ದುಖಃದ ಮಡುವಿನಲ್ಲಿ ಇಡೀ ಕುಟುಂಬ: ಗಂಡ ತೀರಿಹೋದರೂ ಮತದಾನ ಮರೆಯದ ಹೆಂಡತಿ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ಗಂಡ ತೀರಿಹೋದರೂ ಹೆಂಡತಿ ಮತದಾನ ಮರೆತ್ತಿಲ್ಲ. ಪತಿ ನಾಗಪ್ಪ ಮೃತಪಟ್ಟಿದ್ದರು ಪತ್ನಿ ಚಿನ್ನವ್ವ, ಮಗ ಮಾಲತೇಶ, ಮಗಳು ಜ್ಯೋತಿ ದುಖಃದ ಮಡುವಿನಲ್ಲಿ ಇದ್ದರೂ ಸಹಿತ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಆ ಮೂಲಕ ಎಲ್ಲರೂ ಮತ ಚಲಾಯಿಸುವಂತೆ ಸಂದೇಶ ಸಾರಿದ್ದಾರೆ. 

ದುಖಃದ ಮಡುವಿನಲ್ಲಿ ಇಡೀ ಕುಟುಂಬ: ಗಂಡ ತೀರಿಹೋದರೂ ಮತದಾನ ಮರೆಯದ ಹೆಂಡತಿ
ದುಖಃದ ಮಡುವಿನಲ್ಲಿ ಇಡೀ ಕುಟುಂಬ: ಗಂಡ ತೀರಿಹೋದರೂ ಮತದಾನ ಮರೆಯದ ಹೆಂಡತಿ
Follow us
|

Updated on: May 07, 2024 | 9:10 PM

ಹಾವೇರಿ, ಮೇ 07: ಮನೆಯಲ್ಲಿ ಗಂಡ ತೀರಿಹೋದರೂ ಆ ಮಹಾತಾಯಿ ಮತದಾನ ಮರೆತ್ತಿಲ್ಲ. ಮನೆಯಲ್ಲಿ ನೀರವ ಮೌನ. ಶೋಕ ಸಾಗರದಲ್ಲಿ ಮುಳುಗಿದರೂ ಆ ಕುಟುಂಬ ಇಂದು ಮತದಾನ (Voting) ಮಾಡಿದೆ. ಜಿಲ್ಲೆಯ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ವಾಟರ್ ಮ್ಯಾನ ನಾಗಪ್ಪ ಕಾಳಂಗಿ ನಿನ್ನೆ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಅಂತ್ಯ ಶವಸಂಸ್ಕಾರವೂ ಕೂಡ ಆಗಿರಲಿಲ್ಲ. ಮೃತನ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ಮಾಡಲು‌ ಕುಟುಂಬ ನಿರ್ಧರಿಸಿತ್ತು. ಹೀಗಿರುವಾಗ ಮೃತ ನಾಗಪ್ಪ ಪತ್ನಿ ಚಿನ್ನವ್ವ, ಮಗ ಮಾಲತೇಶ, ಮಗಳು ಜ್ಯೋತಿ ದುಖಃದ ಮಡುವಿನಲ್ಲಿ ಇದ್ದರೂ ಸಹಿತ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಈ ಮೂಲಕ ಎಲ್ಲರೂ ಮತ ಚಲಾಯಿಸುವಂತೆ ಸಂದೇಶ ಸಾರಿದ್ದಾರೆ.

ಬಕ್ಕೇಶ್ವರದಲ್ಲಿ ಒಂದೇ ಕುಟುಂಬದಿಂದ 38 ಸದಸ್ಯರಿಂದ ಮತದಾನ

ದಾವಣಗೆರೆ: ಒಂದೇ‌‌ ಕುಟುಂಬದ 38 ಜನ‌ ‌ಒಂದೇ ಕಡೆ ಮತದಾನ ಮಾಡಿರುವಂತಹ ಅಪರೂಪದ ಘಟನೆಗೆ  ದಾವಣಗೆರೆ ನಗರದ ಬಕ್ಕೇಶ್ವರ ಶಾಲೆ ಮತಗಟ್ಟೆ ಸಾಕ್ಷಿಯಾಗಿದೆ. ಹಿರಿಯ ಪತ್ರಕರ್ತರಾದ ಚಂದ್ರಪ್ಪ ಹಾಗೂ ಏಕಾಂತಪ್ಪ ಕುಟುಂಬ ಮಕ್ಕಳು ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಸಹೋರರು ಸೇರಿ ಬರೋಬರಿ 38 ಜನ ಬಂದು ಮತದಾನ ಮಾಡಿದ್ದಾರೆ. ನಾಲ್ಕು ಜನ ಮೊದಲ ಸಲ ಮತದಾನ ಮಾಡುವ ಮೂಲಕ 38 ಜನರು ಮಾಡಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ತುಂಬಾ ವಿಶಿಷ್ಟ‌ವಾಗಿ ಸಂಭ್ರಮಿಸಲಾಗಿದೆ.

ಲಂಬಾಣಿ ತಾಂಡಾಗಳಲ್ಲಿ ಮತದಾನ ಪ್ರಮಾಣ ಕಡಿಮೆ

ವಿಜಯಪುರ: ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ಸಾಗಿತು. ಮಧ್ಯಾಹ್ನ 1  ಗಂಟೆಗೆ 40.18 ಪ್ರತಿಶತದಷ್ಟು ಮತದಾನವಾಗಿದೆ. ಇತ್ತ ಜಿಲ್ಲೆಯಲ್ಲಿರುವ ಬಂಜಾರಾ ಸಮಾಜದ ಜನರು ವಾಸ ಮಾಡುವ ಲಂಬಾಣಿ ತಾಂಡಾಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಜಿಲ್ಲೆಯಲ್ಲಿ 250 ಲಕ್ಷ ಮತದಾರರನ್ನು ಲಂಬಾಣಿ ಸಮಾಜ ಹೊಂದದೆ. 300 ಕ್ಕೂ ಆಧಿಕ ಲಂಬಾಣಿ ತಂಡಾಗಳಿದ್ದು ಈ ಭಾರಿಯ ಲೋಕಸಭಾ ಚುನಾವಣೆ ಮತದಾನದಲ್ಲಿ ನೀರಸ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕೊಪ್ಪಳ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ; ರಾಜಕೀಯ ನಾಯಕರು, ಸ್ವಾಮೀಜಿಗಳು, ಶತಾಯುಷಿಗಳಿಂದ ವೋಟ್

ಕಾರಣ ಬರಗಾಲದಿಂದ ತಾಂಡಾಗಳ ಜನರು ನೆರೆಯ ಮಹಾರಾಷ್ಟ್ರ ಗೋವಾ ತೆಲಂಗಾಣ, ಆಂದ್ರಪ್ರದೇಶ ನಗರಗಳಲ್ಲಿ ಕೆಲಸ ಅರಸಿ ಹೋಗುತ್ತಾರೆ. ಈ ಬಾರಿ ತೀವ್ರ ಬರಗಾಲ ಮನೆ ಮಾಡಿದ್ದು ಗುಳೆಗೆ ಮುಂಚೆಯೇ ಹೋಗಿದ್ಧಾರೆ. ಸ್ಥಳಿಯ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಇವರನ್ನು ಕರೆಯಿಸಿಕೊಳ್ಳುವ ರಾಜಕಾರಣಿಗಳು ಲೋಕಸಭಾ ಚುನಾವಣೆ ವೇಳೆ ಯಾವುದೇ ರಾಜಕೀಯ ಪಕ್ಷವದರು ಬಂಹಾರಾ ಮತದಾರರನ್ನನು ಗುಳೆಯಿಂದ ಕರೆ ತಂದಿಲ್ಲಾ. ಗುಳೆ ಹೋಗಿರೋ ಮತದಾರರು ಸಹ ಸ್ವಂತ ಖರ್ಚಿನಿಂದ ವಾಪಸ್ ಬಂದು ಮತದಾನ ಮಾಡುವಷ್ಟು ಸ್ಥಿತವಂತರಿಲ್ಲಾ ಎಂದು ತಾಂಡಾದ ಜನರು ಹೇಳಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್