ಸುಪ್ರೀಮ್ ಕೋರ್ಟ್ ಹಿಜಾಬ್ ಪ್ರಕರಣ ತೀರ್ಪು; ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 13, 2022 | 12:32 PM

ಇಬ್ಬರು ನ್ಯಾಯಾಧೀಶರು ಸ್ಪ್ಲಿಟ್ ವರ್ಡಿಕ್ಟ್ ನೀಡಿರುವುದರಿಂದ ಪ್ರಕರಣವು ವಾಪಸ್ಸು ಮುಖ್ಯ ನ್ಯಾಯಾಧೀಶರ ಸುಪರ್ದಿಗೆ ಹೋಗಿದೆ. ಅವರು ಅದನ್ನು ಅಪೆಕ್ಸ್ ಕೋರ್ಟ್ ನ ವಿಸ್ತೃತ ಪೀಠಕ್ಕೆ ನೀಡಬಹುದು ಎಂದು ಗೃಹ ಸಚಿವರು ಹೇಳಿದ್ದಾರೆ.

ಬೆಂಗಳೂರು: ಬಹು-ನಿರೀಕ್ಷಿತ ಹಿಜಾಬ್ ತೀರ್ಪು ಗುರುವಾರ ಹೊರಬಿದ್ದ ಬಳಿಕ ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಮ್ ಕೋರ್ಟ್ ನ (Supreme Court) ದ್ವಿಸದಸ್ಯ ಪೀಠ ಭಿನ್ನ ತೀರ್ಪನ್ನು (split verdict) ನೀಡಿದೆ. ಒಬ್ಬ ನ್ಯಾಯಾಧೀಶರು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮನವಿ ಪರ ತೀರ್ಪು ನೀಡಿದರೆ ಮತ್ತೊಬ್ಬರು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದ್ದಾರೆ. ಹಾಗಾಗಿ, ಪ್ರಕರಣವು ವಾಪಸ್ಸು ಮುಖ್ಯ ನ್ಯಾಯಾಧೀಶರ ಸುಪರ್ದಿಗೆ ಹೋಗಿದೆ. ಅವರು ಅದನ್ನು ಅಪೆಕ್ಸ್ ಕೋರ್ಟ್ ನ ವಿಸ್ತೃತ ಪೀಠಕ್ಕೆ ನೀಡಬಹುದು ಎಂದು ಗೃಹ ಸಚಿವರು ಹೇಳಿದ್ದಾರೆ.