ಹೆಚ್​​ಡಿ ರೇವಣ್ಣ ಆರೋಗ್ಯದಲ್ಲಿ ಏರುಪೇರು: ಸುದೀರ್ಘ 2 ಗಂಟೆ ಕಾಲ ಚಿಕಿತ್ಸೆ

ಹೆಚ್​​ಡಿ ರೇವಣ್ಣ ಆರೋಗ್ಯದಲ್ಲಿ ಏರುಪೇರು: ಸುದೀರ್ಘ 2 ಗಂಟೆ ಕಾಲ ಚಿಕಿತ್ಸೆ

Shivaprasad
| Updated By: ಗಂಗಾಧರ​ ಬ. ಸಾಬೋಜಿ

Updated on:May 07, 2024 | 10:53 PM

ಹೆಚ್.ಡಿ.ರೇವಣ್ಣಗೆ ಹೈಪರ್ ಗ್ಯಾಸ್ಟ್ರೈಟೀಸ್ ಸಮಸ್ಯೆ ಹಿನ್ನೆಲೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಮೊದಲು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದ SIT ಅಧಿಕಾರಿಗಳು ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು H.D.ರೇವಣ್ಣಗೆ ಚಿಕಿತ್ಸೆ ನೀಡಿದ್ದಾರೆ. ಸುದೀರ್ಘ 2 ಗಂಟೆ ಕಾಲ ಚಿಕಿತ್ಸೆ ನೀಡಲಾಗಿದೆ.

ಬೆಂಗಳೂರು, ಮೇ 07: ಲೈಂಗಿಕ ಕಿರುಕುಳ, ಸಂತ್ರಸ್ಥೆ ಅಪಹರಣ ಆರೋಪದ ಮೇಲೆ ಎಸ್​ಐಟಿ ತನಿಖೆ ಎದುರಿಸುತ್ತಿರುವ ಹೆಚ್.ಡಿ.ರೇವಣ್ಣಗೆ (HD Revanna) ಹೈಪರ್ ಗ್ಯಾಸ್ಟ್ರೈಟೀಸ್ ಸಮಸ್ಯೆ ಹಿನ್ನೆಲೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಮೊದಲು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದ SIT ಅಧಿಕಾರಿಗಳು ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು H.D.ರೇವಣ್ಣಗೆ ಚಿಕಿತ್ಸೆ ನೀಡಿದ್ದಾರೆ. ಸುದೀರ್ಘ 2 ಗಂಟೆ ಕಾಲ ಚಿಕಿತ್ಸೆ ನೀಡಲಾಗಿದ್ದು, ಈ ವೇಳೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಎಸ್​ಪಿ ಸುಮನ್ ಡಿ.ಪನ್ನೇಕರ್​ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಚಿಕಿತ್ಸೆ ನಂತರ ರೇವಣ್ಣರನ್ನು SIT ಕಚೇರಿಗೆ ಪೊಲೀಸರು ಕರೆದೊಯ್ದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Published on: May 07, 2024 10:46 PM