AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KSRTC: ಕರ್ನಾಟಕ ಚುನಾವಣೆ, ಮೇ 9 ಮತ್ತು 10 ರಂದು ಕೆಎಸ್​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ

ಕರ್ನಾಟಕ ವಿಧಾನಭೆ ಚುನಾವಣೆ ಹಿನ್ನೆಲೆ ಮೇ 9 ಮತ್ತು 10 ರಂದು ಕರ್ನಾಟಕ ಸಾರಿಗೆ ಬಸ್​ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

KSRTC: ಕರ್ನಾಟಕ ಚುನಾವಣೆ, ಮೇ 9 ಮತ್ತು 10 ರಂದು ಕೆಎಸ್​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ
ಕರ್ನಾಟಕ ಚುನಾವಣೆ ಹಿನ್ನೆಲೆ ಮೇ 9 ಮತ್ತು 10 ರಂದು ಕೆಎಸ್​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯImage Credit source: PTI/File
Rakesh Nayak Manchi
|

Updated on: May 06, 2023 | 2:48 PM

Share

ಬೆಂಗಳೂರು: ಕರ್ನಾಟಕ ವಿಧಾನಭೆ ಚುನಾವಣೆ (Karnataka Assembly Elections 2023) ಹಿನ್ನೆಲೆ ಮೇ 9 ಮತ್ತು 10 ರಂದು ಕರ್ನಾಟಕ ಸಾರಿಗೆ ಬಸ್ (KSRTC)​ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮೇ 10ರಂದು ರಾಜ್ಯದ 224 ಕ್ಷೇತ್ರಗಳಲ್ಲಿ ಮತದಾನ (Voting) ಪ್ರಕ್ರಿಯೆ ನಡೆಯುವ ಹಿನ್ನೆಲೆ ಮೇ 9, 10ರಂದು ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಕೆಎಸ್​ಆರ್​ಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

10ರಂದು ನಡೆಯುವ ವಿಧಾನಸಭಾ ಚುನಾವಣೆ ಹಿನ್ನೆಲೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಚುನಾವಣಾ ಕರ್ತವ್ಯಕ್ಕೆ ಕೆಎಸ್ಆರ್​ಟಿಸಿ ಬಸ್​ಗಳನ್ನು ನಿಯೋಜಿಸಲಾಗಿದೆ. ಪರಿಣಾಮ 9 ಮತ್ತು 10 ರಂದು ರಾಜ್ಯದಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತದೆ. ಪ್ರಯಾಣಿಕರು ಸಹಕರಿಸಬೇಕೆಂದು ಪ್ರಕಟಣೆ ಮೂಲಕ ಕೆಎಸ್​ಆರ್​ಟಿಸಿ ಮನವಿ ಮಾಡಿದೆ.

ಇದನ್ನೂ ಓದಿ: ಮನೆಯಿಂದ ಮತ ಚಲಾಯಿಸಿದ 103 ವರ್ಷದ ಅಜ್ಜನಿಗೆ ಕೇಂದ್ರ ಚುನಾವಣಾ ಆಯೋಗದಿಂದ ಶಹಬ್ಬಾಶ್ ​ಗಿರಿ

ಚುನಾವಣೆ ಡ್ಯೂಟಿಗೆ ಹೋಗಲಿರುವ ಬಸ್​ಗಳ ಸಂಖ್ಯೆ

ರಾಜ್ಯದಲ್ಲಿ ಒಟ್ಟು 8100 ಕೆಎಸ್​ಆರ್​ಟಿಸಿ ಬಸ್​ಗಳಿದ್ದು, ಈ ಪೈಕಿ 3700 ಬಸ್​​ಗಳು ಚುನಾವಣಾ ಡ್ಯೂಟಿಗೆ ಬುಕ್ ಆಗಿವೆ. ಮೇ 9 ಮತ್ತು 10 ರಂದು 4400 ಕೆಎಸ್​ಆರ್​ಟಿಸಿ ಬಸ್​ಗಳು ಮಾತ್ರ ಸಂಚಾರ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆ ಎರಡು ದಿನಗಳ ಕಾಲ ಕೆಎಸ್​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್