AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ವೈಭವ್, ಜೈಸ್ವಾಲ್ ಸಿಡಿಲಬ್ಬರ; 209 ರನ್ ಬಾರಿಸಿಯೂ ಸೋತ ಗುಜರಾತ್

IPL 2025: ಏಪ್ರಿಲ್ 28 ರಂದು ನಡೆದ ಐಪಿಎಲ್ 2025 ರ 47ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 209 ರನ್ ಬಾರಿಸಿಯೂ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಈ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 14 ವರ್ಷದ ವೈಭವ್ ಸೂರ್ಯವಂಶಿಯ ಅವರ ಅದ್ಭುತ 100 ರನ್‌ಗಳ ಇನಿಂಗ್ಸ್‌ನ ಆಧಾರದ ಮೇಲೆ ಕೇವಲ 2 ವಿಕೆಟ್‌ ಕಳೆದುಕೊಂಡು ಜಯದ ನಗೆ ಬೀರಿತು.

IPL 2025: ವೈಭವ್, ಜೈಸ್ವಾಲ್ ಸಿಡಿಲಬ್ಬರ; 209 ರನ್ ಬಾರಿಸಿಯೂ ಸೋತ ಗುಜರಾತ್
Rajastan
ಪೃಥ್ವಿಶಂಕರ
|

Updated on:Apr 28, 2025 | 11:20 PM

Share

ಏಪ್ರಿಲ್ 28 ರಂದು ನಡೆದ ಐಪಿಎಲ್ 2025 (IPL 2025) ರ 47ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ (RR vs GT) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 209 ರನ್‌ಗಳ ಬೃಹತ್ ಸ್ಕೋರ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ಕೇವಲ 2 ವಿಕೆಟ್ ಕಳೆದುಕೊಂಡು 15.5 ಓವರ್​ಗಳಲ್ಲಿ ಗೆಲುವಿನ ನಗೆ ಬೀರಿತು. ರಾಜಸ್ಥಾನ್ ಪರ ಸಿಡಿಲಬ್ಬರದ ಶತಕ ಸಿಡಿಸಿದ 14 ವರ್ಷದ ವೈಭವ್ ಸೂರ್ಯವಂಶಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದು ಮಾತ್ರವಲ್ಲದೆ ಐಪಿಎಲ್ ಇತಿಹಾಸದಲ್ಲಿ ಎರಡನೇ ವೇಗದ ಶತಕ ಸಿಡಿಸಿದ ಹಾಗೂ ಐಪಿಎಲ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

209 ರನ್ ಕಲೆಹಾಕಿದ ಗುಜರಾತ್‌

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 209 ರನ್ ಗಳಿಸಿತು. ತಂಡದ ಪರ ಆರಂಭಿಕ ಆಟಗಾರ ಸಾಯಿ ಸುದರ್ಶನ್ 30 ಎಸೆತಗಳಲ್ಲಿ 39 ರನ್ ಗಳಿಸಿದರು. ಇವಲ್ಲದೆ, ನಾಯಕ ಶುಭ್​ಮನ್ ಗಿಲ್ ಕೂಡ 50 ಎಸೆತಗಳಲ್ಲಿ 84 ರನ್​ಗಳ ಇನ್ನಿಂಗ್ಸ್ ಆಡಿದರು. ಇನ್ನು ಕಳೆದ ಸೀಸನ್​ವರೆಗೂ ರಾಜಸ್ಥಾನ್ ಪರ ಆಡುತ್ತಿದ್ದ ಜೋಸ್ ಬಟ್ಲರ್, ಈ ಬಾರಿ ಅದೇ ತಂಡದ ವಿರುದ್ಧ ಕೇವಲ 26 ಎಸೆತಗಳಲ್ಲಿ 50 ರನ್ ಬಾರಿಸಿದರು. ಈ ಮೂವರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ, ಗುಜರಾತ್ ತಂಡದ ಬೇರೆ ಯಾವುದೇ ಆಟಗಾರನು ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗಲಿಲ್ಲ.

ವೈಭವ್- ಜೈಸ್ವಾಲ್ ಬಿರುಗಾಳಿ

210 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್​ಗೆ ವೈಭವ್ ಸೂರ್ಯವಂಶಿ ಹಿಂದೇದೂ ಸಿಕ್ಕಿರದ ಆರಂಭ ಒದಗಿಸಿಕೊಟ್ಟರು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದಿದ್ದ ವೈಭವ್ ಮೊದಲ 17 ಎಸೆತಗಳಲ್ಲಿ 6 ಸಿಕ್ಸರ್‌ ಮತ್ತು 3 ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರ್ಣಗೊಳಿಸಿದರು. ಇದಾದ ನಂತರ ಕೇವಲ 35 ಎಸೆತಗಳಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಪೂರ್ಣಗೊಳಿಸಿದರು. ಈ ಮೂಲಕ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಅವರು ಯೂಸುಫ್ ಪಠಾಣ್ ಅವರ ದಾಖಲೆಯನ್ನು ಮುರಿದರು.

IPL 2025: 35 ಎಸೆತಗಳಲ್ಲಿ ಶತಕ..! ಟಿ20 ಕ್ರಿಕೆಟ್​ನಲ್ಲಿ ಇತಿಹಾಸ ಬರೆದ 9ನೇ ಕ್ಲಾಸ್ ವೈಭವ್

ಇದಲ್ಲದೆ, ಕ್ರಿಸ್ ಗೇಲ್ ನಂತರ ಐಪಿಎಲ್‌ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತಿಮವಾಗಿ ವೈಭವ್ ತಮ್ಮ ಇನ್ನಿಂಗ್ಸ್‌ನಲ್ಲಿ 38 ಎಸೆತಗಳನ್ನು ಎದುರಿಸಿ 11 ಸಿಕ್ಸರ್‌ಗಳ ಜೊತೆಗೆ 7 ಬೌಂಡರಿಗಳನ್ನು ಬಾರಿಸಿದರು. ಆದರೆ, 11.5ನೇ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ಸೂರ್ಯವಂಶಿ ಇನಿಂಗ್ಸ್‌ಗೆ ಅಂತ್ಯ ಹಾಡಿದರು. ವೈಭವ್ ಹೊರತಾಗಿ ಯಶಸ್ವಿ ಜೈಸ್ವಾಲ್ ಕೂಡ ಅರ್ಧಶತಕ ಗಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:18 pm, Mon, 28 April 25