Beegara Oota: ಅಭಿಷೇಕ್-ಅವಿವಾ ವಿವಾಹ ಬೀಗರ ಊಟ ಕಾರ್ಯಕ್ರಮದಲ್ಲೊಬ್ಬ ವಿಶಿಷ್ಟ ಅಂಬರೀಷ್ ಅಭಿಮಾನಿ!
ಅಂಬರೀಷ್ ಅಭಿಮಾನಿ ಅಲಂಕೃತಗೊಂಡ ಒಂದು ಶ್ವೇತವರ್ಣದ ಹಸವನ್ನು ತಮ್ಮೊಂದಿಗೆ ತೆಗೆದುಕೊಂಡು ಬಂದಿದ್ದರು.
ಮಂಡ್ಯ: ಇಂದು ಮಂಡ್ಯದ ಗೆಜ್ಜಲಗೆರೆಯಲ್ಲಿ ಹಾಕಿದ ಬೃಹತ್ ಜರ್ಮನ್ ಹ್ಯಾಂಗರ್ ಟೆಂಟ್ ನಲ್ಲಿ ಅಭಿಷೇಕ್-ಅವಿವಾ (Abhishek-Aviva) ವಿವಾಹ ಪ್ರಯುಕ್ತ ಬೀಗರ ಊಟ ಏರ್ಪಡಿಸಲಾಗಿತ್ತು. ಸುಮಾರು ಒಂದು ಲಕ್ಷ ಜನ ಔತಣಕೂಟದಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ರೆಬೆಲ್ ಸ್ಟಾರ್ ಅಂಬರೀಷ್ (Rebel Star Ambareesh) ಅವರ ಅಪ್ಪಟ ಅಭಿಮಾನಿಯೊಬ್ಬರು ಚೀರನಹಳ್ಳಿಯಿಂದ (Cheeranahalli) ಆಗಮಿಸಿದ್ದರು ಮತ್ತು ಅವರ ಆಗಮನ ಶೈಲಿಯೂ ವಿಶಿಷ್ಟವಾಗಿತ್ತು. ಅಲಂಕೃತಗೊಂಡ ಒಂದು ಶ್ವೇತವರ್ಣದ ಹಸವನ್ನು ಅವರು ತಮ್ಮೊಂದಿಗೆ ತೆಗೆದುಕೊಂಡು ಬಂದಿದ್ದರು. ಅದರ ಹಣೆಯ ಮೇಲೆ ಅಂಬರೀಷ್ ಮತ್ತು ಸುಮಲತಾ ಪೋಟೋ, ಎಡಭಾಗದಲ್ಲಿ ಅಭಿಷೇಕ್ ಮತ್ತು ಅವಿವಾ ಅವರಿಗೆ ಶುಭಕೋರುವ ಬರಹ ಮತ್ತು ಫೋಟೋ ಹಾಗೂ ಬಲಭಾಗದಲ್ಲಿ ತಮ್ಮ ಹೆಸರು ಮತ್ತು ವಿಳಾಸವನನ್ನು ಪೇಂಟ್ ಮಾಡಿಸಿದ್ದರು. ಅವರ ಅಭಿಮಾನ ನಿಜಕ್ಕೂ ವಿಶಿಷ್ಟವಾದದ್ದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos