Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತದಾನ ಮಾಡಿದವರಿಗೆ ಈ ಹೋಟೆಲ್​ನಲ್ಲಿ ಸಿಗಲಿದೆ ಉಚಿತ ತಿಂಡಿ, ಸಿನಿಮಾ ಟಿಕೆಟ್​: ಮತದಾರರಿಗೆ ಬಂಪರ್​ ಆಫರ್

ಬೆಂಗಳೂರಿನ ಹೋಟೆಲ್ ನಿಸರ್ಗ ಗ್ರ್ಯಾಂಡ್​ ಮತದಾರರಿಗೆ ಬಂಪರ್​ ಆಫರ್​ ನೀಡಿದ್ದು, ನಾಗರಿಕರಿಗೆ ಮತದಾನ ಮಾಡುವಂತೆ ಪ್ರೋತ್ಸಾಹಿಸಲು ಆಹಾರ ಮತ್ತು ಉಚಿತ ಸಿನಿಮಾ ಟಿಕೆಟ್‌ಗಳನ್ನು ಘೋಷಿಸಿದೆ.

ಮತದಾನ ಮಾಡಿದವರಿಗೆ ಈ ಹೋಟೆಲ್​ನಲ್ಲಿ ಸಿಗಲಿದೆ ಉಚಿತ ತಿಂಡಿ, ಸಿನಿಮಾ ಟಿಕೆಟ್​: ಮತದಾರರಿಗೆ ಬಂಪರ್​ ಆಫರ್
ಬೆಂಗಳೂರಿನ ಹೋಟೆಲ್ ನಿಸರ್ಗ ಗ್ರ್ಯಾಂಡ್​ ಆಫರ್​
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 08, 2023 | 7:12 PM

ಬೆಂಗಳೂರು: ರಾಜ್ಯದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Election 2023) ಕಾವು ಹೆಚ್ಚುತ್ತಿದೆ. ಎಲ್ಲ ಪಕ್ಷಗಳು ಪ್ರಚಾರದಲ್ಲಿ ತೊಡಗಿವೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರಬಿಳಲಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಮತದಾನದ ಕುರಿತಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಮೇ.10 ರಂದು ಮತದಾನ ಮಾಡುವವರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು(KSTDC) ನಡೆಸುತ್ತಿರುವ ಮಯೂರ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ಶೇಕಡಾ 50 ರಷ್ಟು ರಿಯಾಯಿತಿಯನ್ನ ಘೋಷಿಸಿದೆ. ಆದರೆ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಬೆಂಗಳೂರಿನ ಹೋಟೆಲ್ ನಿಸರ್ಗ ಗ್ರ್ಯಾಂಡ್​ ಉಚಿತ ತಿಂಡಿ ಮತ್ತು ಸಿನಿಮಾ ಟಿಕೆಟ್​ ನೀಡುವುದಾಗಿ ಭಿತ್ತಿಪತ್ರ ಒಂದನ್ನು ಹಂಚಿಕೊಂಡಿದೆ.

ಮತದಾರರಿಗೆ ಬಂಪರ್​ ಆಫರ್​

ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಉತ್ತೇಜನಕ್ಕಾಗಿ ನಗರದ ವೈಎಂಸಿಎ ಕಾಂಪೌಂಡ್​, ನೃಪತುಂಗ ರಸ್ತೆ, ಆರ್​ಬಿಐ ಹತ್ತಿರವಿರುವ ಹೋಟೆಲ್ ನಿಸರ್ಗ ಗ್ರ್ಯಾಂಡ್, ನಾಗರಿಕರಿಗೆ ಮತದಾನ ಮಾಡುವಂತೆ ಪ್ರೋತ್ಸಾಹಿಸಲು ಆಹಾರ ಮತ್ತು ಉಚಿತ ಸಿನಿಮಾ ಟಿಕೆಟ್‌ಗಳನ್ನು ಘೋಷಿಸಿದೆ. ಮತದಾನ ಮಾಡಿ ಗುರುತು (ಶಾಯಿ) ತೋರಿಸಿದವರಿಗೆ ಬೆಣ್ಣೆ ಕಾಲಿ ದೋಸೆ, ಮೈಸೂರು ಪಾಕ್ ಮತ್ತು ಜ್ಯೂಸ್ ನೀಡಲಾಗುತ್ತದೆ.

ಇದನ್ನೂ ಓದಿ: KSTDC: ಮತದಾನ ದಿನದಂದು ‘ಮಯೂರ’ ಹೋಟೆಲ್‌ಗಳಲ್ಲಿ ತಂಗಲು 50% ವಿಶೇಷ ರಿಯಾಯಿತಿ

ಮೊದಲ 100 ಹೊಸ ಯುವ ಮತದಾರರಿಗೆ ಉಚಿತ ಸಿನಿಮಾ ಟಿಕೆಟ್‌ಗಳನ್ನು ಸಹ ನೀಡುತ್ತಿದೆ.​ ಇದು ಸಾಮಾಜಿಕ ಕಳಕಳಿ ಉಳ್ಳ ರಾಜಕೀಯೇತರ ಕಾರ್ಯಕ್ರಮವಾಗಿದ್ದು, ಮತದಾನ ನಮ್ಮ ಹಕ್ಕು, ಅದನ್ನು ಚಲಾಯಿಸಿ ಸಮೃದ್ಧ ಭಾರತ ನಿರ್ಮಿಸಿ ಎಂದು ಭಿತ್ತಿಪತ್ರದಲ್ಲಿ ಬರೆಯಲಾಗಿದೆ.

ಚುನಾವಣೆಗೆ ಸಜ್ಜಾದ ಪಕ್ಷಗಳು

ಕರ್ನಾಟಕದ ಎಲ್ಲ 224 ಕ್ಷೇತ್ರಗಳಲ್ಲಿ ಇದೇ ಬುಧವಾರ(ಮೇ.10) ಚುನಾವಣೆ ನಡೆಸಲು ಚುನಾವಣಾ ಆಯೋಗವು ಸಜ್ಜಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಜನಾದೇಶವನ್ನು ಗೆಲ್ಲುವ ವಿಶ್ವಾಸವನ್ನು ತೋರಿಸಿದ್ದು, ಜೆಡಿಎಸ್ ಪಕ್ಷವು ಮತ್ತೊಮ್ಮೆ ಕರ್ನಾಟಕ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: Karnataka Polls: ಕಾಂಗ್ರೆಸ್‌ನಲ್ಲಿ ಕ್ರಿಮಿನಲ್‌ ಪ್ರಕರಣಗಳಿರುವ ಅಭ್ಯರ್ಥಿಗಳೇ ಹೆಚ್ಚು, ಇತರೆ ಪಕ್ಷಗಳಲ್ಲಿ ಎಷ್ಟಿದ್ದಾರೆ? ಇಲ್ಲಿದೆ ಮಾಹಿತಿ

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 13 ರಂದು ಪ್ರಕಟವಾಗಲಿದ್ದು, ಮತದಾರ ಪ್ರಭುಗಳು ಈ ಬಾರಿ ಯಾರ ಕಡೆ ಒಲಿಯಲಿದ್ದಾನೆ ಎಂದು ಕಾದುನೋಡಬೇಕಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ