Abhishek Ambareesh: ‘ತುಂಬಾ ಊಟ ವೇಸ್ಟ್​ ಆಗಿದ್ದು ಬೇಜಾರಾಯ್ತು’; ಅಭಿಷೇಕ್ ಅಂಬರೀಷ್

Abhishek Ambareesh: ‘ತುಂಬಾ ಊಟ ವೇಸ್ಟ್​ ಆಗಿದ್ದು ಬೇಜಾರಾಯ್ತು’; ಅಭಿಷೇಕ್ ಅಂಬರೀಷ್

ರಾಜೇಶ್ ದುಗ್ಗುಮನೆ
|

Updated on:Jun 17, 2023 | 8:45 AM

ಕೆಲವರು ಅಡುಗೆ ಮಾಡುತ್ತಿದ್ದ ಜಾಗಕ್ಕೆ ಬಂದು ದಾಂಧಲೆ ನಡೆಸಿದ್ದಾರೆ. ಇದರಿಂದ ಸಾಕಷ್ಟು ಆಹಾರ ಹಾಳಾಗಿದೆ. ಈ ಬಗ್ಗೆ ಅಭಿಷೇಕ್ ಅಂಬರೀಷ್ ಅವರು ಬೇಸರ ಹೊರಹಾಕಿದ್ದಾರೆ.

ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಅವಿವಾ ಬಿಡಪ ಅವರ ಬೀಗರೂಟ ಕಾರ್ಯಕ್ರಮ ಜೂನ್ 16ರಂದು ಮಂಡ್ಯದಲ್ಲಿ ಅದ್ದೂರಿಯಾಗಿ ನಡೆಯಿತು. ಸಾವಿರಾರು ಮಂದಿ ಬಂದು ಊಟ ಮಾಡಿ ತೆರಳಿದ್ದಾರೆ. ಆದರೆ, ಕೆಲವರು ಅಡುಗೆ ಮಾಡುತ್ತಿದ್ದ ಜಾಗಕ್ಕೆ ಬಂದು ದಾಂಧಲೆ ನಡೆಸಿದ್ದಾರೆ. ಇದರಿಂದ ಸಾಕಷ್ಟು ಆಹಾರ ಹಾಳಾಗಿದೆ. ಈ ಬಗ್ಗೆ ಅಭಿಷೇಕ್ ಅಂಬರೀಷ್ ಅವರು ಬೇಸರ ಹೊರಹಾಕಿದ್ದಾರೆ. ‘ಬಂದಷ್ಟೂ ಜನರಿಗೆ ಊಟ ಬಡಿಸಿ ಎಂದು ನಾವು ಹೇಳಿದ್ದೆವು. ಆದರೆ, ಕೆಲವರು ಬಂದು ತೊಂದರೆ ಮಾಡಿದರು. ಇದರಿಂದ ಸಾಕಷ್ಟು ಊಟ ವೇಸ್ಟ್​ ಆಯಿತು. ಆ ಬಗ್ಗೆ ಬೇಸರ ಇದೆ’ ಎಂದಿದ್ದಾರೆ ಅಭಿಷೇಕ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jun 17, 2023 08:37 AM