“ಭ್ರಷ್ಟಾಚಾರ ನಡೆದರೆ ಫೋನ್ ಮಾಡಿ ಅಂದಿದ್ರಿ, ಈಗ ಆನ್ ಮಾಡಿ ನೋಡೋಣ”: ಸಿಎಂ ಡಿಕೆಶಿಗೆ ಶಾಸಕ ಸುನಿಲ್ ಕುಮಾರ್ ಸವಾಲು

Updated on: Aug 24, 2026 | 7:09 PM

ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಭ್ರಷ್ಟಾಚಾರ ಆರೋಪಗಳು ತೀವ್ರ ಸ್ವರೂಪ ಪಡೆದಿವೆ. ಮುಖ್ಯಮಂತ್ರಿಗಳ ಫೋನ್ ಮಾಡಿ ಹೇಳಿಕೆಗೆ ಸವಾಲು, ವಾಲ್ಮೀಕಿ ಹಗರಣ ಕುರಿತು ರಾಜೀನಾಮೆ ಬೇಡಿಕೆಗಳು ಪ್ರತಿಧ್ವನಿಸಿದವು. 2026-27ರ ಪೂರಕ ಅಂದಾಜುಗಳು ಮಂಡನೆಯಾದವು. ಶಾಸಕರು ಕಲಾಪ ವಿಸ್ತರಣೆ ಮತ್ತು ಸದನದಲ್ಲಿ ವಿವಿಧ ಪತ್ರಗಳನ್ನು ಮಂಡಿಸಿದರು.

ಬೆಂಗಳೂರು, ಆ.24: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಭ್ರಷ್ಟಾಚಾರದ ಆರೋಪಗಳು ಮತ್ತು ಹಣಕಾಸು ವಿಷಯಗಳ ಕುರಿತು ತೀವ್ರ ಚರ್ಚೆಗಳು ನಡೆದವು. ಅಧಿವೇಶನವನ್ನು ಒಂದು ವಾರ ವಿಸ್ತರಿಸುವ ಬಗ್ಗೆಯೂ ಪ್ರಸ್ತಾಪಿಸಲಾಯಿತು. ಈ ವೇಳೆ ಶಾಸಕ ಸುನಿಲ್ ಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡುತ್ತಾ, ಭ್ರಷ್ಟಾಚಾರವೇ ನಮ್ಮ ಮೊದಲ ಆದ್ಯತೆ ಎಂದು ಸರ್ಕಾರ ಘೋಷಿಸಿದೆ ಎಂದು ಟೀಕಿಸಿದ್ದರು. ಮುಖ್ಯಮಂತ್ರಿಗಳು ಹಿಂದೆ ಭ್ರಷ್ಟಾಚಾರ ನಡೆದರೆ ನನಗೆ ಫೋನ್ ಮಾಡಿ ಎಂದು ಹೇಳಿದ್ದನ್ನು ಉಲ್ಲೇಖಿಸಿ, ಈಗ ಒಂದು ಫೋನ್ ಆನ್ ಮಾಡಿ ನೋಡಲು ಸವಾಲು ಹಾಕಿದರು. ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೊಡಲೇಬೇಕು ಮತ್ತು ವಜಾ ಮಾಡಿ ಎಂದು ಹೇಳಿದರು. ಈ ವೇಳೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರು ಸುನಿಲ್ ಮಾತಿಗೆ ಏನು ಹೇಳದ್ರೂ ಎಂಬುದನ್ನು ಈ ವಿಡಿಯೋ ನೋಡಿ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More