ವಿದ್ಯಾಗಮ ಜಾರಿಗೆ ಮುಂದಾದ ಕರ್ನಾಟಕ ಸರ್ಕಾರ; ಶಿಕ್ಷಣ ಅಧಿಕಾರಿಗಳಿಗೆ ಸೂಚನೆ

Edited By:

Updated on: Jan 08, 2022 | 11:58 AM

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದರೆ ಏರಿಕೆ ಶಾಲೆಗೆ ಬೀಗ ಬೀಳುವ ಆತಂಕ ಉಂಟಾಗಿದೆ. ಹೀಗಾಗಿ ಶಿಕ್ಷಣ ಇಲಾಖೆ ಪರ್ಯಾಯ ಶಿಕ್ಷಣದ ಮೊರೆ ಹೋಗಿದೆ. ಬೆಂಗಳೂರಿನಲ್ಲಿ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ.

ಕೊರೊನಾದಿಂದ ಶಾಲೆಗಳು ಮತ್ತೆ ಬಂದ್ ಆದರೆ ವಿದ್ಯಾಗಮ ಯೋಜನೆ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಮಕ್ಕಳ ಕಲಿಕೆ ಹಿನ್ನಡೆಯಾಗಬಾರದು ಅಂತ ಸಾರ್ವಜನಿಕ ಶಿಕ್ಷಣ ಇಲಾಖೆ ಪರ್ಯಾಯ ಶಿಕ್ಷಣ ಕ್ರಮಕ್ಕೆ ಮುಂದಾಗಿದ್ದು, ಮತ್ತೆ ವಿದ್ಯಾಗಮ ಯೋಜನೆ ಜಾರಿಗೆ ಮುಂದಾಗಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆ, ವಿದ್ಯಾಗಮ ಯೋಜನೆ ಜಾರಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲ ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಸದ್ಯ ಬೆಂಗಳೂರಿನಲ್ಲಿ ಮಾತ್ರ 1ರಿಂದ 9ನೇ ತರಗತಿವರೆಗೆ ಶಾಲೆ ಬಂದ್ ಮಾಡಲಾಗಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದರೆ ಏರಿಕೆ ಶಾಲೆಗೆ ಬೀಗ ಬೀಳುವ ಆತಂಕ ಉಂಟಾಗಿದೆ. ಹೀಗಾಗಿ ಶಿಕ್ಷಣ ಇಲಾಖೆ ಪರ್ಯಾಯ ಶಿಕ್ಷಣದ ಮೊರೆ ಹೋಗಿದೆ. ಬೆಂಗಳೂರಿನಲ್ಲಿ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಖಾಸಗಿ ಶಾಲೆಗಳು ಆನ್​ಲೈನ್ ತರಗತಿಗಳು ನಡೆಸುತ್ತವೆ. ಆದರೆ ಸರ್ಕಾರಿ ಹಾಗೂ ಗ್ರಾಮೀಣ ಭಾಗದ ಮಕ್ಕಳ ಗತಿ ಏನು ಅಂತಾ ಚಿಂತಿಸಿ ವಿದ್ಯಾಗಮ ಜಾರಿಗೆ ಮುಂದಾಗಿದೆ.

ಇದನ್ನೂ ಓದಿ

BOB Recruitment: ಬ್ಯಾಂಕ್​ ಆಫ್​ ಬರೋಡಾದಲ್ಲಿ ಸಂಪತ್ತು ನಿರ್ವಹಣಾ ಸೇವೆಗಳ ವಿಭಾಗದಲ್ಲಿ 58 ಹುದ್ದೆಗಳಿಗೆ ಅರ್ಜಿ ಆಹ್ವಾನ

ಫೇಸ್​ಬುಕ್ ಹಾಗೂ ಗೂಗಲ್​ಗೆ ಫ್ರಾನ್ಸ್​​ನಲ್ಲಿ ದಂಡದ ಬರೆ; ಅಷ್ಟಕ್ಕೂ ಈ ಟೆಕ್ ದೈತ್ಯರು ಮಾಡಿದ ತಪ್ಪೇನು?