Karnataka Legislative Assembly Session Live: ವಿಧಾನ ಮಂಡಲ ಅಧಿವೇಶನ ನೇರ ಪ್ರಸಾರ
Karnataka Assembly Session Live: ವಿಧಾನ ಮಂಡಲ ಅಧಿವೇಶನ ಆರಂಭವಾಗಿದೆ. ಅಧಿವೇಶನದಲ್ಲಿ ಹಲವು ವಿಚಾರಗಳು ಚರ್ಚೆ, ಗದ್ದಲಕ್ಕೆ ಕಾರಣವಾಗಿವೆ. ಚರ್ಚೆ, ಗದ್ದಲದ ನಡುವೆ ಹಲವು ಮಸೂದೆಗಳು ಮಂಡನೆಯಾಗಿವೆ. ಇನ್ನೂ ಅನೇಕ ಮಸೂದೆಗಳು ಮಂಡನೆಯಾಗಬೇಕಿವೆ. ಇಂದಿನ ಅಧಿವೇಶನವನ್ನು ಲೈವ್ ಆಗಿ ಇಲ್ಲಿ ನೋಡಿ.
ವಿಧಾನ ಮಂಡಲ ಅಧಿವೇಶನ ಆರಂಭದ ಮೊದಲ ದಿನದಿಂದಲೂ ಇಲ್ಲಿಯವರೆಗೆ ಕೆಳಮನೆ ವಿಧಾನಸಭೆ ಮತ್ತು ಮೇಲ್ಮನೆ ವಿಧಾನ ಪರಿಷತ್ತಿನಲ್ಲಿ ಮುಡಾ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಬಗ್ಗೆ ಚರ್ಚೆ, ಪ್ರತಿಭಟನೆ ನಡೆದವು. ಗದ್ದಲಗಳ ನಡುವೆ ಹಲವು ಮಸೂದೆಗಳು ಮಂಡನೆಯಾದವು, ಕೆಲವು ಅಂಗಿಕಾರಗೊಂಡವು. ಯಥಾಪ್ರಕಾರ ಪ್ರತಿ ಅಧಿವೇಶನದಂತೆ ಈ ಅಧಿವೇಶನದಲ್ಲೂ ಪರಸ್ಪರ ಏಕವಚನ ಪ್ರಯೋಗ, ಆರೋಪ-ಪ್ರತ್ಯಾರೋಪ ಮಾಡಲಾಗುತ್ತಿದೆ. ಇದರೆಲ್ಲದರ ನಡುವೆ ಕ್ಷೇತ್ರಗಳ ಬಗ್ಗೆಯೂ ಚರ್ಚೆಯಾಗಿದೆ. ಈ ಅಧಿವೇಶನ ಇಲ್ಲಿಯವರೆಗೆ ಎರಡು ವಿಶೇಷತೆ ಸಾಕ್ಷಿಯಾಗಿದೆ. ಒಂದು ಜನಪ್ರತಿನಿಧಿಗಳ ಮಧ್ಯಾಹ್ನದ ಕಿರು ನಿದ್ರೆಗಾಗಿ ವಿಧಾಸಭೆಯಲ್ಲಿ ಸಭಾಧ್ಯಕ್ಷರು ವಿಶೇಷ ಆಸನದ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ವಿಧಾಸಭೆ ಸಭಾಂಗಣದಲ್ಲಿ ಸಂವಿಧಾನ ಪೂರ್ವಪೀಠಿಕೆ ಹಾಕಿದ್ದಾರೆ. ಇಂದಿನ ಅಧಿವೇಶನ ಲೈವ್ ಇಲ್ಲಿದೆ.
Published on: Jul 24, 2024 11:10 AM
Latest Videos