ಬೆಳಗಾವಿ ಅಧಿವೇಶನ: ಸದನದಲ್ಲಿ ರೇವಣ್ಣರನ್ನು ಕಾಂಗ್ರೆಸ್ ಶಾಸಕರು ಕಾರ್ನರ್ ಮಾಡಿದಾಗ ಅಣ್ಣನ ನೆರವಿಗೆ ಧಾವಿಸಿದ ಹೆಚ್ ಡಿ ಕುಮಾರಸ್ವಾಮಿ

|

Updated on: Dec 06, 2023 | 7:41 PM

ತಮ್ಮ ಪಕ್ಷದ ಶಾಸಕ ಮತ್ತು ಹಿರಿಯಣ್ಣ ಕಾರ್ನರ್ ಆಗುತ್ತಿರುವುದನ್ನು ಗಮನಿಸುವ ಹೆಚ್ ಡಿ ಕುಮಾರಸ್ವಾಮಿ ರೇವಣ್ಣನ ರಕ್ಷಣೆ ಧಾವಿಸುತ್ತಾರೆ. ಮೊದಲೆಲ್ಲ 28 ಸ್ಥಾನಗಳನ್ನು ಗೆದ್ದು ಸಂಸತ್ತಿಗೆ ಹೋಗುತ್ತಿದ್ದ ಕಾಂಗ್ರೆಸ್ ಶಾಸಕರು ಯಾವತ್ತಾದರೂ ರಾಜ್ಯದ ನೀರಾವರಿ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಎತ್ತಿದ್ದಾರಾ ಅಂತ ಕೇಳಿದಾಗ ಕಾಂಗ್ರೆಸ್ ಶಾಸಕರು ಅವರ ಮೇಲೆ ಮುಗಿಬೀಳುತ್ತಾರೆ.

ಬೆಳಗಾವಿ: ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಸದನದಲ್ಲಿ ಮಾತಾಡಲು ಎದ್ದು ನಿಂತರೆ ಬೇರೆ ಸದಸ್ಯರು ಗಂಭೀರವಾಗಿ ಪರಿಗಣಿಸದಿರುವುದು ವಿಷಾದಕರ. ನಿನ್ನೆ ಅವರು ಕೊಬ್ಬರಿಗೆ ಬೆಂಬಲ ಬೆಲೆ ಆಗ್ರಹಿಸಿ ಮಾತಾಡಲ ಎದ್ದು ನಿಂತಾಗ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ನಾನು ಅದನ್ನೇ ಮಾತಾಡ್ತಾ ಇದ್ದೀನಿ, ನೀವು ಕೂತ್ಕೊಳ್ಳಿ ಅಂತ ಕೂರಿಸಿದರು. ಇವತ್ತು ಮತ್ತೇ ರೇವಣ್ಣ ಸರದಿ ಬಂದಾಗ ಕಾಂಗ್ರೆಸ್ ಶಾಸಕ ಹೆಚ್ ಎನ್ ಬಾಲಕೃಷ್ಣ (HN Balakrishna) ಅಡ್ಡಿಪಡಿಸುತ್ತಾರೆ. ಬೇರೆ ಕಾಂಗ್ರೆಸ್ ಶಾಸಕರು ಸಹ ಬಾಲಕೃಷ್ಣರೊಂದಿಗೆ ದನಿಗೂಡಿಸಿ ನಿಮ್ಮ ಮಗನೇ ಸಂಸದರಾಗಿದ್ದಾರಲ್ಲ? ಕೊಬ್ಬರಿಗೆ ಬೆಂಬಲ ಕೊಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವಂತೆ ಅವರಿಗೆ ಹೇಳಿ ಅಂತ ಗೇಲಿ ಮಾಡುತ್ತಾರೆ. ತಮ್ಮ ಪಕ್ಷದ ಶಾಸಕ ಮತ್ತು ಹಿರಿಯಣ್ಣ ಕಾರ್ನರ್ ಆಗುತ್ತಿರುವುದನ್ನು ಗಮನಿಸುವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ರೇವಣ್ಣನ ರಕ್ಷಣೆ ಧಾವಿಸುತ್ತಾರೆ. ಮೊದಲೆಲ್ಲ 28 ಸ್ಥಾನಗಳನ್ನು ಗೆದ್ದು ಸಂಸತ್ತಿಗೆ ಹೋಗುತ್ತಿದ್ದ ಕಾಂಗ್ರೆಸ್ ಶಾಸಕರು ಯಾವತ್ತಾದರೂ ರಾಜ್ಯದ ನೀರಾವರಿ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಎತ್ತಿದ್ದಾರಾ ಅಂತ ಕೇಳಿದಾಗ ಕಾಂಗ್ರೆಸ್ ಶಾಸಕರು ಅವರ ಮೇಲೆ ಮುಗಿಬೀಳುತ್ತಾರೆ. ತಾಳ್ಮೆ ಕಳೆದುಕೊಳ್ಳುವ ಕುಮಾರಸ್ವಾಮಿ, ಬಾಲಕೃಷ್ಣರನ್ನು ಏಕವಚನದಲ್ಲಿ ಗದರುತ್ತಾರೆ. ಮಾತಿನಲ್ಲಿ ಮರ್ಯಾದೆ ಇರಲಿ ಅಂತ ಬಾಲಕೃಷ್ಣ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on