Uttara Kannada: ವರುಣನ ಕೃಪೆಗಾಗಿ ರೈತ ಮಹಿಳೆಯರಿಂದ ವಿಶಿಷ್ಟ ಆಚರಣೆ; ಕಪ್ಪೆಗಳ ಮದುವೆ ಮಾಡಿ  ಪ್ರಾರ್ಥನೆ, ವಿಡಿಯೋ ವೈರಲ್

Uttara Kannada: ವರುಣನ ಕೃಪೆಗಾಗಿ ರೈತ ಮಹಿಳೆಯರಿಂದ ವಿಶಿಷ್ಟ ಆಚರಣೆ; ಕಪ್ಪೆಗಳ ಮದುವೆ ಮಾಡಿ ಪ್ರಾರ್ಥನೆ, ವಿಡಿಯೋ ವೈರಲ್

ಕಿರಣ್ ಹನುಮಂತ್​ ಮಾದಾರ್
|

Updated on: Jun 17, 2023 | 9:22 AM

ಒಂದು ಕಡೆ ಚಂಡಮಾರುತದಿಂದ ಮಳೆ ಗಾಳಿಗೆ ಜನ ತತ್ತರಿಸುತ್ತಿದ್ದರೆ, ಇನ್ನೊಂದು ಭಾಗದ ಜನರು ಮಳೆರಾಯನಿಗಾಗಿ ಪ್ರಾರ್ಥನೆ ಮಾಡುತ್ತಿದ್ದು, ಅದರಂತೆ ಇದೀಗ ರೈತ ಮಹಿಳೆಯರು ಕಪ್ಪೆಗಳ ಮದುವೆ ಮಾಡಿ, ಮಳೆಗಾಗಿ ಪ್ರಾರ್ಥಿಸಿದ್ದಾರೆ.

ಉತ್ತರ ಕನ್ನಡ: ಒಂದು ಕಡೆ ಚಂಡಮಾರುತದಿಂದ ಮಳೆ ಗಾಳಿಗೆ ಜನ ತತ್ತರಿಸುತ್ತಿದ್ದರೆ, ಇನ್ನೊಂದು ಭಾಗದ ಜನರು ಮಳೆರಾಯನಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಹೌದು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನೀರಿನ ಅಭಾವ ಶುರುವಾಗಿದೆ. ಅದರಂತೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕಲಕೇರಿ ಗ್ರಾಮದಲ್ಲಿ ರೈತ ಮಹಿಳೆಯರು ಕಪ್ಪೆಗಳ ಮದುವೆ (Frogs Marriage) ಮಾಡಿ, ಮಳೆರಾಯನ ಹಾಡು ಹೇಳುತ್ತ, ಮಳೆಗಾಗಿ ಪಾರ್ಥನೆ ಮಾಡಿದ್ದಾರೆ. ಕಪ್ಪೆಗಳನ್ನ ವಿಶೇಷ ಅಲಂಕೃತ ಬುಟ್ಟಿಯಲ್ಲಿ ಇರಿಸಿ, ತಲೆ ಮೇಲೆ ಹೊತ್ತು, ಹುಯ್ಯೋ ಹುಯ್ಯೋ ಮಳೆರಾಯ ಎಂದು ಹಾಡು ಹೇಳಿ ಪ್ರಾರ್ಥಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ