KSTDC: ಮತದಾನ ದಿನದಂದು ‘ಮಯೂರ’ ಹೋಟೆಲ್‌ಗಳಲ್ಲಿ ತಂಗಲು 50% ವಿಶೇಷ ರಿಯಾಯಿತಿ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ಮತದಾನದ ದಿನದಂದು ಮತ ಚಲಾಯಿಸಲು ಜನರನ್ನು ಉತ್ತೇಜಿಸುವ ಸಲುವಾಗಿ, ಮೇ.10 ರಂದು ಮತದಾನ ಮಾಡುವವರಿಗೆ ‘ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು(KSTDC) ನಡೆಸುತ್ತಿರುವ ಮಯೂರ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವವರಿಗೆ ಶೇಕಡಾ 50 ರಷ್ಟು ರಿಯಾಯಿತಿ ಘೋಷಿಸಿದೆ.

KSTDC: ಮತದಾನ ದಿನದಂದು ‘ಮಯೂರ' ಹೋಟೆಲ್‌ಗಳಲ್ಲಿ ತಂಗಲು 50% ವಿಶೇಷ ರಿಯಾಯಿತಿ
ಪ್ರಾತಿನಿಧಿಕ ಚಿತ್ರ
Follow us
|

Updated on: May 07, 2023 | 12:00 PM

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ(Karnataka Assembly Election) ಕಾವು ಜೋರಾಗಿದ್ದು, ಎಲ್ಲ ಪಕ್ಷಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಜೊತೆ ಸರ್ಕಾರ, ರಾಜ್ಯದಲ್ಲಿ ಮತದಾನದ ಮಹತ್ವವನ್ನ ವಿವಿಧ ಪ್ರಯೋಗಗಳನ್ನ ಮಾಡುವ ಮೂಲಕ ತಿಳಿಸುತ್ತಿದೆ. ಅದರಂತೆ ಇದೀಗ ಮೇ.10 ರಂದು ಮತದಾನ ಮಾಡುವವರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು(KSTDC) ನಡೆಸುತ್ತಿರುವ ಮಯೂರ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ಶೇಕಡಾ 50 ರಷ್ಟು ರಿಯಾಯಿತಿಯನ್ನ ಘೋಷಿಸಿವೆ. ಹೌದು ಈ ಕೊಡುಗೆಯನ್ನ ಮೇ 10 ರಂದು ರಾಜ್ಯಾದ್ಯಂತ ಪಡೆಯಬಹುದು. ಮತದಾನದ ದಿನದಂದು ಹೊರಹೋಗಲು ಮತ್ತು ಮತದಾನ ಮಾಡಲು ಜನರನ್ನು ಉತ್ತೇಜಿಸಲು ಇಲಾಖೆ ಇದನ್ನ ಪ್ರಕಟಿಸಿದೆ.

ಈ ಕುರಿತು ಕೆಎಸ್‌ಟಿಡಿಸಿ ‘ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಉತ್ತೇಜಿಸುವ ಸಲುವಾಗಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಿಗಮದ ಒಡೆತನದ ‘ಮಯೂರ’ ಹೋಟೆಲ್‌ಗಳಲ್ಲಿ ತಂಗಲು 50% ವಿಶೇಷ ರಿಯಾಯಿತಿಯನ್ನು ನೀಡಲು ಘೋಷಿಸಿದೆ. ರಾಜ್ಯದಾದ್ಯಂತ ಮತದಾನ ಮಾಡುವ ಸಾರ್ವಜನಿಕರಿಗೆ, ಪ್ರವಾಸಿಗರಿಗೆ. ವಿಶೇಷ ರಿಯಾಯಿತಿಯನ್ನು ಪಡೆಯಲು ಬಯಸುವ ಸಾರ್ವಜನಿಕರು ಕಡ್ಡಾಯವಾಗಿ ಮತ ಚಲಾಯಿಸಿ ಮತ್ತು ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಇನ್ನು ರಾಜ್ಯ ಸರ್ಕಾರ ನಡೆಸುವ ಮಯೂರ ಹೋಟೆಲ್‌ಗಳು ಕರ್ನಾಟಕದಾದ್ಯಂತ ಮತ್ತು ರಾಜ್ಯದ ಎಲ್ಲಾ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿವೆ ಎಂದಿದೆ.

ಇದನ್ನೂ ಓದಿ:ಜಾತಿ ಹೆಸರು ಬಳಸಿ ಚುನಾವಣೆ ಭಾಷಣ ಮಾಡಿದ್ದ ಬಿಜೆಪಿ ಅಭ್ಯರ್ಥಿಗೆ ಸಂಕಷ್ಟ

ಏತನ್ಮಧ್ಯೆ, ಕರ್ನಾಟಕದ ಎಲ್ಲ 224 ಕ್ಷೇತ್ರಗಳಲ್ಲಿ ಇದೇ ಬುಧವಾರ(ಮೇ.10) ಚುನಾವಣೆ ನಡೆಸಲು ಚುನಾವಣಾ ಆಯೋಗವು ಸಜ್ಜಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಜನಾದೇಶವನ್ನು ಗೆಲ್ಲುವ ವಿಶ್ವಾಸವನ್ನು ತೋರಿಸಿದ್ದು, ಜೆಡಿಎಸ್ ಪಕ್ಷವು ಮತ್ತೊಮ್ಮೆ ಕರ್ನಾಟಕ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿಕೊಂಡಿದೆ. ಇನ್ನು ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 13 ರಂದು ಪ್ರಕಟವಾಗಲಿದ್ದು, ಮತದಾರ ಪ್ರಭುಗಳು ಈ ಬಾರಿ ಯಾರ ಕಡೆ ಒಲಿಯಲಿದ್ದಾನೆ ಎಂದು ಕಾದುನೋಡಬೇಕಿದೆ.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?