Agnipath Scheme: ಅಗ್ನಿವೀರರ ಮೊದಲ ಬ್ಯಾಚ್ ದೇಶಸೇವೆಗೆ ತಯಾರು, ಬೆಂಗಳೂರಲ್ಲಿ ನಡೆದಿದೆ ಪಾಸಿಂಗ್ ಔಟ್ ಪರೇಡ್
ಮಹಾರಾಷ್ಟ್ರದ ಅಗ್ನಿವೀರ್ ದೇವೆರ್ ಪ್ರತೀಕ್ ಬಾಬನ್ ರಾವ್ ನೇತೃತ್ವದಲ್ಲಿ 212 ಅಗ್ನಿವೀರರು ಪಾಸಿಂಗ್ ಔಟ್ ಪರೇಡ್ ಮಾಡುತ್ತಿದ್ದಾರೆ.
ಬೆಂಗಳೂರು: ಹಲವಾರು ವಿವಾದಗಳ ನಡುವೆ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಡಿ (Agnipath Scheme) ನೂರಾರು ಯುವ ‘ಅಗ್ನಿವೀರರು’ (Agniveer) ಬೆಂಗಳೂರಿನ ಪ್ಯಾರಾಚೂಟ್ ರೆಜಿಮೆಂಟ್ ನಲ್ಲಿ (Parachute Regiment) ತರಬೇತಿ ಪಡೆದು ದೇಶದ ಗಡಿ ಕಾಯಲು, ಭಾರತಮಾತೆಯ ಸೇವೆ ಮಾಡಲು ಸನ್ನದ್ಧರಾಗಿದ್ದಾರೆ. ಇಂದು ಅವರ ಪಾಸಿಂಗ್ ಔಟ್ ಪರೇಡ್ (Passing Out Parade) ನಡೆಯಿತು. ಬದ್ಧತೆ ಮತ್ತು ಸಂಕಲ್ಪದೊಂದಿಗೆ ಯೋಧರಾಗಲು ನಿರ್ಧರಿಸಿರುವ ಯುವಕರಿಗೆ ಇದು ಅತ್ಯಂತ ಹೆಮ್ಮೆಯ ಕ್ಷಣ. ಅವರನ್ನು ನೋಡಲು ಆಗಮಿಸಿದ ತಂದೆತಾಯಿ, ಸಹೋದರ-ಸಹೋದರಿಯರು, ಆಪ್ತರು-ಸ್ನೇಹಿತರು, ಬಂಧು-ಬಳಗದವರ ಕಣ್ಣಲ್ಲಿ ಆನಂದ ಭಾಷ್ಪ, ಬಣ್ಣಿಸಲಾಗದಷ್ಟು ಅಭಿಮಾನ! ದೃಶ್ಯವನ್ನು ನೋಡುತ್ತಿರುವ ನಿಮ್ಮಲ್ಲೂ ಮೈ ನವಿರೇಳುತ್ತಿದ್ದರೆ ಆಶ್ಚರ್ಯವಿಲ್ಲ. ಯೋಧರು ಯೂನಿಫಾರ್ಮ್ ನಲ್ಲಿ ಪರೇಡ್ ಮಾಡುವುದನ್ನು ನೋಡುವುದು ಒಂದು ವಿಶಿಷ್ಟ ಅನುಭೂತಿ ಮಾರಾಯ್ರೇ! ಇಲ್ಲಿ 24-ವಾರ ತರಬೇತಿ ಹೊಂದಿದ 212 ಅಗ್ನಿವೀರರು ಪರೇಡ್ ಮಾಡುತ್ತಿದ್ದಾರೆ ಮತ್ತು ಅವರ ನೇತೃತ್ವವನ್ನು ಮಹಾರಾಷ್ಟ್ರದ ಅಗ್ನಿವೀರ್ ದೇವೆರ್ ಪ್ರತೀಕ್ ಬಾಬನ್ ರಾವ್ ವಹಿಸಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ