ಲೋಕಸಭಾ ಚುನಾವಣೆ 2024: ಬಳ್ಳಾರಿಯಲ್ಲಿ ಕೋಟಿಗಟ್ಟಲೆ ಹಣ, ಮೂಟೆಗಟ್ಟಲೆ ಚಿನ್ನ, ಬೆಳ್ಳಿ ಜಪ್ತಿ

|

Updated on: Apr 07, 2024 | 7:53 PM

ಬಳ್ಳಾರಿ ನಗರದ ಕಂಬಳಿ ಬಜಾರ್‌ನಲ್ಲಿ ಚುನಾವಣಾಧಿಕಾರಿಗಳು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5.60 ಕೋಟಿ ನಗದು ಮತ್ತು ಕೆಜಿಗಟ್ಟಲೆ ಚಿನ್ನದ ಆಭರಣ ಮತ್ತು ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಹಣ ಸಾಗಿಸುತ್ತಿದ್ದವರನ್ನು ಬ್ರೂಸ್‌ಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಚುನಾವಣಾ ಸಮಯದಲ್ಲಿ ನಡೆಯುವ ಅಕ್ರಮಗಳ ಪತ್ತೆಗೆ ಹಾಗೂ ಚುನಾವಣಾ ಆಯೋಗವು ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಮತದಾರರಿಗೆ ಆಮಿಷ ವಡ್ಡಲು ಅಕ್ರಮವಾಗಿ ಸಾಗಿಸುವ ಹಣ ಅಥವಾ ವಸ್ತುಗಳ ಮೇಲೆ ಆಯೋಗ ಕಣ್ಣಿಟ್ಟಿದೆ. ಬಳ್ಳಾರಿ ನಗರದ ಕಂಬಳಿ ಬಜಾರ್‌ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 5.60 ಲಕ್ಷ ನಗದು, 3 ಕೆ.ಜಿ ಚಿನ್ನ, 68 ಕೆ.ಜಿ ಬೆಳ್ಳಿ ಗಟ್ಟಿ, 103 ಕೆ.ಜಿ ಬೆಳ್ಳಿ ಆಭರಣಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹಣ, ಚಿನ್ನ ಮತ್ತು ಬೆಳ್ಳಿ ಹೇಮಾ ಜ್ಯುವೆಲರ್ಸ್‌ ಮಾಲೀಕ ನರೇಶ್ ಸೋನಿ ಎಂಬುವರಿಗೆ ಸೇರಿದೆ. ಹಣ ಸಾಗಿಸುತ್ತಿದ್ದವರನ್ನು ಬ್ರೂಸ್‌ಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 07, 2024 07:51 PM