Anti-Encroachment Drive: ಯುಪಿಯಂತೆ ಬೆಂಗಳೂರಲ್ಲೂ ಘರ್ಜಿಸಲಿದೆ ಬುಲ್ಡೋಜರ್, ಆತಂಕದಲ್ಲಿ ಐಟಿ ಕಂಪನಿಗಳು!
ಜನ ಒತ್ತುವರಿಗಳಿಂದ ತಮಗಾಗುತ್ತಿರುವ ನಾಗರಿಕ ಸಮಸ್ಯೆಗಳನ್ನು ಪದೇಪದೆ ಹೇಳಿಕೊಂಡ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದೆ.
ಬೆಂಗಳೂರು: ಮಹಾದೇವಪುರ ಮತ್ತು ಕೆಆರ್ ಪುರಂ ನಲ್ಲಿ ಐಟಿ-ಬಿಟಿ ಕಂಪನಿಗಳು (IT-BT Companies) ನಾಯಿಕೊಡೆಗಳಂತೆ ತಲೆಯೆತ್ತಿರುವುದು ಗೊತ್ತಿರುವ ಸಂಗತಿ ಮತ್ತು ಹಲವು ಕಂಪನಿಗಳು ಸರ್ಕಾರೀ ಜಾಗ ಮತ್ತು ರಾಜಾ ಕಾಲುವೆಗಳ (SWD) ಮೇಲೆ ಒತ್ತುವರಿ (encroachment) ಮಾಡಿಕೊಂಡಿರುವುದು ಸಹ ಬಹಿರಂಗ ಸತ್ಯ. ಇಷ್ಟು ಸಮಯ ಒತ್ತುವರಿ ಮಾಡಿಕೊಂಡಿದ್ದು ಕ್ಯಾರೆ ಅನ್ನದಂತಿದ್ದ ಕಂಪನಿಗಳಿಗೆ ರಾಹುಕಾಲ ಶುರುವಾದಂತಿದೆ. ಎರಡು ಕ್ಷೇತ್ರಗಳಲ್ಲಿ ವಾಸವಾಗಿರುವ ಜನ ಒತ್ತುವರಿಗಳಿಂದ ತಮಗಾಗುತ್ತಿರುವ ನಾಗರಿಕ ಸಮಸ್ಯೆಗಳನ್ನು ಪದೇಪದೆ ಹೇಳಿಕೊಂಡ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜನರ ಸಮಸ್ಯೆಗಳನ್ನು ಅಡ್ರೆಸ್ ಮಾಡಲು ಮುಂದಾಗಿದೆ. ಈ ಅಧಿಕಾರಿ ಹೇಳುವ ಪ್ರಕಾರ ಒತ್ತುವರಿಯಾಗಿರುವ ಸ್ಥಳಗಳನ್ನು ಪತ್ತೆ ಮಾಡಲು ಸರ್ವೇ ಕಾರ್ಯ ಆರಂಭವಾಗಿದ್ದು ಅದು ಪೂರ್ತಿಯಾದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು. ಮಹದೇವಪುರ ವಿಭಾಗದ ಮುನೇನಕೊಳಲು, ಪೈ ಗಾರ್ಡನ್ ಲೇಔಟ್, ಹೊರಮಾವು ಬಡಾವಣೆ ಮತ್ತು ಹೊಯ್ಸಳ ಲೇಔಟ್ ನಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ