ಡಿಕೆ ಸಹೋದರರ ದೈತ್ಯಶಕ್ತಿ ಎದುರು ಸೆಣಸುವುದು ಕಷ್ಟ: ಸಿಪಿ ಯೋಗೇಶ್ವರ, ಬಿಜೆಪಿ ನಾಯಕ

|

Updated on: Jun 01, 2024 | 2:49 PM

ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಹೊಂದಿರುವುದರಿಂದ ತಮ್ಮನ ಗೆಲುವಿಗೆ ಅಧಿಕಾರದ ಸದುಪಯೋಗ ಮತ್ತು ದುರುಪಯೋಗ ಎರಡೂ ಮಾಡಿಕೊಂಡಿರುತ್ತಾರೆ. ಅಫ್ ದಿ ರೆಕಾರ್ಡ್ ಹೇಳಿಕೊಂಡಿರುವಂತೆ ₹ 450-500 ಕೋಟಿ ಹಣವನ್ನು ಚುನಾವಣೆಯಲ್ಲಿ ಖರ್ಚುಮಾಡಿದ್ದಾರೆ ಎಂದು ಯೋಗೇಶ್ವರ್ ಹೇಳಿದರು.

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಪರ ಪ್ರಚಾರ ಮಾಡುವಾಗ ಗೆಲುವು ನಮ್ಮದೇ ಎಂದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಅವರ ಇವತ್ತಿನ ಮಾತುಗಳಲ್ಲಿ ನಿರಾಶೆ, ಹತಾಶೆ ಇಣುಕುತಿತ್ತು. ಡಾ ಮಂಜುನಾಥ್ ಗೆಲ್ಲುವ ಬಗ್ಗೆ ಆಶಾಭಾವನೆ ವ್ಯಕ್ತಪಡಿಸುತ್ತಾರಾದರೂ, ಡಿಕೆ ಸಹೋದರರ ಹಣಬಲ, ಜನಬಲ ಮತ್ತು ಅಧಿಕಾರ ಬಲದ ವಿರುದ್ಧ ಸೆಣಸುವುದು ಅಲೆಗಳಿಗೆ ಎದುರಾಗಿ ಈಜಿದಂತೆ ಎಂಬರ್ಥದಲ್ಲಿ ಮಾತಾಡುತ್ತಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸಹೋದರರು ದೈತ್ಯಶಕ್ತಿ ಎಂದು ಹೇಳುವ ಯೋಗೇಶ್ವರ್ ತಮ್ಮ ಊಹೆಗೆ ಮೀರಿದ ಫಲಿತಾಂಶ ಬಂದರೆ ಅದು ವಿರೋಜಿಯ ಗೆಲುವಿ ಅನಿಸಿಕೊಳ್ಳಲಿದೆ ಅನ್ನುತ್ತಾರೆ. ಡಿಕೆ ಸಹೋದರರು ಮತದಾನದ ಹಿಂದಿನ ದಿನ ಮಹಿಳೆಯರ ಖಾತೆಗಳಿಗೆ ₹ 2,000 ಹಾಕಿರುವುದರಿಂದ ಅವ ವೋಟಗಳ ಬಿಜೆಪಿಗೆ ಬಿದ್ದಿರಲಾರವು. ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಹೊಂದಿರುವುದರಿಂದ ತಮ್ಮನ ಗೆಲುವಿಗೆ ಅಧಿಕಾರದ ಸದುಪಯೋಗ ಮತ್ತು ದುರುಪಯೋಗ ಎರಡೂ ಮಾಡಿಕೊಂಡಿರುತ್ತಾರೆ. ಅಫ್ ದಿ ರೆಕಾರ್ಡ್ ಹೇಳಿಕೊಂಡಿರುವಂತೆ ₹ 450-500 ಕೋಟಿ ಹಣವನ್ನು ಚುನಾವಣೆಯಲ್ಲಿ ಖರ್ಚುಮಾಡಿದ್ದಾರೆ ಎಂದು ಯೋಗೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಡಿಕೆ ಸುರೇಶ್ ಗೆಲುವಿಗೆ ಸಹಾಯ ಮಾಡಿದ್ದೆ: ಸತ್ಯ ಬಾಯಿಬಿಟ್ಟ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್