Anti-encroachment drive: ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಾಗ ಸರ್ಕಾರಕ್ಕೆ ಕೇವಲ ಬಡವರ ಮನೆ ಮಾತ್ರ ಕಾಣಿಸುತ್ತವೆಯೇ?

Anti-encroachment drive: ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಾಗ ಸರ್ಕಾರಕ್ಕೆ ಕೇವಲ ಬಡವರ ಮನೆ ಮಾತ್ರ ಕಾಣಿಸುತ್ತವೆಯೇ?

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 17, 2023 | 1:08 PM

ಬಿಬಿಎಂಪಿ ಖಾತೆಯನ್ನು ನಿರ್ವಹಿಸುತ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಆಗೋದನ್ನು ತಪ್ಪಿಸಬೇಕು.

ಬೆಂಗಳೂರು: ಸರ್ಕಾರ ಯಾವುದೇ ಆಗಿರಲಿ, ಒತ್ತುವರಿ ತೆರವು ಕಾರ್ಯಾಚರಣೆ (anti encroachment drive) ಆರಂಭಿಸಿದಾಗ ಅದಕ್ಕೆ ಕೇವಲ ಬಡವರ ಮನೆಗಳು ಮಾತ್ರ ಕಾಣಿಸುತ್ತವೆ ಅನ್ನೋದು ಸ್ಪಷ್ಟವಾಗಿದೆ. ದೊಡ್ಡ ಕುಳಗಳ ಅಪಾರ್ಟ್ ಮೆಂಟ್, ಸಾಪ್ಟ್ ವೇರ್ ಕಂಪನಿಗಳು (software companies); ಸರ್ಕಾರ ಅಥವಾ ಬೃಹತ್ ಬೆಂಗಳೂರು ಮಹಾನನಗರ ಪಾಲಿಕೆ ಸಿಬ್ಬಂದಿಗೆ ಕಾಣೋದಿಲ್ಲ. ಆಫ್ ಕೋರ್ಸ್ ಈ ಕಂಪನಿಗಳಿಂದ ಒತ್ತುವರಿಯಾಗಿದ್ದರೆ, ಅವುಗಳ ಮೇಲೆ ಮಾರ್ಕಿಂಗ್ ಕಾಣಿಸುತ್ತದೆ ಆದರೆ ಒತ್ತುವರಿಯಾದ ಸ್ಥಳವನ್ನು ತೆರವು ಮಾಡುವ ಕೆಲಸ ಮಾತ್ರ ನಡೆಯುವುದೇ ಇಲ್ಲ. ನಗರದ ಹೊಯ್ಸಳ ನಗರದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಅಲ್ಲಿನ ನಿವಾಸಿಗಳು ಈ ತಾರತಮ್ಯದ ಬಗ್ಗೆಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಬಿಬಿಎಂಪಿ ಖಾತೆಯನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಿರ್ವಹಿಸುತ್ತಿದ್ದಾರೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಆಗೋದನ್ನು ಅವರು ತಪ್ಪಿಸಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ