Beegaroota: ಅಭಿಷೇಕ್-ಅವಿವಾ ಮದುವೆ ಬೀಗರ ಔತಣದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ನೆಚ್ಚಿನ ಖಾದ್ಯಗಳು!
ಸುಮಲತಾ ತಮ್ಮ ಪತಿಯ ನೆಚ್ಚಿನ ಅಡುಗೆಗಳ ತಯಾರಿ ಗೆಜ್ಜಲಗೆರೆಯ 15 ಎಕರೆ ಪ್ರದೇಶದಲ್ಲಿ ಮಾಡಿಸುತ್ತಿದ್ದಾರೆ.
ಮಂಡ್ಯ: ಇವತ್ತು ನಗರದಲ್ಲಿರುವ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಮನೆಯಲ್ಲಿ ಅವರ ಮಗ ಅಭಿಷೇಕ್ (Abhishek) ಮದುವೆಯ ಬೀಗರ ಔತಣಕೂಟ. ರೆಬೆಲ್ ಸ್ಟಾರ್ ಅಂಬರೀಷ್ (Rebel Star Ambareesh) ಕುಟುಂಬದ ಎಲ್ಲ ಸದಸ್ಯರು ಭರ್ಜರಿ ಬಾಡೂಟ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ತೊಡಗಿದ್ದಾರೆ. ಅಂಬರೀಷ್ ಭೋಜನಪ್ರಿಯರಾಗಿದ್ದರು ಮತ್ತು ಅವರಿಗೆ ನಾನ್ ವೆಜ್ ಊಟ ಬಹಳ ಇಷ್ಟವಾಗುತ್ತಿತ್ತು. ಮಂಡ್ಯದ ಗೌಡರೇ ಹಾಗೆ ಮಾರಾಯ್ರೇ ಬಾಡೂಟ ತಿನ್ನುವುದರಲ್ಲಿ ಮತ್ತು ತಿನ್ನಿಸುವುದರಲ್ಲಿ ಎತ್ತಿದ ಕೈ. ಸುಮಲತಾ ತಮ್ಮ ಪತಿಯ ನೆಚ್ಚಿನ ಡಿಶ್ ಗಳಾದ ಮುದ್ದೆ, ನಾಟಿ ಕೋಳಿ ಸಾಂಬಾರ್, ಚಿಕನ್ ಕಬಾಬ್, ಮಟನ್ ಬಿರಿಯಾನಿ ಮೊದಲಾದ ಅಡುಗೆಗಳ ತಯಾರಿ ಗೆಜ್ಜಲಗೆರೆಯ 15 ಎಕರೆ ಪ್ರದೇಶದಲ್ಲಿ ಮಾಡಿಸುತ್ತಿದ್ದಾರೆ. ಸುಮಾರು 50,000 ಜನ ಔತಣಕೂಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕುಟುಂಬದ ಸದಸ್ಯರೊಬ್ಬರು ಮೆನು ಮತ್ತು ತಯಾರಿ ಬಗ್ಗೆ ಟಿವಿ9 ಕನ್ನಡ ವಾಹಿನಿಯ ಮಂಡ್ಯ ವರದಿಗಾರನಿಗೆ ವಿವರಣೆ ನೀಡುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ