Karnataka Legislative Assembly Session, watch Live; ಕರ್ನಾಟಕ ವಿಧಾನಸಭೆ ಬಜೆಟ್ ಅಧಿವೇಶನದ ನೇರಪ್ರಸಾರ

|

Updated on: Jul 10, 2023 | 12:13 PM

ವಿಧಾನ ಸಭೆ ಇಂದಿನ ಕಾರ್ಯಕಲಾಪಗಳ ನೇರ ಪ್ರಸಾರ

ಬೆಂಗಳೂರು: ರಾಜ್ಯ ವಿಧಾನ ಸಭೆಯ ಕೆಳಮನೆಯಲ್ಲಿ ಬಜೆಟ್ ಅಧಿವೇಶನದ ಕಾರ್ಯಕಲಾಪ ಶುರುವಾಗಿದೆ. ಶುಕ್ರವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ರಾಜ್ಯ ಆಯವ್ಯಯ ಪತ್ರ 2023 (Budget 2023) ಮಂಡಿಸಿದ ಬಳಿಕ ವಾರಾಂತ್ಯದ ಹಿನ್ನೆಲೆಯಲ್ಲಿ ಎರಡು ದಿನಗಳ ಮಟ್ಟಿಗೆ ಸದನದ ಕಾರ್ಯಕಲಾಪ ಸ್ಥಗಿತಗೊಂಡಿತ್ತು. ಸದನದಲ್ಲಿ ಇಂದು ಬಿರುಸಿನ ಕಲಾಪ ನಡೆಯುತ್ತಿದೆ. ಬಜೆಟ್, ಗ್ಯಾರಂಟಿಗಳ ಅನುಷ್ಠಾನ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಾಡುತ್ತಿರುವ ಭ್ರಷ್ಟಾಚಾರದ ಆರೋಪ, ಪೆನ್ ಡ್ರೈವ್ ಮೊದಲಾದ ಸಂಗತಿಗಳ ಮೂಲಕ ವಿರೋಧ ಪಕ್ಷಗಳ ನಾಯಕರು ಸಿದ್ದರಾಮಯ್ಯ ಸರ್ಕಾರವನ್ನು ಕಾರ್ನರ್ ಮಾಡಲು ಅಣಿಯಾಗಿದ್ದಾರೆ. ವಿಧಾನ ಸಭೆ ಇಂದಿನ ಕಾರ್ಯಕಲಾಪಗಳ ನೇರ ಪ್ರಸಾರ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ