ಕೊಪ್ಪಳ: ಯಶಸ್ವಿ ಮತದಾನ ಪ್ರಕ್ರಿಯೆ ಮುಗಿಸಿದ ಸಿಬ್ಬಂದಿಗೆ ಹೂಮಾಲೆ ಹಾಕಿ ಸನ್ಮಾನ
ಕೊಪ್ಪಳ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದೆ. ಹೀಗಾಗಿ ಯಶಸ್ವಿಯಾಗಿ ಮತದಾನ ಪ್ರಕ್ರಿಯೆ ಮುಗಿಸಿ ಬಂದ ಸಿಬ್ಬಂದಿಗೆ ಹೂಮಾಲೆ ಹಾಕಿ ಸ್ವಾಗತ ಕೋರಿರುವಂತಹ ಅಪರೂಪದ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ. ಗವಿಸಿದ್ದೇಶ್ವರ ಹೈಸ್ಕೂಲ್ನಲ್ಲಿರುವ ಡಿಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ ಸಿಬ್ಬಂದಿಗೆ ಅಧಿಕಾರಿಗಳು ಮಾಲಾರ್ಪಣೆ ಮಾಡಿ ಸ್ವಾಗತಿಸಿದ್ದಾರೆ.
ಕೊಪ್ಪಳ, ಮೇ 07: ಯಶಸ್ವಿಯಾಗಿ ಮತದಾನ (voting) ಪ್ರಕ್ರಿಯೆ ಮುಗಿಸಿ ಬಂದ ಸಿಬ್ಬಂದಿಗೆ ಹೂಮಾಲೆ ಹಾಕಿ ಸ್ವಾಗತ ಕೋರಿರುವಂತಹ ಅಪರೂಪದ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ. ಗವಿಸಿದ್ದೇಶ್ವರ ಹೈಸ್ಕೂಲ್ನಲ್ಲಿರುವ ಡಿಮಸ್ಟರಿಂಗ್ ಸ್ಥಳಕ್ಕೆ ಸಿಬ್ಬಂದಿಗಳು ಆಗಮಿಸಿದ್ದಾರೆ. ಮತದಾನ ಮುಗಿಸಿಕೊಂಡು ಮತಯಂತ್ರಗಳೊಂದಿಗೆ ಡಿಮಸ್ಟರಿಂಗ್ ಕೇಂದ್ರಕ್ಕೆ ಸಿಬ್ಬಂದಿಗಳು ಆಗಮಿಸಿದ್ದಾರೆ. ಡಿಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ ಸಿಬ್ಬಂದಿಗೆ ಅಧಿಕಾರಿಗಳು ಮಾಲಾರ್ಪಣೆ ಮಾಡಿ ಸ್ವಾಗತಿಸಿದ್ದಾರೆ. ಮತಯಂತ್ರ, ಚುನಾವಣಾ ಪರಿಕರಗಳನ್ನು ಸಿಬ್ಬಂದಿ ಡಿಮಸ್ಟರಿಂಗ್ ಮಾಡಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.