ರಾಜಕೀಯ ಭವಿಷ್ಯ ಕುರಿತು ವಿ ಸೋಮಣ್ಣ ಗೊಂದಲದಲ್ಲಿರುವುದು ಮಾತುಗಳಿಂದ ಸ್ಪಷ್ಟವಾಗುತ್ತದೆ!
ಸೋಮಣ್ಣ ಬಿಜೆಪಿಯಿಂದ ಹೊರಬರಲು ಪ್ರಯತ್ನಿಸುತ್ತಿರುವುದು ಸುಳ್ಳಲ್ಲ ಆದರೆ ಅದ್ಯಾವುದೋ ಕೈ ಅವರನ್ನು ತಡೆಯುತ್ತಿದೆ. ಬಿಜೆಪಿ ಪಕ್ಷ ಸೇರಿದ್ದಕ್ಕೆ ಅವರು ಪಶ್ಚಾತ್ತಾಪ ಕೂಡ ವ್ಯಕ್ತಪಡಿಸುತ್ತಾರೆ. ತಮ್ಮ ದುರಹಂಕಾರ ತಪ್ಪು ನಿರ್ಣಯ ತೆಗೆದದುಕೊಳ್ಳಲು ಪ್ರೇರೇಪಿಸಿತು ಅಂತ ಅವರು ವಿಷಾದದಿಂದ ಹೇಳುತ್ತಾರೆ. ಬಿಎಸ್ ಯಡಿಯೂರಪ್ಪ ಅವರು ಸೋಮಣ್ಣರೊಂದಿಗೆ ಮಾತಾಡುವುದಾಗಿ ಬೆಳಗ್ಗೆ ಹೇಳಿದ್ದರು, ಅವರು ಮಾತಾಡಿರಬಹುದಾದ ಸಂದೇಹ ಸೋಮಣ್ಣ ಮಾತುಗಳಲ್ಲಿ ಗೋಚರಿಸುತ್ತದೆ.
ತುಮಕೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂಗದಿಗೆ ಎರಡನೇ ಸಲ ಮಾತಾಡಿದ ಬಿಜೆಪಿ ಹಿರಿಯ ನಾಯಕ ವಿ ಸೋಮಣ್ಣ (V Somanna) ನಿಸ್ಸಂದೇಹವಾಗಿ ಗೊಂದಲದಲ್ಲಿದ್ದಾರೆ. ಬಿಜೆಪಿಯಲ್ಲಿ ಮುಂದುವರಿಯಲು ಪೂರಕ ವಾತಾವರಣ ಇಲ್ಲದಿರೋದು ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಅವರು ಎಲ್ಲೂ ಸ್ಪಷ್ಟವಾಗಿ ಹೇಳಿಲ್ಲವಾದರೂ ಅವರ ಮಾತುಗಳಿಂದ ಅಂಥ ಸುಳಿವು ಸಿಗುತಿತ್ತು. ಡಿಸೆಂಬರ್ 6 ರಂದು ಅವರು ಬಿಜೆಪಿಯಲ್ಲಿ ಮುಂದುವರಿಯುವುದೇ ಇಲ್ಲವೇ ತಿಳಿಸುತ್ತೇನೆ ಅಂತ ಹೇಳಿದ್ದರು. ಆದರೆ ಇಂದು ಯಾವುದೇ ನಿರ್ಣಯ (decision) ಪ್ರಕಟಿಸಲಿಲ್ಲ. ಅದನ್ನು ಸೂಕ್ತ ಸಮಯದಲ್ಲಿ ಹೇಳುತ್ತೇನೆ ಅನ್ನುತ್ತಾರೆ. ತನಗೆ ಅನ್ಯಾಯವಾಗಿದೆ ಮತ್ತು ತನಗಿರುವ ಅರ್ಹತೆಯನ್ನು (merit) ಕಡೆಗಣಿಸಿ ಅವಕಾಶದಿಂದ ವಂಚಿಸಲಾಗಿದೆ, ಹೈಕಮಾಂಡ್ ಗೆ ತನ್ನ ನೋವು ಹೇಳಿಕೊಂಡಿದ್ದೇನೆ ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ಸೋಮಣ್ಣ ಹೇಳಿದರು. ಕಾಂಗ್ರೆಸ್ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿರುವುದರಿಂದಲೇ ಅವರಿಗೆ ತಮ್ಮ ಬಗ್ಗೆ ಕಾಳಜಿ ಪ್ರೀತಿ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ