ಸುಪ್ರೀಮ್ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕಾನೂನು ತಜ್ಞರ ಜೊತೆ ಸಿದ್ದರಾಮಯ್ಯ ಸಭೆ
ಸಿದ್ದರಾಮಯ್ಯ ಇಂದು ಸಾಯಂಕಾಲ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು, ನೀರಾವರಿ ಮತ್ತು ಕಾನೂನು ತಜ್ಞರು, ಮಾಜಿ ಅಡ್ವೊಕೇಟ್ ಜನರಲ್ಗಳ ಜೊತೆ ಸಭೆ ನಡೆಸಿದರು. ಶಿವಕುಮಾರ್ ಮತ್ತು ಹಿರಿಯ ಸಚಿವ ಹೆಚ್ ಕೆ ಪಾಟೀಲ್ ಸಹ ಸಭೆಯಲ್ಲಿ ಭಾಗಿಯಾಗಿದ್ದರು.
ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ಕರ್ನಾಟಕ ಸರಕಾರಕ್ಕೆ ಸಂಕಷ್ಟಗಳ ಸರಮಾಲೆ, ಕಾವೇರಿ ನೀರಿಗೆ ಸಂಬಂಧಿಸಿಂತೆ ಒಂದಾದ ಮೇಲೆ ಒಂದರಂತೆ ಹಿನ್ನಡೆ. ಇವತ್ತ್ತು ದೆಹಲಿಯಲ್ಲಿ ಸಭೆ ನಡೆಸಿದ ಕಾವೇರಿ ನೀರು ನಿರ್ವಾಹಣಾ ಪ್ರಾಧಿಕಾರ (CWMA) ಅಕ್ಟೋಬರ್ 15 ರವರೆಗೆ ಪ್ರತಿದಿನ ತಮಿಳುನಾಡುಗೆ 3,000 ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿದೆ. ರೈತರ ಆಕ್ರೋಶ ಹೆಚ್ಚುತ್ತಿದೆ ಮತ್ತು ಸರ್ಕಾರಕ್ಕೆ ದಿಕ್ಕೆಟ್ಟಂಥ ಸ್ಥಿತಿ. ಇದೇ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಇಂದು ಸಾಯಂಕಾಲ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು, ನೀರಾವರಿ ಮತ್ತು ಕಾನೂನು ತಜ್ಞರು, ಮಾಜಿ ಅಡ್ವೊಕೇಟ್ ಜನರಲ್ಗಳ ಜೊತೆ ಸಭೆ ನಡೆಸಿದರು. ಶಿವಕುಮಾರ್ ಮತ್ತು ಹಿರಿಯ ಸಚಿವ ಹೆಚ್ ಕೆ ಪಾಟೀಲ್ ಸಹ ಸಭೆಯಲ್ಲಿ ಭಾಗಿಯಾಗಿದ್ದರು. ಕಾವೇರಿ ನೀರು ನಿರ್ವಾಹಣಾ ಪ್ರಾಧಿಕಾರದ ಸೂಚನೆಯಂತೆ ನೀರು ಹರಿಸದಿದ್ದರೆ (ನ್ಯಾಯಾಂಗ ನಿಂದನೆ) ಯಾವ ಕ್ರಮ ಎದುರಿಸಬೇಕಾಗುತ್ತದೆ ಅನ್ನುವ ಅಂಶವನ್ನೂ ಚರ್ಚಿಸಿದರೆನ್ನಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ