ಆಕಾಶದಲ್ಲಿ ಸಿಎಂ ಬೊಮ್ಮಾಯಿ ಬಜೆಟ್ ಪ್ರಚಾರ; ವಿಧಾನಸೌಧ ಸುತ್ತ ರೌಂಡ್ಸ್ ಹಾಕಿದ ಜೆಟ್- ವಿಡಿಯೋ ನೋಡಿ
ವಿಧಾನಸೌಧ ಸುತ್ತ ರೌಂಡ್ಸ್ ಹಾಕಿದ ಜೆಟ್

ಆಕಾಶದಲ್ಲಿ ಸಿಎಂ ಬೊಮ್ಮಾಯಿ ಬಜೆಟ್ ಪ್ರಚಾರ; ವಿಧಾನಸೌಧ ಸುತ್ತ ರೌಂಡ್ಸ್ ಹಾಕಿದ ಜೆಟ್- ವಿಡಿಯೋ ನೋಡಿ

Edited By:

Updated on: Mar 04, 2022 | 12:02 PM

ವಿಧಾನ ಸೌಧ ಸುತ್ತ ಜೆಟ್ ಒಂದು ರೌಂಡ್ಸ್ ಹಾಕಿದೆ. ಲಘು ವಿಮಾನದಲ್ಲಿ ಬಜೆಟ್ ಪ್ರಚಾರ ನಡೆಸಲಾಗಿದೆ. ಬಸವರಾಜ ಬೊಮ್ಮಾಯಿ ಇದೇ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ.

YouTube video player

ಬೆಂಗಳೂರು: ಇದೇ ಮೊದಲ ಬಾರಿಗೆ ಗಗನದಲ್ಲಿ ಬಜೆಟ್ ಪ್ರಚಾರ ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಯಿ ಮಂಡಿಸಲಿರುವ ಕರ್ನಾಟಕ ರಾಜ್ಯ ಬಜೆಟ್ ಪ್ರಚಾರವನ್ನು ವಿಶಿಷ್ಟವಾಗಿ ನಡೆಸಲಾಗಿದೆ. ಮೊದಲ ಬಾರಿಗೆ ಜೆಟ್ ಮೂಲಕ ಬಜೆಟ್ ಪ್ರಚಾರ ಮಾಡಲಾಗಿದೆ. ವಿಧಾನ ಸೌಧ ಸುತ್ತ ಜೆಟ್ ಒಂದು ರೌಂಡ್ಸ್ ಹಾಕಿದೆ. ಲಘು ವಿಮಾನದಲ್ಲಿ ಬಜೆಟ್ ಪ್ರಚಾರ ನಡೆಸಲಾಗಿದೆ. ಬಸವರಾಜ ಬೊಮ್ಮಾಯಿ ಇದೇ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ.

ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್‌ ಮಂಡಿಸಲಿರುವ ಹಿನ್ನೆಲೆ ವಿಧಾನಸೌಧಕ್ಕೆ ಸಿಎಂ ಕುಟುಂಬ ‌ಸದಸ್ಯರು ಆಗಮಿಸಿದ್ದಾರೆ. ಸಿಎಂ ಪತ್ನಿ, ಮಗ, ಮಗಳು, ಕುಟುಂಬದ ಸದಸ್ಯರು ವಿಧಾನಸೌಧಕ್ಕೆ ಆಗಮಿಸಿದ್ದಾರೆ. ವಿಧಾನಸೌಧದಲ್ಲಿ ಮಧ್ಯಾಹ್ನ 12.10ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದೆ. ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ ಒಪ್ಪಿಗೆ ಪಡೆಯಲಿದ್ದಾರೆ.

ಇದನ್ನೂ ಓದಿ: Karnataka Budget 2022: ಇಂದು ಚೊಚ್ಚಲ ಬಜೆಟ್‌ ಮಂಡಿಸಲಿದ್ದಾರೆ ಸಿಎಂ ಬೊಮ್ಮಾಯಿ; ನಿರೀಕ್ಷೆ ಹೆಚ್ಚಳ

ಇದನ್ನೂ ಓದಿ: Karnataka Budget 2022: ಮದ್ಯದ ಮೇಲೆ ತೆರಿಗೆ ಹೆಚ್ಚಿಸದಿರಲು ಮಾಡಿರುವ ಮನವಿಗೆ ಸ್ಪಂದಿಸುತ್ತಾರಾ ಬಸವರಾಜ್ ಬೊಮ್ಮಾಯಿ?

Published on: Mar 04, 2022 12:01 PM
Loading...
Unable to load recommendations.
Follow Us
TV9 Web

TV9 Kannada

Read More