ಮಾಜಿ ಸಿಎಂ ದೇವರಾಜ ಅರಸು ಅವರ ವಿಂಟೇಜ್ ಮರ್ಸಿಡೀಸ್ ಬೆಂಝ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
Devaraja Arasu car: ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ಬಳಸುತ್ತಿದ್ದ 1972ರ ಮರ್ಸಿಡೀಸ್ ಬೆಂಝ್ ಕಾರಿನಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಮುನಿಯಪ್ಪ ಮತ್ತು ತಂಗಡಗಿ ವಿಧಾನಸೌಧದ ಆವರಣದಲ್ಲಿ ಒಂದು ಸುತ್ತು ರೌಂಡ್ ಹೊಡೆದಿದ್ದಾರೆ.
ಬೆಂಗಳೂರು, ಆಗಸ್ಟ್ 20: ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ತಮ್ಮ ಅಧಿಕಾರಾವಧಿಯಲ್ಲಿ ಬಳಸುತ್ತಿದ್ದ 1972ರ ಮಾಡೆಲ್‌ನ ಮರ್ಸಿಡೀಸ್ ಬೆಂಝ್ ಕಾರಿನಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಕೆ. ಹೆಚ್. ಮುನಿಯಪ್ಪ ಮತ್ತು ಶಿವರಾಜ ತಂಗಡಗಿ ಅವರು ಸವಾರಿ ಮಾಡಿದ್ದಾರೆ. ಕಾರಿನ ಮುಂಭಾಗ, ಅಂದರೆ ಚಾಲಕನ ಪಕ್ಕದ ಸೀಟ್ನಲ್ಲಿ ಡಿಸಿಎಂ ಪರಮೇಶ್ವರ್ ಅವರು ಕೂತರೆ, ಹಿಂಬದಿಯ ಸೀಟ್ನಲ್ಲಿ ಸಚಿವರು ಕುಳಿತುಕೊಂಡಿದ್ದು ಗಮನ ಸೆಳೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
