Anna Bhagya; ಕರ್ನಾಟಕ ಒಕ್ಕೂಟ ವ್ಯವಸ್ಥೆಯ ಭಾಗವಾಗಿದೆ, ಕೇಂದ್ರ ಅಕ್ಕಿ ನೀಡುವುದು ನಿರಾಕರಿಸುವಂತಿಲ್ಲ: ಕೆಎಂ ಶಿವಲಿಂಗೇಗೌಡ
ಮಾಜಿ ಪ್ರಧಾನ ಮಂತ್ರಿ ಮನ್ ಮೋಹನ್ ಸಿಂಗ್ ಆಹಾರ ಸುರಕ್ಷತೆ ಕಾಯ್ದೆಯನ್ನು ಜಾರಿಗೆ ತಂದಿದ್ದು ದೇಶದ ಯಾವುದೇ ಪ್ರಜೆ ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಎಂದು ಗೌಡರು ಹೇಳಿದರು.
ಬೆಂಗಳೂರು: ಕಾಂಗ್ರೆಸ್ ಶಾಸಕ ಕೆಎಮ್ ಶಿವಲಿಂಗೇಗೌಡ (KM Shivalingegowda) ರಾಜ್ಯದ ಬಿಜೆಪಿ ನಾಯಕರು (BJP leaders) ಮತ್ತು ಕೇಂದ್ರ ಸರ್ಕಾರವನ್ನು ಅಕ್ಕಿ ಪೂರೈಕೆ ವಿಷಯದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಒಮ್ಮೆ ಅಕ್ಕಿ ಕೊಡ್ತೀವಿ ಅಂತಾರೆ ಮರುದಿನವೇ ಇಲ್ಲ ಕೊಡಲ್ಲ ಅನ್ನುತ್ತಾರೆ, ನಮ್ಮ ಸರ್ಕಾರದ ಜೊತೆ ಇವರೇನು ಹುಡುಗಾಟ ಮಾಡುತ್ತಿದ್ದಾರೆಯೇ ಎಂದು ಗೌಡರು ಪ್ರಶ್ನಿಸಿದರು. ಬಡವರ ಒಳಿತಿಗಾಗಿ ಕೇಂದ್ರದ ಬಿಜೆಪಿ ಸರ್ಕಾರ ಅಕ್ಕಿ ಕೊಡಲು ನಿರಾಕರಿಸಿ ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ (Lok Sabha Polls) ಯಾವ ಮುಖ ಇಟ್ಟುಕೊಂಡು ಜನರ ವೋಟು ಯಾಚಿಸುತ್ತದೆ ಎಂದು ಶಾಸಕರು ಜರಿದರು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯವೊಂದು ಜನಪರ ಯೋಜನೆ ಜಾರಿಗೊಳಿಸುವಾಗ ಕೇಂದ್ರ ಸರ್ಕಾರ ಅದರ ಬೇಡಿಕೆಗೆ ಸ್ಪಂದಿಸಬೇಕಾಗುತ್ತದೆ. ಕೇಂದ್ರವೇನೂ ರಾಜ್ಯಕ್ಕೆ ಪುಕ್ಕಟೆಯಾಗಿ ಅಕ್ಕಿ ಕೋಡೋದಿಲ್ಲ ರಾಜ್ಯ ಸರ್ಕಾರ ಅದಕ್ಕೆ ಹಣ ಪಾವತಿಸುತ್ತದೆ ಎಂದು ಹೇಳಿದ ಅವರು, ಮಾಜಿ ಪ್ರಧಾನ ಮಂತ್ರಿ ಮನ್ ಮೋಹನ್ ಸಿಂಗ್ ಅವರು ಆಹಾರ ಸುರಕ್ಷತೆ ಕಾಯ್ದೆಯನ್ನು ರೂಪಿಸಿ ಜಾರಿಗೆ ತಂದಿದ್ದು ದೇಶದ ಯಾವುದೇ ಪ್ರಜೆ ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ, ಅವರ ಯೋಜನೆ ಈಗ ಅರ್ಥ ಕಳೆದಿಕೊಳ್ಳುತ್ತಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ