4 ವರ್ಷದ ಬಳಿಕ ಧಾರವಾಡಕ್ಕೆ ವಿನಯ್​ ಕುಲಕರ್ಣಿ; ಏನಂದ್ರು ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: May 07, 2024 | 8:59 PM

ಬಿಜೆಪಿ ಮುಖಂಡ ಯೋಗೀಶ್​ ಗೌಡ ಕೊಲೆ ಪ್ರಕರಣಕದಲ್ಲಿ ಸಿಲುಕಿರುವ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಇಂದು(ಮೇ.07) ಮತದಾನದಲ್ಲಿ ಭಾಗವಹಿಸಲು ಹೈಕೋರ್ಟ್ ಏಕಸದಸ್ಯ ಪೀಠ ಅನುಮತಿ ನೀಡಿದ್ದು, ಇಂದು ಕುಟುಂಬ ಸಮೇತ ನಗರದ ಶಾರದಾ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 75 ಕ್ಕೆ ಬಂದು ಮತದಾನ ಮಾಡಿದರು. ಬಳಿಕ ಹೈಕೋರ್ಟ್ ಮತದಾನಕ್ಕೆ ಅವಕಾಶ‌ ಕೊಟ್ಟಿದ್ದಕ್ಕೆ ಅಭಿನಂದನೆ ತಿಳಿಸಿದರು.

ಧಾರವಾಡ, ಮೇ.07: ಮತದಾನದಲ್ಲಿ ಭಾಗವಹಿಸಲು ಶಾಸಕ ವಿನಯ್ ಕುಲಕರ್ಣಿಗೆ(Vinay Kulkarni) ಹೈಕೋರ್ಟ್ ಏಕಸದಸ್ಯ ಪೀಠ ಅನುಮತಿ ನೀಡಿದ್ದು, ಇಂದು ಕುಟುಂಬ ಸಮೇತ ನಗರದ ಶಾರದಾ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 75 ಕ್ಕೆ ಬಂದು ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು,‘ ನಾಲ್ಕು ವರ್ಷಗಳ‌ ಬಳಿಕ ಧಾರವಾಡಕ್ಕ ಬಂದಿದ್ದು ಸಂತೋಷ ಆಗಿದೆ. ಅಷ್ಟೇ ನೋವು ಕೂಡ ಇದೆ. ಇವತ್ತು ಹೈಕೋರ್ಟ್ ಮತದಾನಕ್ಕೆ ಅವಕಾಶ‌ ಕೊಟ್ಟಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು, ಉಚ್ಚ ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸಿವೆ ಎಂದರು.

ಇನ್ನು ನನ್ನ ಎಲೆಕ್ಷನ್​ಗೆ ನಾಮಪತ್ರ ಸಲ್ಲಿಸಲು ಜೊತೆಗೆ ಮತದಾನಕ್ಕೂ ಅವಕಾಶ ಆಗಿರಲಿಲ್ಲ. ಆದರೆ ಈಗ ವಿನೋದ ಅಸೂಟಿಗೆ ಮತ ಹಾಕಲು ಅವಕಾಶ ಸಿಕ್ಕಿದೆ. ನಿಜವಾಗಿಯೂ ಬಹಳ ಸಂತೋಷ ಆಗಿದೆ. ಹಲವಾರು ಕಾರ್ಯಕರ್ತರಿಗೆ ನಾನು ಬರೋದು ಮಾಧ್ಯಮಗಳಿಂದ ತಿಳಿದಿದೆ. ಹೀಗಾಗಿ ಕಾರ್ಯಕರ್ತರೂ ಸಹ ಬಂದಿದ್ದಾರೆ. ಇದಕ್ಕಾಗಿ ಮಾಧ್ಯಮಗಳಿಗೆ ಅಭಿನಂದನೆ ಹೇಳುವೆ. ಕಾರ್ಯಕರ್ತರಲ್ಲಿ ಸಹಜವಾಗಿ ಜೋಶ್ ಕಾಣುತ್ತಿದೆ. 25 ವರ್ಷದಿಂದ ನಾನು ರಾಜಕೀಯಲ್ಲಿದ್ದೇನೆ. ಸಾರ್ವಜನಿಕ ಕ್ಷೇತ್ರದಲ್ಲಿ ಎಲ್ಲ ರಂಗದಲ್ಲಿ ಕೆಲಸ ಮಾಡಿದ್ದೇನೆ. ನಾನು ಕ್ಷೇತ್ರದಲ್ಲಿ ಇರಲಿಲ್ಲ, ಆದರೂ ಅಭಿಮಾನಿಗಳು ಆರಿಸಿ ಕಳುಹಿಸಿದ್ದಾರೆ. ಇದು ಕರ್ನಾಟಕದಲ್ಲಿ ಮಾದರಿ ಆಗಿತ್ತು. ನಾನು ಕ್ಷೇತ್ರಕ್ಕೆ ಬರದಿದ್ದರೂ ಚುನಾಯಿತ ಆಗಿದ್ದೇನೆ ಎಂದು ಸಂತಸ ಹಂಚಿಕೊಂಡರು.

ಇದನ್ನೂ ಓದಿ:ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕೇಸ್: ಪ್ರಕರಣ ರದ್ದು ಕೋರಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಜಾ

ಇದೇ ವೇಳೆ ಮತದಾನಕ್ಕೆ ಅವಕಾಶ ಸಿಕ್ಕ ವಿಚಾರ, ‘ಇದರಿಂದಲೇ ಕಾಂಗ್ರೆಸ್ ಗೆಲವು ಖಚಿತ ಅನ್ನೋದು ಗೋಚರ ಆಗುತ್ತಿದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಧಾರವಾಡ ಈಗಾಗಲೇ ನಾವು ಗೆದ್ದಾಗಿದೆ. ಲಿಂಗಾಯತರು ಈ ಸಲವೂ ನಮ್ಮ ಕೈ ಹಿಡಿದಿದ್ದಾರೆ. ಮತದಾರರು ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ಇನ್ನು ಎಲ್ಲಿಯೂ ಭೇಟಿ ನೀಡಿಲ್ಲ. ಮತ ಹಾಕಿ ಬನ್ನಿ ಎಂದು ಅಷ್ಟೇ ಕೋರ್ಟ್ ಹೇಳಿದೆ. ಮತ ಚಲಾಯಿಸಿ ವಾಪಸ್ ಹೋಗುವೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on