Karnataka Legislative Council, Live: ವಿಧಾನ ಪರಿಷತ್ ಅಧಿವೇಶನ, ಮಂಗಳವಾರದ ಕಾರ್ಯಕಲಾಪಗಳ ನೇರ ಪ್ರಸಾರ

|

Updated on: Jul 18, 2023 | 11:52 AM

ವಿಧಾನ ಪರಿಷತ್ ನಲ್ಲಿ ನಡೆಯತ್ತಿರುವ ಕಾರ್ಯಕಲಾಪಗಳ ನೇರ ಪ್ರಸಾರ.

ಬೆಂಗಳೂರು: ರಾಜ್ಯ ವಿಧಾನ ಪರಿಷತ್ ನಲ್ಲಿ (Legislative Council) ಅಧಿವೇಶನ ಮಂಗಳವಾರದ ಕಾರ್ಯಕಲಾಪಗಳು ಅರಂಭಗೊಂಡಿವೆ. ಸದನ ಆರಂಭವಾಗುತ್ತಿದ್ದಂತೆಯೇ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಅವರು ಬಿಜೆಪಿ ಸದಸ್ಯ ನಾರಾಯಣಸ್ವಾಮಿ (Narayanaswamy) ಅವರ ಮೇಲೆ ರೇಗಿದರು. ಪೊಲೀಸ್ ಪ್ರಕರವವೊಂದನ್ನು ಪ್ರಸ್ತಾಪಿಸುವಾಗ ಧಿಕ್ಕಾರ ಅಂತ ಪದ ಬಳಸಿದ್ದು, ಸಭಾಪತಿಗಳಿಗೆ ಸರಿಯೆನ್ನಿಸಲಿಲ್ಲ. ಕೂಡಲೇ ಅವರು ಸದಸ್ಯರನ್ನು ಕುರಿತು ಧಿಕ್ಕಾರದಂಥ ಪದಗಳನ್ನು ಬಳಸಿದರೆ ನಿಮ್ಮ ಮಾತು ಕಡತ ಸೇರುವುದಿಲ್ಲ ಎನ್ನುತ್ತಾರೆ. ನಂತರ ನಾರಾಯಣಸ್ವಾಮಿ ಎತ್ತಿದ ಪ್ರಶ್ನೆಗೆ ಗೃಹ ಸಚಿವ ಜಿ ಪರಮೇಶ್ವರ ಉತ್ತರ ನೀಡುತ್ತಾರೆ. ವಿಧಾನ ಪರಿಷತ್ ನಲ್ಲಿ ನಡೆಯತ್ತಿರುವ ಕಾರ್ಯಕಲಾಪಗಳ ನೇರ ಪ್ರಸಾರ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ