ಒತ್ತುವರಿ ತೆರವು ಕಾರ್ಯಾಚರಣೆ ಆರಂಭ; ಹೊಯ್ಸಳ ನಗರದಲ್ಲಿ ಸ್ಥಳೀಯರ ವಿರೋಧ, ಅಕ್ರಮ ಕಟ್ಟಡ ಮಾಲೀಕರಲ್ಲಿ ಆತಂಕ
ರಾಜಕಾಲುವೆಗಳ ಮೇಲೆಯೇ ಅಕ್ರಮವಾಗಿ ಐದಾರು ಅಂತಸ್ತಿನ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಸದ್ಯ ಈ ಅಕ್ರಮ ಕಟ್ಟಡಗಳಿಗೆ ಬಿಬಿಎಂಪಿ ಮಾರ್ಕ್ ಹಾಕಿದೆ. ಸ್ಪೈಸ್ ಗಾರ್ಡನ್ನಲ್ಲಿ ತೆರವು ಮಾಡುವ ಭಾಗದಲ್ಲಿ ಮಾರ್ಕ್ ಮಾಡಲಾಗಿದೆ.
ಬೆಂಗಳೂರು: ಬೆಟರ್ ಬೆಂಗಳೂರು, ವಿಷನ್ ಬೆಂಗಳೂರು ನಿರ್ಮಾಣ ಮಾಡುವ ಕನಸು ಕಾಣ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar), ರಾಜಕಾಲುವೆ ಒತ್ತುವರಿದಾರರು ಮತ್ತೆ ಸ್ಟೇ ತಂದವರ ವಿರುದ್ಧ ಗುಡುಗಿದ್ದರು. ನಿನ್ನೆ ಸಭೆ ನಡೆಸಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭ ಮಾಡಲು ಸೂಚನೆ ನೀಡಿದ್ದರು. ಇದೇ ಬೆನ್ನಲ್ಲೆ ಬಿಬಿಎಂಪಿ(BBMP) ಅಧಿಕಾರಿಗಳು ಅಲರ್ಟ್ ಆಗಿದ್ದು ಬೆಂಗಳೂರಿನ ಎಂಟು ವಲಯಗಳಲ್ಲೂ ಮತ್ತೆ ಜೆಸಿಬಿ ಘರ್ಜನೆ ಶುರುವಾಗಿದೆ.
ಬೆಂಗಳೂರಿನಲ್ಲಿ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಶುರುವಾಗಿದ್ದು ಮಹದೇವಪುರದ ಮುನೇನಕೊಳಲು ಬಳಿ ರಾಜಕಾಲುವೆ ಮೇಲೆಯೇ ಬೃಹತ್ ಕಟ್ಟಡಗಳ ನಿರ್ಮಾಣ ಮಾಡಲಾಗಿರುವುದು ಕಂಡು ಬಂದಿದೆ. ರಾಜಕಾಲುವೆಗಳ ಮೇಲೆಯೇ ಅಕ್ರಮವಾಗಿ ಐದಾರು ಅಂತಸ್ತಿನ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಸದ್ಯ ಈ ಅಕ್ರಮ ಕಟ್ಟಡಗಳಿಗೆ ಬಿಬಿಎಂಪಿ ಮಾರ್ಕ್ ಹಾಕಿದೆ. ಸ್ಪೈಸ್ ಗಾರ್ಡನ್ನಲ್ಲಿ ತೆರವು ಮಾಡುವ ಭಾಗದಲ್ಲಿ ಮಾರ್ಕ್ ಮಾಡಲಾಗಿದೆ. ಎಸ್ಡಬ್ಲ್ಯೂಡಿ ಬಿಲ್ಡಿಂಗ್ ನಂಬರ್ ಮಾರ್ಕ್ ಮಾಡಿ ತೆರವು ಕಾರ್ಯಾಚರಣೆಗೆ ಪ್ಲ್ಯಾನ್ ಮಾಡಿದ್ದಾರೆ.
ಅಲ್ಲದೆ ಮಾಹದೇವಪುರದ ಸ್ಪೈಸ್ ಗಾರ್ಡನ್ ಬಡವಾಣೆಯಲ್ಲಿ ಮಾಲೀಕರು ರಾಜಕಾಲುವೆ ಮೇಲೆ ಅಕ್ರಮವಾಗಿ ಪಿಜಿ ಕಟ್ಟಡಗಳನ್ನ ನಿರ್ಮಾಣ ಮಾಡಿದ್ದಾರೆ. ಪಾಲಿಕೆ ಒತ್ತುವರಿ ತೆರವಿಗೆ ಮಾರ್ಕ್ ಮಾಡಿದ್ದು ಒಈ ಬಗ್ಗೆ ಈ ಹಿಂದೆಯೇ ಮಾಹಿತಿ ನೀಡಿದೆ. ಆದ್ರೆ ಪಿಜಿ ಬಾಡಿಗೆದಾರರಿಗೆ ಈ ಬಗ್ಗೆ ಮಾಲೀಕರು ಯಾವುದೇ ಸೂಚನೆ ನೀಡಿಲ್ಲ. ಈಗ ಪಾಲಿಕೆ ಅಧಿಕಾರಿಗಳು ತೆರವಿಗೆ ಅನೌನ್ಸ್ ಮಾಡ್ತಾ ಇದ್ದಂತೆ ಬಾಡಿಗೆದಾರರು ಆತಂಕಕ್ಕೆ ಒಳಗಾಗಿದ್ದಾರೆ. ನಮಗೆ ಈ ಬಗ್ಗೆ ಮಾಹಿತಿ ಇಲ್ಲ. ಹೀಗಾ ಏಕಾಏಕಿ ಖಾಲಿ ಮಾಡಿ ಅಂತಿದ್ದಾರೆ ಎಂದು ಪಿಜಿ ಬಾಡಿಗೆದಾರರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಕಾಲುವೆ ಒತ್ತುವರಿ ತೆರವಿಗೆ ಸ್ಥಳೀಯರಿಂದ ವಿರೋಧ
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡ್‌ನ ಹೊಯ್ಸಳ ನಗರದಲ್ಲಿ ಒತ್ತುವರಿ ತೆರವು ಕಾರ್ಯ ಬೆನ್ನಲ್ಲೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ನಾವು ಈ ಸ್ಥಳದಲ್ಲಿ ವಾಸವಾಗಿದ್ದೇವೆ. ಆದರೆ ಏಕಾಏಕಿ ಮಾರ್ಕ್ ಮಾಡಿ ತೆರವು ಮಾಡುತ್ತಿದ್ದಾರೆ. ನಮ್ಮ ಬಳಿಯೂ ದಾಖಲೆಗಳಿವೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: Demolition Drive: ಇಂದು ಘರ್ಜಿಸಲಿದೆ ಬುಲ್ಡೋಜರ್, ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯ ಮತ್ತೆ ಶುರು
ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ ಚಂದ್ರ, ಮಹಾದೇವಪುರ ವಲಯದಲ್ಲಿ ಹಾಗೂ ಕೆಆರ್ ಪುರದಲ್ಲಿ ಎಲ್ಲಿ ರಾಜಕಾಲುವೆ ಇದೆ ಅಲ್ಲಿ ನೋಟಿಸ್ ಕೊಡಲಾಗಿದೆ. ನೋಟಿಸ್ ನಂತರ ಕೋರ್ಟ್ನಿಂದ ಫೈನಲ್ ಆರ್ಡ್ರ್ ಬಂದ ಮೇಲೆ ತೆರವು ಮಾಡಲಾಗುತ್ತಿದೆ. IT ಪಾರ್ಕ್, ಶಾಪಿಂಗ್ ಕಂಪ್ಲೆಕ್ಸ್, ಮನೆಗಳಿದ್ದಾವೆ ಅದನ್ನ ತೆರವು ಮಾಡುತ್ತೇವೆ ಎಂದರು.
ಮತ್ತೊಂದೆಡೆ ಮಾಹದೇವಪುರ ಸಿಇ ಲೋಕೇಶ್ ಮಾತನಾಡಿದ್ದು, ಮುನೇನಕೊಳಲು ಏರಿಯಾದಲ್ಲಿ ತೆರವು ಮಾಡಲು ಬಂದಿದ್ದೇವೆ. ಕೆಆರ್ ಪುರದ ಹೊಯ್ಸಳ ನಗರದಲ್ಲಿ ತೆರವು ಮಾಡಲು ಅಂಗಡಿಗಳು ಸಮಯಾವಕಾಶ ಕೇಳಿದ್ದಾರೆ. ಮುನೇಕೊಳಲು ವಾರದ ಹಿಂದೆ ಸಿದ್ದತೆ ನಡೆಸಿದ್ದೇವೆ. ಇಲ್ಲಿ ವಕೀಲರು ತಡೆಯಾಜ್ಞೆ ಇದೆ ಅಂತ ಪತ್ರ ತೋರಿಸಿದ್ದಾರೆ. ಅದನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಕೋರ್ಟ್ ಸ್ಟೇ ಕುರಿತು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಸ್ಪೈಸ್ ಗಾರ್ಡ್ನನ್ ಸರ್ವೇ ನಂಬರ 34 ಇದೆ ಎಂದು ಹೇಳ್ತಿದ್ದಾರೆ. ಕೆಲ ಗೊಂದಲಗಳಿದೆ, ಅದನ್ನು ಬಗೆಹರಿಸುತ್ತಿದ್ದೇವೆ. 22 ಕಡೆ ಮಾರ್ಕ್ ಮಾಡಿದ್ದೆವು, ಗೊಂದಲ ಬಗೆಹರಿದ ನಂತರ ತೆರವು ಮಾಡುತ್ತೇವೆ ಎಂದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:36 pm, Sat, 17 June 23