AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಸ್​ಬುಕ್ ಹಾಗೂ ಗೂಗಲ್​ಗೆ ಫ್ರಾನ್ಸ್​​ನಲ್ಲಿ ದಂಡದ ಬರೆ; ಅಷ್ಟಕ್ಕೂ ಈ ಟೆಕ್ ದೈತ್ಯರು ಮಾಡಿದ ತಪ್ಪೇನು?

France fined Google and Facebook: ಬಳಕೆದಾರರ ಗೌಪ್ಯತಾ ನಿಯಮಗಳ ಉಲ್ಲಂಘನೆಯ ಕಾರಣ ಫ್ರಾನ್ಸ್​ನಲ್ಲಿ ಗೂಗಲ್ ಹಾಗೂ ಫೇಸ್​​ಬುಕ್​ಗೆ ದಂಡ ವಿಧಿಸಲಾಗಿದೆ. ಗೂಗಲ್​ಗೆ 150 ಮಿಲಿಯನ್ ಯುರೋ ಹಾಗೂ ಫೇಸ್​ಬಕ್​ಗೆ 60 ಮಿಲಿಯನ್ ಯುರೋ ದಂಡ ವಿಧಿಸಲಾಗಿದೆ.

ಫೇಸ್​ಬುಕ್ ಹಾಗೂ ಗೂಗಲ್​ಗೆ ಫ್ರಾನ್ಸ್​​ನಲ್ಲಿ ದಂಡದ ಬರೆ; ಅಷ್ಟಕ್ಕೂ ಈ ಟೆಕ್ ದೈತ್ಯರು ಮಾಡಿದ ತಪ್ಪೇನು?
ಗೂಗಲ್ ಸಿಇಒ ಸುಂದರ್ ಪಿಚೈ, ಫೇಸ್​ಬುಕ್ ಸಿಇಒ ಮಾರ್ಕ್ ಜುಕರ್​ಬರ್ಗ್
Follow us
TV9 Web
| Updated By: shivaprasad.hs

Updated on: Jan 08, 2022 | 8:00 AM

ಫ್ರಾನ್ಸ್​​ನಲ್ಲಿ ಅಧಿಕಾರಿಗಳು ಗೂಗಲ್ ಮತ್ತು ಫೇಸ್‌ಬುಕ್‌ಗೆ ‘ಕುಕೀಸ್’ ಬಳಕೆಗಾಗಿ 210 ಮಿಲಿಯನ್ ಯುರೋಗಳಷ್ಟು ($237 ಮಿಲಿಯನ್) ದಂಡವನ್ನು ವಿಧಿಸಿದ್ದಾರೆ. ಕುಕೀಸ್ ಎಂದರೆ ಆನ್‌ಲೈನ್‌ನಲ್ಲಿ ಬಳಕೆದಾರರನ್ನು ಟ್ರ್ಯಾಕ್ ಮಾಡಲು ಬಳಸುವ ಡೇಟಾವಾಗಿದೆ. ಯುರೂಪ್ ಒಕ್ಕೂಟವು ಬಳಕೆದಾರರ ವೈಯಕ್ತಿಕ ಮಾಹಿತಿ ರಕ್ಷಿಸುವ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಆಪಲ್ ಮತ್ತು ಅಮೆಜಾನ್ ಸೇರಿದಂತೆ ಅಮೇರಿಕಾದ ಟೆಕ್ ದೈತ್ಯರು ತಮ್ಮ ವ್ಯಾಪಾರದ ಮೇಲೆ ಒತ್ತಡ ಹೆಚ್ಚುತ್ತಿರುವುದಕ್ಕೆ ಆತಂಕಿತರಾಗಿದ್ದಾರೆ. ಪ್ರಸ್ತುತ ಗೂಗಲ್‌ಗೆ 150 ಮಿಲಿಯನ್-ಯೂರೋ ದಂಡವನ್ನು (ಸುಮಾರು ₹ 1259 ಕೋಟಿ) ಫ್ರಾನ್ಸ್‌ನ ಮಾಹಿತಿ ತಂತ್ರಜ್ಞಾನ ಮತ್ತು ಸ್ವಾತಂತ್ರ್ಯದ ರಾಷ್ಟ್ರೀಯ ಆಯೋಗ (CNIL) ವಿಧಿಸಿದೆ. ಇದು ಡಿಸೆಂಬರ್ 2020ರಲ್ಲಿ ಕಂಪನಿಯ ವಿರುದ್ಧ ಈ ಹಿಂದೆ ಕುಕೀಸ್​ಗೆ ಸಂಬಂಧಿಸಿದಂತೆ ವಿಧಿಸಲಾಗಿದ್ದ 100 ಮಿಲಿಯನ್ ಯುರೋಗಳ ದಂಡವನ್ನು ಮೀರಿಸಿದೆ. ಇದೇ ವೇಳೆ ಫೇಸ್​​ಬುಕ್​ಗೂ 60 ಮಿಲಿಯನ್ ಯುರೋ (ಸುಮಾರು 419 ಕೋಟಿ ರೂ) ದಂಡ ವಿಧಿಸಲಾಗಿದೆ.

ಸಿಎನ್​ಐಎಲ್ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಲು ಕಾರಣ ಫೇಸ್​ಬುಕ್, ಗೂಗಲ್ ಹಾಗೂ ಗೂಗಲ್​ಗೆ ಸಂಬಂಧಿಸಿದ ಯುಟ್ಯೂಬ್ ಕುಕೀಸ್ ಬಳಸಿಕೊಳ್ಳುವಷ್ಟು ಸುಲಭವಾಗಿ ಬಳಕೆದಾರರಿಗೆ ಅದನ್ನು ನಿರಾಕರಿಸಲು ಬಿಡುವುದಿಲ್ಲ. ಹೊಸ ನಿಯಮವನ್ನು ಅನ್ವಯಿಸಲು ಮೂರು ತಿಂಗಳು ಕಾಲವಿದ್ದು, ಅದರ ನಂತರ ಪ್ರತಿ ದಿನ 100,000 ಯುರೋ ದಂಡ ವಿಧಿಸಲಾಗುತ್ತದೆ ಎಮದು ಸಿಎನ್​ಐಎಲ್ ತಿಳಿಸಿದೆ. ತೀರ್ಪಿನ ನಂತರ ಎಚ್ಚೆತ್ತುಕೊಂಡಿರುವ ಗೂಗಲ್, ತನ್ನ ನಿಯಮಗಳನ್ನು ಬದಲಾಯಿಸುವುದಾಗಿ ಎಎಫ್‌ಪಿಗೆ ತಿಳಿಸಿದೆ. ಬಳಕೆದಾರರ ನಿರೀಕ್ಷೆಯಂತೆ ಹೊಸ ನಿಯಮಗಳನ್ನು ತರಲಿದ್ದೇವೆ ಎಂದು ಗೂಗಲ್ ಹೇಳಿದೆ.

ಕುಕೀಸ್ ಮುಖ್ಯ ಏಕೆ? ಕುಕೀಗಳು ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಬಳಕೆದಾರರ ಮಾಹಿತಿಯನ್ನು ಶೇಖರಿಸಿಡತ್ತವೆ. ಇದರಿಂದ ಬಳಕೆದಾರರು ಹುಡುಕಾಡಿದ ಮಾಹಿತಿಯ ಆಧಾರದಲ್ಲಿ ಜಾಹಿರಾತನ್ನು ನೀಡಲು ಗೂಗಲ್ ಹಾಗೂ ಫೇಸ್​ಬುಕ್​ಗೆ ಸುಲಭವಾಗುತ್ತವೆ. ಇದು ಆದಾಯದ ಮೂಲವಾಗಿದ್ದು, ಕಂಪನಿಗಳಿಗೆ ಬಹಳ ಮೌಲ್ಯಯುತ ಉಳ್ಳದ್ದಾಗಿದೆ. 2018ರ ಕಾನೂನಿನ ನಂತರ ಯುರೋಪಿಯನ್ ಒಕ್ಕೂಟವು ವೈಯಕ್ತಿಕ ಡಾಟಾದ ಮೇಲೆ ಕಠಿಣ ಕಾನೂನು ತಂದಿದೆ. ಇದರ ಆಧಾರದಲ್ಲಿ ಇಂಟರ್ನೆಟ್ ಕಂಪನಿಗಳು ತಮ್ಮ ಕಂಪ್ಯೂಟರ್‌ಗಳಲ್ಲಿ ಕುಕೀಗಳನ್ನು ಸ್ಥಾಪಿಸುವ ಮೊದಲು ಬಳಕೆದಾರರ ನೇರ ಒಪ್ಪಿಗೆಯನ್ನು ಪಡೆಯಬೇಕು ಎನ್ನುತ್ತವೆ. ಆದರೆ ಪ್ರಸ್ತುತ ಗೂಗಲ್ ಹಾಗೂ ಫೇಸ್​ಬುಕ್ ಬಳಕೆದಾರರಿಗೆ ಕುಕಿ ಸಂಗ್ರಹಿಸದೇ ಇರುವಂತೆ ಮಾಡಲು ಅಷ್ಟು ಸುಲಭಕ್ಕೆ ಅನುಮತಿಸುವುದಿಲ್ಲ.

ಅಂದರೆ ಕುಕಿಗಳನ್ನು ಅವು ಪಡೆಯಲು ಬಳಕೆದಾರರು ಒಂದೇ ಒಂದು ಕ್ಲಿಕ್ (ಸಮ್ಮತಿ) ಮಾಡಿದರೆ ಸಾಕು. ಆದರೆ ನಿರಾಕರಿಸಲು ಬಹಳ ಕಷ್ಟವಿದೆ. ಹಲವಾರು ಆಯ್ಕೆಗಳ ನಂತರ ಕುಕಿ ಬಳಕೆಯನ್ನು ನಿರಾಕರಿಸಬಹುದು. ಇದೇ ಕಾರಣದಿಂದ ಸಿಎನ್​ಐಎಲ್ ದಂಡ ವಿಧಿಸಿದೆ.

90 ನೋಟಿಸ್‌ಗಳನ್ನು ನೀಡಲಾಗಿತ್ತು! CNIL ಸಂಸ್ಥೆಯು Google, Facebook ಮತ್ತು YouTubeಗೆ ಬಿಗಿಯಾದ ಗೌಪ್ಯತಾ ನಿಯಮಗಳಿಗೆ ಸಂಬಂಧಿಸಿದಂತೆ ಅವುಗಳ ಆಯ್ಕೆ ಬದಲಾಯಿಸಲು ಏಪ್ರಿಲ್ 2021 ರವರೆಗೆ ಕಾಲಾವಕಾಶ ನೀಡಿತ್ತು. CNIL ಇತ್ತೀಚೆಗೆ ಏಪ್ರಿಲ್‌ನಿಂದ ಟೆಕ್​ ದೈತ್ಯ ಸಂಸ್ಥೆಗಳಿಗೆ ಬರೋಬ್ಬರಿ 90 ಔಪಚಾರಿಕ ನೋಟಿಸ್ ಕಳುಹಿಸಿತ್ತು. 2020 ರಲ್ಲಿ ಕೂಡ ಕುಕೀಗಳ ಬಳಕೆಗಾಗಿ ಗೂಗಲ್ ಮತ್ತು ಅಮೆಜಾನ್​ಗೆ ಕ್ರಮವಾಗಿ 100 ಮಿಲಿಯನ್ ಮತ್ತು 35 ಮಿಲಿಯನ್ ಯುರೋಗಳ ದಂಡವನ್ನು ವಿಧಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಕುಕೀಗಳ ಬಗ್ಗೆ ಬಳಕೆದಾರರಿಗೆ ‘ಸಾಕಷ್ಟು ಸ್ಪಷ್ಟವಾದ’ ಮಾಹಿತಿಯನ್ನು ನೀಡಲು ಕಂಪನಿಗಳು ವಿಫಲವಾಗಿವೆ ಎಂದು CNIL ವಾದಿಸಿತ್ತು. ಅಲ್ಲದೇ ಯುರೋಪಿಯನ್ ಒಕ್ಕೂಟದ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಶನ್ ಕಾನೂನನ್ನು ಗಾಳಿಗೆ ತೂರಲಾಗಿದೆ ಎಂದು ಹೇಳಿತ್ತು. ಈ ಕಾರಣಗಳಿಂದ ಗೂಗಲ್ ಹಾಗೂ ಫೇಸ್​ಬುಕ್​ಗೆ ದಂಡ ವಿಧಿಸಲಾಗಿದೆ.

ಇದನ್ನೂ ಓದಿ:

Viral Video: ಮುಳುಗುತ್ತಿದ್ದ ನಾಯಿಯನ್ನು ರಕ್ಷಿಸಿದ ಮಾಲೀಕ: ವಿಡಿಯೋ ವೈರಲ್​

ಒಮಿಕ್ರಾನ್ ಆತಂಕ: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಪ್ರಯಾಣ ಮಾರ್ಗಸೂಚಿ ಪರಿಷ್ಕರಣೆ; ಇಲ್ಲಿದೆ ಮಾಹಿತಿ

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ