voting Live: ರಾಯಚೂರಿನ ಪಿಂಕ್ ಮತಗಟ್ಟೆಯಲ್ಲಿ ತಾಂತ್ರಿಕ ದೋಷ

    ರಾಯಚೂರು: ನಗರದ ಪಿಂಕ್ ಮತಗಟ್ಟೆಯಲ್ಲಿ ತಾಂತ್ರಿಕ ದೋಷ ಅಣಕು ಮತದಾನ ಪೂರ್ಣಗೊಂಡಿಲ್ಲ. ಈ ಹಿನ್ನೆಲೆ ಕೆಲ ಕಾಲ ಸಿಬ್ಬಂದಿ ಪರದಾಡಿದ್ದಾರೆ. ಅರ್ಧ ಗಂಟೆಯಿಂದ ಮತದಾನ ಸ್ಥಗಿತಗೊಂಡಿತ್ತು.

  • 10 May 2023 07:37 AM (IST)

    Karnataka Election Voting Live: ಮಚಲಾಯಿಸಿದ ರಂಭಾಪುರಿ ಶ್ರೀಗಳು

    ಚಿಕ್ಕಮಗಳೂರು: ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದ ರಂಭಾಪುರಿ ಜಗದ್ಗುರುಗಳು ರಂಭಾಪುರಿ ಪೀಠ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.

  • 10 May 2023 07:33 AM (IST)

    Karnataka Election Voting Live: ಸಚಿವೆ ನಿರ್ಮಲಾ ಸೀತಾರಾಮನ್​ ಮತದಾನ

    ಬೆಂಗಳೂರು: ಜಯನಗರದ ಬಿಇಎಸ್ ಮತಗಟ್ಟೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತದಾನ ಮಾಡಿದ್ದಾರೆ.

  • 10 May 2023 07:31 AM (IST)

    Karnataka Election Voting Live: ಕನಕಗಿರಿ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಯಲ್ಲಿ ತಾಂತ್ರಿಕ ದೋಷ

    ಕೊಪ್ಪಳ: ಜಿಲ್ಲೆಯ ಕನಕಗಿರಿ ಕ್ಷೇತ್ರದ ಮುಸ್ಟೂರು ಕ್ಯಾಂಪ್​ನ ಬೂತ್ ನಂಬರ್ 229ನ ಇವಿಎಂನಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಮತಗಟ್ಟೆಯ ಅಧಿಕಾರಿಗಳು ಇವಿಎಂ ಪರೀಶಿಲಿಸುತ್ತಿದ್ದಾರೆ.

  • 10 May 2023 07:27 AM (IST)

    Karnataka Election Voting Live: ಮತಚಲಾಯಿಸಿದ ಪ್ರಕಾಶ್​​ ರಾಜ್​

    ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ ಶಾಂತಿನಗರದಲ್ಲಿರುವ ಸೇಂಟ್ ಜೋಸೆಫ್ ಶಾಲೆಯಲ್ಲಿ ಮತದಾನ ಮಾಡಿದರು.

  • 10 May 2023 07:20 AM (IST)

    Karnataka Election Voting Live: ಮತಚಲಾಯಿಸಿದ 96 ವರ್ಷದ ಅಜ್ಜಿ

    ಮೈಸೂರು: ಮೈಸೂರಿನ ಚಾಮುಂಡಿಪುರಂ ಮತಗಟ್ಟೆಯಲ್ಲಿ 96 ವರ್ಷದ ಹಿರಿಯ ಅಜ್ಜಿ ಮತಚಲಾಯಿಸಿದ್ದಾರೆ. ಗುಂಡೂರಾವ್ ನಗರದ ಬಂಗಾರಮ್ಮ ಎಂಬುವರು ಮತಗಟ್ಟೆ ಸಂಖ್ಯೆ 233ರಲ್ಲಿ ಮತ ಚಲಾಯಿಸಿದ್ದಾರೆ.

  • 10 May 2023 07:14 AM (IST)

    Karnataka Election Voting Live: ಮತಚಲಾಯಿಸುವಂತೆ ಅಮಿತ್​ ಶಾ ಮನವಿ

    ನವದೆಹಲಿ: ಮತದಾನದ ದಿನದಂದು, ಕರ್ನಾಟಕದ ನಮ್ಮ ಸಹೋದರ ಮತ್ತು ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಾಜ್ಯದಲ್ಲಿ ಉತ್ತಮ ಆಡಳಿತ, ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಮತದಾನ ಮಾಡಿ ಎಂದು ವಿನಂತಿಸುತ್ತೇನೆ. ನಿಮ್ಮ ಒಂದು ಮತವು ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದನ್ನು ಮುಂದುವರಿಸುವ ಜನಪರ ಮತ್ತು ಪ್ರಗತಿಪರ ಸರ್ಕಾರವನ್ನು ಖಚಿತಪಡಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಟ್ವೀಟ್​ ಮಾಡಿದ್ದಾರೆ.

  • 10 May 2023 07:11 AM (IST)

    Karnataka Election Voting Live: ಮತದಾನ ಮಾಡುವಂತೆ ಪ್ರಧಾನಿ ಮೋದಿ ಮನವಿ

    ನವದೆಹಲಿ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಎಲ್ಲರೂ ಮತದಾನ ಮಾಡುವಂತೆ ರಾಜ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್​​ ಮೂಲಕ ಮನವಿ ಮಾಡಿದ್ದಾರೆ.

  • 10 May 2023 07:07 AM (IST)

    Karnataka Election Voting Live: ಮತಚಲಾಯಿದ ಸಿದ್ಧಗಂಗಾ ಶ್ರೀಗಳು

    ಬೆಂಗಳೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗ ಶ್ರೀಗಳು ಸಿದ್ಧಗಂಗಾ ಮಠದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದ್ದಾರೆ.

  • 10 May 2023 06:57 AM (IST)

    Karnataka Election Voting Live: ನಿಮ್ಮ ಮತಗಟ್ಟೆಯ ವಿವರ ತಿಳಿಯಲು ಇಲ್ಲಿದೆ ಚುನಾವಣಾ ಆಯೋಗದ ಆ್ಯಪ್​

    ಬೆಂಗಳೂರು: ಕೆಲವೇ ನಿಮಿಷದಲ್ಲಿ ಮತದಾನ ಆರಂಭವಾಗಲಿದ್ದು, ಮತದಾನಕ್ಕೆ ಬರುವವರಿಗೆ ಸಮಸ್ಯೆಯಾಗದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳ ವಿವರವನ್ನ ಚುನಾವಣಾ ಆಯೋಗದ ಆ್ಯಪ್ ಮೂಲಕವು ಪಡೆದುಕೊಳ್ಳಬಹುದಾಗಿದೆ. ಚುನಾವಣಾ ಹೆಸರಿನಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಆಪ್ಲಿಕೇಶನ್ ಇದ್ದು, ಈ ಆ್ಯಪ್ ನಲ್ಲಿ search by epic no ಅಥವ search by name ಆಯ್ಕೆ ಮಾಡಿ. ನಂತರ ಓಟರ್ ಐಡಿ ನಂಬರ್ ಹಾಕಿದರೆ ನೀವು ಯಾವ ಮತಗಟ್ಟೆಗೆ ಹೋಗಬೇಕು ಎನ್ನುವ ಸಂಪೂರ್ಣ ಮಾಹಿತಿ ನೀಡಲಿದ್ದು, ಜಿಪಿಎಸ್ ಆನ್ ಲೈನ್ ಮ್ಯಾಪ್ ಆಧಾರಿಸಿಯು ಲೋಕೇಶನ್ ಮೂಲಕವು ಮತಗಟ್ಟೆಗೆ ಹೋಗಬಹುದಾಗಿದೆ.

  • 10 May 2023 06:55 AM (IST)

    Karnataka Election Voting Live: ಈ ಬಾರಿ ಹೊಸದಾಗಿ 16,04,285 ಮತದಾರರು ಸೇರ್ಪಡೆ

    ಬೆಂಗಳೂರು: ಈ ಬಾರಿ ಹೊಸದಾಗಿ 16,04,285 ಮತದಾರರು ಸೇರ್ಪಡೆಯಾಗಿದ್ದಾರೆ. ರಾಜ್ಯದಲ್ಲಿ 18ರಿಂದ 19 ವಯಸ್ಸಿನ 11,71,558 ಯುವ ಮತದಾರರಿದ್ದು, ಯುವಕರು 645140, ಯುವತಿಯರು 526237, ಇತರೆ 181 ಮತದಾರರಿದ್ದಾರೆ.

  • 10 May 2023 06:51 AM (IST)

    Karnataka Election Voting Live: ಮತದಾನ ಮಾಡಿದವರಿಗೆ ಉಚಿತ ರೇಷ್ಮೆ ಸಸಿ

    ಚಿಕ್ಕಬಳ್ಲಾಫುರ: ಶಿಡ್ಲಘಟ್ಟ ನಗರದಲ್ಲಿ ರೇಷ್ಮೆ ಕೃಷಿ ವಸ್ತುಪ್ರದರ್ಶನ ಮತಗಟ್ಟೆ ಗಮನ ಸೆಳೆಯುತ್ತಿದೆ. ಮತದಾನ ಮಾಡಿದವರಿಗೆ ಉಚಿತ ರೇಷ್ಮೆ ಸಸಿ ಪಡೆಯಬಹುದು.  ರೇಷ್ಮೆ ಕೃಷಿಯ ಹಂತಗಳು ಸೇರಿದಂತೆ ರೇಷ್ಮೆ ಗೂಡಿನಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ರೇಷ್ಮೆ ಗೂಡಿನಿಂದ ವಿವಿಧ ಅಲಂಕಾರಿಕ ವಸ್ತುಗಳ ತಯಾರಿ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ.

  • 10 May 2023 06:35 AM (IST)

    Karnataka Election Voting Live: ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ ಅಣಕು ಮತದಾನ ಆರಂಭ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿಯಿಂದ ಇವಿಎಂ ಪರಿಶೀಲನೆಗಾಗಿ ಅಣಕು ಮತದಾನ ಮಾಡುತ್ತಿದ್ದಾರೆ. ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಳಗಾವಿ, ವಿಜಯಪುರ, ಬಳ್ಳಾರಿ, ರಾಯಚೂರು, ಕೋಲಾರ, ಚಿಕ್ಕಬಳ್ಳಾಪುರ, ವಿಜಯನಗರ, ತುಮಕೂರು, ಚಿತ್ರದುರ್ಗ, ಮೈಸೂರು, ರಾಮನಗರ, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ದಾವಣಗೆರೆ, ಕೊಪ್ಪಳ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಯಾದಗಿರಿ, ಬೆಂಗಳೂರು ಗ್ರಾಮಾಂತರ ಮತ್ತು ಗದಗ ಜಿಲ್ಲೆಯ ಮತಗಟ್ಟೆಗಳಲ್ಲಿ ಅಣಕು ಮತದಾನ ನಡೆಯುತ್ತಿದೆ.

  • 10 May 2023 06:29 AM (IST)

    Karnataka Election Voting Live: ವೋಟರ್ ಐಡಿ ಇಲ್ಲದಿದ್ದರೂ ಮತದಾನ ಮಾಡಲು ಈ ದಾಖಲೆಗಳು ಇದ್ದರೆ ಸಾಕು

    1) ಪಾಸ್ಪೋರ್ಟ್, 2) ಚಾಲನಾ ಪರವಾನಗಿ, 3) ಕೇಂದ್ರ/ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಪಿಎಸ್ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ತಮ್ಮ ಸಿಬ್ಬಂದಿಗೆ ನೀಡಿರುವ ಫೋಟೋ ಗುರುತಿನ ಚೀಟಿ, 4) ಬ್ಯಾಂಕ್ / ಪೋಸ್ಟ್ ಆಫೀಸ್ ಫೋಟೋವುಳ್ಳ ಪಾಸ್ ಬುಕ್, 5) ಪಾನ್ ಹೊಂದಿರುವ ಕಾರ್ಡ್, 6) ಎನ್ಪಿಆರ್ ಅಡಿ ಅರ್ಜಿ ನೀಡಿರುವ ಸ್ಮಾರ್ಟ್ ಕಾರ್ಡ್, 7) ಎಂನರೇಗಾ ಜಾಬ್ ಕಾರ್ಡ್, 8) ಕಾರ್ಮಿಕರ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, 9) ಫೋಟೋವುಳ್ಳ ಪಿಂಚಣಿ ದಾಖಲೆ, 10) ಚುನಾವಣಾ ಆಯೋಗದ ವತಿಯಿಂದ ನೀಡುವ ದೃಢೀಕೃತ ಫೋಟೋ ವೋಟರ್ ಸ್ಲಿಪ್ಸ್, 11) ಸಂಸದರು/ವಿಧಾನಸಭಾ/ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, 12) ಆಧಾರ್ ಕಾರ್ಡ್ ಇವುಗಳಲ್ಲಿ ಯಾವುದಾದರೂ ಗುರುತಿನ ಚೀಟಿ ಬಳಸಿ ಮತದಾನ ಮಾಡಬಹುದು.

  • 10 May 2023 06:16 AM (IST)

    Karnataka Election Voting Live: ಕರ್ನಾಟಕದಲ್ಲಿರುವ ಮತದಾರರ ವಿವರ

    ಬೆಂಗಳೂರು: ಕರ್ನಾಟಕದಲ್ಲಿ ಒಟ್ಟು  5,31,33,054 ಮತದಾರರಿದ್ದು, 2,67,28,053 ಪುರುಷರು, 2,64,00,074 ಮಹಿಳಾ ಹಾಗೂ 4,927 ಇತರೆ ಮತದಾರಿದ್ದಾರೆ.

  • 10 May 2023 05:36 AM (IST)

    Karnataka Election Voting Live: ಕಲೆವೇ ಗಂಟೆಗಳಲ್ಲಿ ಮತದಾನ ಆರಂಭ

    ಬೆಂಗಳೂರು: ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾದ ಕರ್ನಾಟಕ ವಿಧಾನಸಭಾ ಚುನಾವಣೆಯ 224 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು (ಮೇ.10) ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ.

  • 09 May 2023 09:41 PM (IST)

    Karnataka Elections Live: ಚೆಕ್ ಪೊಸ್ಟ್ ಛಾವಣಿ ಹಾರಿ ಕರ್ತವ್ಯ ನಿರತ ಇಬ್ಬರಿಗೆ ಗಂಭೀರ ಗಾಯ,

    ಚಿಕ್ಕೋಡಿ: ಭಾರಿ ಗಾಳಿ ಮಳೇಗೆ ಚೆಕ್ ಪೊಸ್ಟ್ ಛಾವಣಿ ಹಾರಿ ಕರ್ತವ್ಯ ನಿರತ ಸಿಬ್ಬಂದಿಗೆ ಗಂಭೀರ ಗಾಯಗಳಾದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿಯ ಕರ್ನಾಟಕ ಮಹಾರಾಷ್ಟ್ರ ಗಡಿಯ ಚೆಕ್ ಪೊಸ್ಟ್​ನಲ್ಲಿ ನಡೆದಿದೆ. ನಿಪ್ಪಾಣಿ-ಮುರಗುಡ ಮಧ್ಯವಿರುವ ಚೆಕ್ ಪೊಸ್ಟ್ ಇದಾಗಿದೆ. ಚೆಕ್ ಪೊಸ್ಟ್ ಶೇಡಿನ ಪತ್ರೇ ಹಾರಿ ಸಿಬ್ಬಂದಿಗಳ ಮೇಲೆ ಬಿದ್ದ ಪರಿಮಾಣ ತಾಲ್ಲೂಕು ಆಡಳಿತ ಸಿಬ್ಬಂದಿ ಮತ್ತು ಸೇನಾ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

  • 09 May 2023 08:57 PM (IST)

    Karnataka Elections Live: ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಮನೆ ಮೇಲೆ ದಾಳಿ

    ಚಿತ್ರದುರ್ಗ: ಜೆಡಿಎಸ್ ಅಭ್ಯರ್ಥಿ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಚಿತ್ರದುರ್ಗ ತಾಲೂಕಿನ ಕ್ಯಾದಿಗ್ಗೆರೆ ಗ್ರಾಮದ ಬಳಿ ಇರುವ ಮನೆ ಮೇಲೆ ದಾಳಿ ನಡೆಸಲಾಗಿದೆ.

  • 09 May 2023 07:59 PM (IST)

    Karnataka Elections Live: ಕೈ ಅಭ್ಯರ್ಥಿ ಪ್ರದೀಪ್ ನಿವಾಸದಿಂದ ಬರಿಗೈಯಲ್ಲಿ ವಾಪಸ್ ಆದ ಐಟಿ ಅಧಿಕಾರಿಗಳು

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಸಂಬಂಧಿ ಮನೆ ಮೇಲೆ ದಾಳಿ ನಡೆಸಿದ್ದ ಐಟಿ ಹಾಗೂ ಚುನಾವಣಾಧಿಕಾರಿಗಳು ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. ಮತದಾರರಿಗೆ ಹಂಚಲು ಮನೆಯಲ್ಲಿ ಹಣ ಸಂಗ್ರಹಿಸಿಟ್ಟ ಶಂಕೆ ಹಿನ್ನೆಲೆ ಶ್ರೀಧರ್ ಮನೆ ಮೇಲೆ ಐಟಿ, ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದರು. ಸರ್ಚ್ ವಾರಂಟ್ ಪಡೆದು ಶ್ರೀಧರ್ ಮನೆಯಲ್ಲಿ ಶೋಧ ನಡೆಸಿದ್ದರು.

  • 09 May 2023 07:56 PM (IST)

    Karnataka Elections Live: ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗರಿಂದ ಕೂಪನ್ ಹಂಚಿಕೆ

    ಚಿತ್ರದುರ್ಗ: ಹಳಿಯೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವಿರೇಂದ್ರ ಬೆಂಬಲಿಗರು ಮತದಾರರಿಗೆ ಕೂಪನ್ ಹಂಚಿದ ಆರೋಪ ಕೇಳಿಬಂದಿದೆ.  ಕೂಪನ್ ನೀಡಿ ತಲಾ 2ಸಾವಿರ ರೂ. ಹಂಚಿಕೆಗೆ ಬಗ್ಗೆ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ನಿನ್ನೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಭ್ಯರ್ಥಿ ಮತ್ತು ಕಾರ್ಯಕರ್ತರನ್ನು ವಿಚಾರಣೆ ನಡೆಸಲಾಗುವುದು ಎಂದು ಎಸ್​ಪಿ ಕೆ ಪರಶುರಾಮ ಮಾಹಿತಿ ನೀಡಿದ್ದಾರೆ.

  • 09 May 2023 07:45 PM (IST)

    Karnataka Elections Live: ಚುನಾವಣಾ ಕರ್ತವ್ಯಲೋಪ: ಗದಗ ಎಇ ಅಮಾನತು

    ಗದಗ: ಚುನಾವಣಾ ಕರ್ತವ್ಯಲೋಪ ಆರೋಪ ಸಂಬಂಧ ರೋಣ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಆರ್ ಡಿ ಯಲಿಗಾರ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ವೈಶಾಲಿ ಆದೇಶಹೊರಡಿಸಿದ್ದಾರೆ. ರೋಣ ಕ್ಷೇತದ ನರೇಗಲ್ ಭಾಗದ ಎಫ್​ಎಸ್​ಟಿ ಆಗಿ ಸೇವೆ ಸಲ್ಲಿಸುತ್ತಿದ್ದ ಯಲಿಗಾರ ಅವರು ಕರ್ತವ್ಯ ನಿರ್ಲಕ್ಷ್ಯ, ತಪ್ಪು ಮಾಹಿತಿ ನೀಡಿದ ಹಿನ್ನೆಲೆ ಅಮಾನತು ಮಾಡಲಾಗಿದೆ.

  • 09 May 2023 07:31 PM (IST)

    Karnataka Elections Live: ಅಕ್ರಮವಾಗಿ ಸಾಗಿಸುತ್ತಿದ್ದ 1.90 ಕೋಟಿ ನಗದು ವಶಕ್ಕೆ

    ಬೆಂಗಳೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.90 ಕೋಟಿ ನಗದನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.  ಮತದಾರರಿಗೆ ಹಂಚಲು ಹಣ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಪೊಲೀಸರು, ಕಾರ್ಯಾಚರಣೆ ನಡೆಸಿ ಅಕ್ಕಿಪೇಟೆಯ ಬಾಲಾಜಿ‌ ಮೆಡಿಕಲ್ಸ್ ಬಳಿ ಹಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

  • 09 May 2023 05:47 PM (IST)

    Karnataka Elections Live: ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋದ ಯುವಕನ ಮೇಲೆ ಹಲ್ಲೆ ನಡೆಸಿದ ಕಲಬುರಗಿ ಮೇಯರ್: ಆರೋಪ

    ಕಲಬುರಗಿ: ಮಹಾನಗರ ಪಾಲಿಕೆ ಮೇಯರ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಇಂದು ಕುವೆಂಪು ನಗರದಲ್ಲಿ ಮಧ್ಯಾಹ್ನ ಕಾಂಗ್ರೆಸ್ ಪರ ಪ್ರಚಾರಕ್ಕೆ ಬಂದಿದ್ದನ್ನು ಪ್ರಶ್ನಿಸಿದ ಮೇಯರ್ ವಿಶಾಲ್ ದರ್ಗಿ, ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ.

  • 09 May 2023 05:44 PM (IST)

    Karnataka Elections Live: ಬೆಳಗಾವಿಯಲ್ಲಿ ದಾಖಲೆ ಇಲ್ಲದ 15 ಲಕ್ಷ ಹಣ ಜಪ್ತಿ

    ಬೆಳಗಾವಿ: ಜಿಲ್ಲೆಯಲ್ಲಿ ದಾಖಲೆ ಇಲ್ಲದ 15 ಲಕ್ಷ ಹಣವನ್ನು ಜಪ್ತಿ ಮಾಡಿದ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಚೆಕ್​ಪೋಸ್ಟ್​​ ಬಳಿ ನಡೆದಿದೆ. ಮಹಾರಾಷ್ಟ್ರದ ಗಡಹಿಂಗ್ಲಜ್‌ನಿಂದ ಮಾಂಜರಿಗೆ ಬರುತ್ತಿದ್ದ ಕಾರು ತಪಾಸಣೆ ವೇಳೆ ಚೀಲದಲ್ಲಿ 15 ಲಕ್ಷ ಹಣ ಪತ್ತೆಯಾಗಿದ್ದು, ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ. ನಂತರ ಆದಾತ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.

  • 09 May 2023 04:52 PM (IST)

    Karnataka Elections Live: ಮತಗಟ್ಟೆ ಸ್ಥಾಪನೆಗೆ ಪಟ್ಟುಹಿಡಿದ ಗ್ರಾಮಸ್ಥರ ಮನವೋಲಿಸಿದ ಹಾಸನ ತಹಶೀಲ್ದಾರ್

    ಹಾಸನ: ಮತಗಟ್ಟೆ ಸ್ಥಾಪಿಸಲು ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ ವಿಚಾರವಾಗಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮಮತಾ, ಜನರ ಮನವೋಲಿಸಿದ್ದಾರೆ. ತಮ್ಮೂರಲ್ಲೂ ಮತಗಟ್ಟೆ ತೆರೆಯಿರಿ ಎಂದು ಪ್ರತಿಭಟನೆ ನಡೆಸಿದ್ದ ಬೇಲೂರು ತಾಲ್ಲೂಕಿನ ಹಳೆಬೀಡು ಸಮೀಪದ ಬೋವಿ ಕಾಲೊನಿ ಗ್ರಾಮಸ್ಥರ ಜೊತೆ ಮಾತನಾಡಿದ ಮಮತಾ, ನಾಳೆಯೇ ಮತದಾನ ಇದೆ ಈ ಹಂತದಲ್ಲಿ ಮತಗಟ್ಟೆ ಬದಲಾವಣೆ ಅಥವಾ ಸ್ಥಾಪನೆ ಅಸಾಧ್ಯ. ನಿಮ್ಮ ಹಕ್ಕು ಚಲಾಯಿಸದಂತೆ ದಾರಿತಪ್ಪಿಸುವವರ ಮಾತಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು. ಮತದಾನಕ್ಕೆ ಬರಲು ಸಮಸ್ಯೆ ಇದ್ದವರಿಗೆ ಜಿಲ್ಲಾಡಳಿತದಿಂದಲೇ ನೆರವು ನೀಡುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಭರವಸೆ ಹಿನ್ನೆಲೆ ಪ್ರತಿಭಟನಾಕಾರರು ವಾಪಸ್ ತೆರಳಿದ್ದಾರೆ.

  • 09 May 2023 03:43 PM (IST)

    Karnataka Elections Live: ಶಿವಮೊಗ್ಗ ಪ್ರವಾಸಿ ತಾಣಗಳಿಗೆ ನಿರ್ಬಂಧ

    ಶಿವಮೊಗ್ಗ: ನಾಳೆ ವಿಧಾನಸಭೆ ಚುನಾವಣೆಗೆ ಮತದಾನ ಹಿನ್ನಲೆ ಶಿವಮೊಗ್ಗ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಸಾಗರ ತಾಲೂಕಿನ ಜೋಗ್ ಫಾಲ್ಸ್, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿ, ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪ ಸಿಂಹಧಾಮ, ಸಾಗರ ತಾಲೂಕಿನ ಸಿಗಂದೂರು ಕ್ಷೇತ್ರಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯ ಕವಿಶೈಲ, ಕವಿಮನೆ ಹಾಗೂ ಕೊಪ್ಪ ತಾಲೂಕು ಹಿರೇಕೂಡಿಗೆಯ ಕುವೆಂಪು ಜನ್ಮಸ್ಥಳದ ಸ್ಮಾರಕ ಮೇ 10ರಂದು ಬಂದ್‌ ಮಾಡಲು ಕುವೆಂಪು ಪ್ರತಿಷ್ಠಾನ ಕಾರ್ಯದರ್ಶಿ ಕಡಿದಾಳ ಪ್ರಕಾಶ್ ಸೂಚಿಸಿದ್ದಾರೆ.

  • 09 May 2023 12:56 PM (IST)

    Karnataka Assembly Election Live: ಮತದಾನ ಮಾಡಿದವರಿಗೆ ಉಪಹಾರ ಉಚಿತ

    ಬೆಂಗಳೂರು: ನಗರದ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್, ಮತದಾನ ಮಾಡಿದವರಿಗೆ ಉಚಿತವಾಗಿ ಬೆಣ್ಣೆ ದೋಸೆ, ಮೈಸೂರು ಪಾಕ್ ಮತ್ತು ತಂಪು ಪಾನೀಯಗಳನ್ನು ನೀಡುವುದಾಗಿ ನಿರ್ಧರಿಸಿದೆ. ಚರ್ಚ್ ಸ್ಟ್ರೀಟ್‌ನಲ್ಲಿರುವ ಚಾಲುಕ್ಯ ಸಾಮ್ರಾಟ್ ಕೆಫೆಯು ಮತದಾರರಿಗೆ ಬೆಳಿಗ್ಗೆ 7:30 ರಿಂದ 11:30 ರವರೆಗೆ ಉಚಿತ ಉಪಹಾರವನ್ನು ನೀಡಲು ನಿರ್ಧರಿಸಿದೆ.

     ಮತದಾನ ಮಾಡಿದವರಿಗೆ ಈ ಹೋಟೆಲ್​ನಲ್ಲಿ ಸಿಗಲಿದೆ ಉಚಿತ ತಿಂಡಿ, ಸಿನಿಮಾ ಟಿಕೆಟ್​: ಮತದಾರರಿಗೆ ಬಂಪರ್​ ಆಫರ್

  • 09 May 2023 12:27 PM (IST)

    Karnataka Elections Live: ಮೈಸೂರು ಜಿಲ್ಲೆಯಲ್ಲಿ 26 ಲಕ್ಷ ಮತದಾರರು, 143 ಅಧಿಕೃತ ಅಭ್ಯರ್ಥಿಗಳು

    ಮೈಸೂರು: ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ (ಮೇ.10) ರಂದು ಮತದಾನ ನಡೆಯುತ್ತದೆ. ಜಿಲ್ಲೆಯಲ್ಲಿ ಒಟ್ಟು  26 ಲಕ್ಷ ಮತದಾರರಿದ್ದಾರೆ. ಒಟ್ಟು 2905 ಮತಗಟ್ಟೆ, 574 ಅತಿ ಸೂಕ್ಷ್ಮ ಮತಗಟ್ಟೆ, 52 ಮತಗಟ್ಟೆಗಳು ವರುಣಾ ವ್ಯಾಪ್ತಿಯಲ್ಲಿ. 1,597 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಲಾಗುತ್ತದೆ. 143 ಅಧಿಕೃತ ಅಭ್ಯರ್ಥಿಗಳಿದ್ದಾರೆ. ಮನೆಯ ಬಳಿ ಹಣ, ಉಡುಗೊರೆ ಹಂಚಲು ಬಂದವರ ವೀಡಿಯೋ ಮಾಡಿ ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ. ಇದುವರೆಗೂ 3 ಕೋಟಿ 2 ಲಕ್ಷದ 32 ಸಾವಿರ ಹಣ ಜಪ್ತಿ ಮಾಡಲಾಗಿದೆ. 8 ಕೋಟಿ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆ ಅಡಿ 40 ದೂರು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಎಸ್​ಪಿ ಸೀಮಾ ಹೇಳಿದ್ದಾರೆ.

  • 09 May 2023 12:06 PM (IST)

    Karnataka Elections Live: ವಿಧಾನಸಭೆ ಚುನಾವಣೆಗೆ ವಿಶೇಷ ರೈಲು ಬಿಡುಗಡೆ

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೊಂದೇ ದಿನ ಬಾಕಿ ಇದೆ. ಮತದಾನಕ್ಕೆ ಊರುಗಳಿಗೆ ತೆರಳುವವರಿಗಾಗಿ ನೈಋತ್ಯ ರೈಲ್ವೆ ಮೂರು ವಿಶೇಷ ರೈಲುಗಳನ್ನು ಘೋಷಿಸಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ ರೈಲುಗಳಿಗೆ ಹೆಚ್ಚುವರಿ ಕೋಚ್​ಗಳನ್ನು ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ. ಬೆಂಗಳೂರು ಹಾಗೂ ಬೆಳಗಾವಿ ಮಧ್ಯೆ ಒಂದು ವಿಶೇಷ ರೈಲು ಸಂಚರಿಸಲಿವೆ. ಹುಬ್ಬಳ್ಳಿ ಮಾರ್ಗವಾಗಿ ಈ ರೈಲು ಸಂಚರಿಸಲಿವೆ. ಇನ್ನು ಬೆಂಗಳೂರಿನಿಂದ ಬೀದರ್​ಗೆ ಕಲಬುರಗಿ ಮಾರ್ಗವಾಗಿ ಒಂದು ರೈಲು ತೆರಳಲಿದೆ. ಬೆಂಗಳೂರಿನಿಂದ (ಯಶವಂತಪುರ) ಮುರುಡೇಶ್ವರಕ್ಕೆ ವಿಶೇಷ ರೈಲು ಸಂಚರಿಸಲಿದೆ.

  • 09 May 2023 11:26 AM (IST)

    Karnataka Elections Live: ಹಾವೇರಿ ಜಿಲ್ಲೆಯಲ್ಲಿ 1471 ಮತಗಟ್ಟೆ

    ಹಾವೇರಿ: ವಿಧಾನಸಭಾ ಚುನಾವಣೆ ಹಿನ್ನೆಲೆ ಮಸ್ಟರಿಂಗ ಕಾರ್ಯ ಭರದಿಂದ ಸಾಗಿದೆ. ಹಾವೇರಿ ಜಿಲ್ಲೆಯಲ್ಲಿ ಒಟ್ಟು 1471 ಮತಗಟ್ಟೆಗಳಿದ್ದು, 6476 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ 13,02,683 ಒಟ್ಟು ಮತದಾರರಿದ್ದಾರೆ. ಪುರುಷ ಮತದಾರರು 6,65,617, ಮಹಿಳಾ ಮತದಾರರು 6,37,019, ಇತರೆ  47 ಜನ ಮತದಾರರಿದ್ದಾರೆ. ಚುನಾವಣೆ ಕಾರ್ಯಕ್ಕಾಗಿ ಒಟ್ಟು 223 ಬಸ್ 29 ಜೀಪ್, 22ಮ್ಯಾಕ್ಸಿ ಕ್ಯಾಬ್ ಬಳಕೆ ಮಾಡಿಕೊಳ್ಳಲಾಗಿದೆ.

  • 09 May 2023 10:58 AM (IST)

    Karnataka Elections Live: ಮಹಿಳೆಯರಿಗಾಗಿ ಪಿಂಕ್​ ಬೂತ್​ ನಿರ್ಮಾಣ

    ಬೆಂಗಳೂರು: ಮತದಾನದ ದಿನ ಮೇ 10ರಂದು ವೇತನ ಸಹಿತ ರೆಜೆ ಇರಲಿದೆ. ಎಲ್ಲರೂ ತಪ್ಪದೆ ಮತದಾನ ಮಾಡಿ. ಮಹಿಳೆಯರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ 5 ಪಿಂಕ್ ಬೂತ್ ಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಪಿಂಕ್ ಬೂತ್ ಗಳಲ್ಲಿ ಮಹಿಳಾ ಸಿಬ್ಬಂದಿಯೇ ಕಾರ್ಯ ನಿರ್ವಹಿಸಲಿದ್ದಾರೆ. ಜೊತೆಗೆ ಪಿಂಕ್ ಬಣ್ಣದಲ್ಲಿ ವಿವಿಧ ಚಿತ್ರಗಳನ್ನು ರಚಿಸುವುದು, ಮತದಾನ ಹಕ್ಕು ಚಲಾಯಿಸಲು ಬರುವವರಿಗೆ ಸ್ವಾಗತ ಕೋರುವುದು, ಸ್ವಾಗತ ಕಮಾನು, ಪಿಂಕ್ ಬಲೂನ್‌ಗಳ ಅಲಂಕಾರ ಸೇರಿದಂತೆ ಮಹಿಳೆಯರನ್ನು ಆಕರ್ಷಿಸುವ ರೀತಿ ಮತಗಟ್ಟೆಗಳನ್ನು ಸಿದ್ದಪಡಿಲಸಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 140 ಪಿಂಕ್​​ ಬೂತ್​​ ನಿರ್ಮಾಣ ಮಾಡಲಾಗಿದೆ.

  • 09 May 2023 10:36 AM (IST)

    Karnataka Assembly Election Live: ಮತದಾನದ ದಿನ ಪ್ರವಾಸಿ ತಾಣಗಳಿಗೆ ನಿರ್ಬಂಧ

    ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಮೇ 10ರಂದು ನಡೆಯುವ ಚುನಾವಣೆಗೆ ಮತದಾರರು ತಪ್ಪದೇ ಮತ ಚಲಾಯಿಸುವ ಉದ್ದೇಶದಿಂದ ಸರ್ಕಾರ ರಜಾ ಘೋಷಣೆ ಮಾಡಿದೆ. ಆದರೆ ಕೆಲ ಮತದಾರರು ಮತ ಚಲಾಯಿಸದೆ ತಮಗೆ ಸಿಕ್ಕ ರಜೆಯಿಂದ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಕೆಲ ಪ್ರಮುಖ ಪ್ರವಾಸಿ ತಾಣಗಳಿಗೆ ಮತದಾನದ ದಿನದಂದು ನಿರ್ಬಂಧ ಹೇರಲಾಗಿದೆ. ಅಲ್ಲದೆ ಮತದಾನ‌ ಮಾಡಿ ಬಂದವರಿಗೆ ಮಾತ್ರ ಪ್ರವಾಸಿ ವಾಹನಗಳಲ್ಲಿ ಪ್ರಯಾಣಿಸಲು ಅಥವಾ ಬಳಸಲು ಅವಕಾಶ ನೀಡಬೇಕೆಂದು ಮೈಸೂರು ಜಿಲ್ಲಾ ಟ್ರ್ಯಾವಲ್ಸ್ ಮಾಲೀಕರು ನಿರ್ಧರಿಸಿದ್ದಾರೆ.

  • 09 May 2023 10:18 AM (IST)

    Karnataka Assembly Election Live: ಬೆಂಗಳೂರಲ್ಲಿ ವಿನೂತನ ಥೀಮ್ ಬೇಸ್ಡ್​​ ಮತಗಟ್ಟೆ

    ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿ ವಿನೂತನ ಥೀಮ್ ಬೇಸ್ಡ್​​ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಪಿಂಕ್ ಮತಗಟ್ಟೆ, ಯುವ ಮತದಾರರ ಮತಗಟ್ಟೆ, ಸಿರಿಧಾನ್ಯ ಮತಗಟ್ಟೆ, ವಿಶೇಷ ಚೇತನ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ಪರಿಸರ ಮತಗಟ್ಟೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತಗಟ್ಟೆ, ಮಾಜಿ ಸೈನಿಕ ಮತಗಟ್ಟೆ, ತೃತೀಯ ಲಿಂಗಿ ಮತಗಟ್ಟೆ, ಕ್ರೀಡಾ ಮತಗಟ್ಟೆಗಳೆಂಬ ವಿಶೇಷ ವಿನ್ಯಾಸದ ಮತಗಟ್ಟೆಗಳನ್ನು ಸ್ಥಾಪಿಸುವ ಮೂಲಕ ಮತದಾರರನ್ನು ಸೆಳೆಯಲಾಗುತ್ತಿದೆ.

  • 09 May 2023 10:11 AM (IST)

    Karnataka Assembly Election Live: ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ 40 ಮತಗಟ್ಟೆಳು

    ಚುನಾವಣಾ ಆಯೋಗದ ನಿರ್ದೇಶನದಂತೆ ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ 40 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 9 ಜಿಲ್ಲೆಗಳಲ್ಲಿ ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಆದಿವಾಸಿ ಜನಾಂಗದವರಾದ ಎರವ, ಪಣಿಯ, ಹಕ್ಕಿ-ಪಿಕ್ಕಿ, ಗೌಡಲು, ಹಸಲರು, ಕಾಡುಕುರುಬ , ಜೇನುಕುರುಬ, ಕೊರಗ, ಮಲೈಕುಡಿ, ಸಿದ್ದಿ ಜನಾಂಗದ ಮತದಾರರಿಗಾಗಿ ಸಾಂಪ್ರದಾಯಿಕ ಮತಗಟ್ಟೆ ಸಿದ್ಧಪಡಿಸಲಾಗಿದೆ.

  • 09 May 2023 10:08 AM (IST)

    Karnataka Assembly Election Live: ಮೇ.10 ಮತದಾನ, 224 ವಿಧಾನಸಭಾ ಕ್ಷೇತ್ರಗಳಲ್ಲಿ 58,282 ಮತಗಟ್ಟೆಗಳಿಗೆ ಬಂದೋಬಸ್ತ

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ನಾಳೆ (ಮೇ.10) ರಂದು ನಡೆಯಲಿದ್ದು, ರಾಜ್ಯಾದ್ಯಂತ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 58,282 ಮತಗಟ್ಟೆಗಳಿದ್ದು, ಭದ್ರತೆಗಾಗಿ 1.56 ಲಕ್ಷ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರಾಜ್ಯದ 84,119 ಪೊಲೀಸರ ಜೊತೆಗೆ ನೆರೆ ರಾಜ್ಯದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಹೊರರಾಜ್ಯದಿಂದ 8,500 ಪೊಲೀಸರು, 650 ಸಿಆರ್​ಪಿಎಫ್​ ತುಕಡಿಯನ್ನು ಕರೆಸಿಕೊಳ್ಳಲಾಗಿದೆ. 304 ಡಿವೈಎಸ್​​ಪಿ, 991 ಇನ್ಸ್​​ಪೆಕ್ಟರ್ಸ್​, 2,610 ಪಿಎಸ್​ಐ, 108 ಬಿಎಸ್​ಎಫ್​, 75 ಸಿಐಎಸ್​​ಎಫ್​, 70 ಐಟಿಬಿಪಿ, 35 ಆರ್​ಫಿಎಫ್​ ಬಂದೋಬಸ್ತಗೆ ನಿಯೋಜಿಸಲಾಗಿದೆ.

    ವಿಶೇಷವಾಗಿ 2,930 ಪೊಲೀಸ್ ಮೊಬೈಲ್​ ಸೆಕ್ಟರ್​ಗಳ ಕಾರ್ಯಾಚರಣೆ, ಮೊಬೈಲ್ ಸೆಕ್ಟರ್​ ಮೇಲ್ವಿಚಾರಣೆಗೆ 749 ಸೂಪರ್​ವೈಸರ್​, ರಾಜ್ಯದ ಗಡಿ ಭಾಗದಲ್ಲಿ ವಾಹನಗಳ ತಪಾಸಣೆ ಮಾಡಿ ಬಿಡಲು ಸೂಚನೆ ನೀಡಲಾಗಿದೆ.

  • Published On - May 09,2023 10:00 AM

    Follow us