ಬೆಳಗಾವಿ ಅಧಿವೇಶನ; ತೆಲಂಗಾಣದಲ್ಲಿ ಕೆಸಿಅರ್ ವಿರುದ್ಧ ಆಡಳಿತ ವಿರೋಧಿ ಅಲೆಯಿದ್ದ ಕಾರಣ ಕಾಂಗ್ರೆಸ್ ಗೆದ್ದಿದೆ: ಆರ್ ಅಶೋಕ, ವಿಪಕ್ಷ ನಾಯಕ

|

Updated on: Dec 04, 2023 | 3:59 PM

ಮಾಧ್ಯಮಗಳಲ್ಲಿ ಬಿಂಬಿತಗೊಂಡ ಹಾಗೆ ಪಂಚರಾಜ್ಯಗಳ ಚುನಾವಣೆ ಮುಂದಿನ ವರ್ಷ ನಡೆಯಲಿರುವ ಲೋಕ ಸಭಾ ಚುನಾವಣೆಗೆ ಸೆಮಿಫೈನಲ್ ಆಗಿತ್ತು, ಈಗ ಮೂರು ರಾಜ್ಯಗಳನ್ನು ಗೆದ್ದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರ್ವತ್ರಿಕ ಚುನಾವಣೆಯಲ್ಲಿ 30 ರಾಜ್ಯಗಳಲ್ಲಿ ಜಯಭೇರಿ ಬಾರಿಸಿ ಮತ್ತೊಮ್ಮೆ ಪ್ರಧಾನಿಯಾಗಿ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಲಿದ್ದಾರೆ ಎಂದು ಅಶೋಕ ಹೇಳಿದರು.

ಬೆಳಗಾವಿ: ಸನಾತನ ಧರ್ಮವನ್ನು ಅವಹೇಳನ ಮಾಡಿದ ಕಾರಣಕ್ಕಾಗೇ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಸೋತಿದೆ ಅಂತ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಟ್ವೀಟ್ ಮಾಡಿದ್ದರೂ ರಾಜ್ಯದಲ್ಲಿ ಸಿದ್ದರಾಮಯ್ಯ (Siddaramaiah) ಟಿಪ್ಪು ಖಡ್ಗ ಹಿಡಿದು ವಿಜೃಂಭಿಸುತ್ತಿದ್ದಾರೆ ಅಂತ ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಗೇಲಿ ಮಾಡಿದರು. ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಲು ನಗರಕ್ಕೆ ಆಗಮಿಸಿದ ಅಶೋಕ, ಇದಕ್ಕೆ ಮೊದಲು ಛತ್ತೀಸ್ ಗಢ್, ರಾಜಸ್ತಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು ಆದರೆ ಈ ಸಲ ಬಿಜೆಪಿ ಗೆದ್ದಿದೆ, ತೆಲಂಗಾಣದಲ್ಲಿ (Telangana) ಪಕ್ಷಕ್ಕೆ ಸೋಲುಂಟಾದರೂ ಹಿಂದಿನ ಚುನಾವಣೆಗಿಂತ ಮೂರು ಪಟ್ಟು ಹೆಚ್ಚು ಸ್ಥಾನ ಗೆದ್ದಿದೆ ಅಂತ ಅಶೋಕ ಹೇಳಿದರು. ಅಲ್ಲಿಮ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದ್ದಿದ್ದ ಕಾರಣ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:20 pm, Mon, 4 December 23

Follow us on