ಕಬ್ಬು ಆಯ್ತು ಭತ್ತ, ಮೆಕ್ಕೆಜೋಳ ಬೆಂಬಲ ಬೆಲೆಗೆ ಆಗ್ರಹ: ಮತ್ತೆ ರಸ್ತೆಗಿಳಿದ ರಾಜ್ಯದ ರೈತರು
ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಹೋರಾಟದ ಬೆನ್ನಲ್ಲೇ ಇದೀಗ ಭತ್ತ, ಮೆಕ್ಕೆಜೋಳ ಮತ್ತು ಈರುಳ್ಳಿ ಬೆಳೆಗಾರರು ಸೂಕ್ತ ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೈಸೂರು, ದಾವಣಗೆರೆ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ನವೆಂಬರ್ 18: ಕಬ್ಬಿನ ಕಿಚ್ಚು ಇಡೀ ಉತ್ತರ ಕರ್ನಾಟಕವನ್ನೇ ವ್ಯಾಪ್ತಿಸಿತ್ತು. ಬೆಳಗಾವಿಯಲ್ಲಿ ದೊಡ್ಡ ಹೋರಾಟವೇ ಆಗಿತ್ತು. ರೈತರ ಹೋರಾಟಕ್ಕೆ ಮಣಿದ ಸರ್ಕಾರ, ಪ್ರತಿ ಟನ್ ಕಬ್ಬಿಗೆ 3,300 ರೂ. ಘೋಷಣೆ ಮಾಡಿತ್ತು. ಆದರೆ ಇದಕ್ಕೂ ಒಪ್ಪದ ಬಾಗಲಕೋಟೆ ರೈತರು ಮತ್ತೆ ಸಮರ ಸಾರಿದ್ದರು. ಆದರೆ ಇದೀಗ ಭತ್ತ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಭಾರೀ ಪ್ರತಿಭಟನೆ ಮಾಡಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 18, 2025 07:53 PM
