ರೇವಣ್ಣ ವಿರುದ್ಧ ಕಿಡ್ನ್ಯಾಪ್ ಕೇಸ್ಗೆ ಬಿಗ್ ಟ್ವಿಸ್ಟ್: ಗೊಂದಲದ ಹೇಳಿಕೆ ನೀಡುತ್ತಿರುವ ಸಂತ್ರಸ್ತೆ
ಲೈಂಗಿಕ ದೌರ್ಜನ್ಯ, ಕಿಡ್ನ್ಯಾಪ್ ಕೇಸ್ನಲ್ಲಿ ಮಹಿಳೆಯ ಹೇಳಿಕೆ ಬಹುಮುಖ್ಯ ಪಾತ್ರ ವಹಿಸಲಿದೆ. ಸಾಂತ್ವನ ಕೇಂದ್ರದಲ್ಲಿ ಸಂತ್ರಸ್ತೆ ಮಹಿಳೆಯನ್ನು ವಿಚಾರಣೆ ಮಾಡಲಾಗಿದ್ದು, ಸರಿಯಾಗಿ ಸ್ಪಂದಿಸುತ್ತಿಲ್ಲ. ಎಸ್‌ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಸಂತ್ರಸ್ತೆಯ ಉತ್ತರಗಳಿಂದ ಅಧಿಕಾರಗಳಲ್ಲಿ ಗೊಂದಲ ಮೂಡಿದೆ. ಮತ್ತೊಂದೆಡೆ ಹೆಚ್.ಡಿ.ರೇವಣ್ಣ ಕೂಡ ವಿಚಾರಣೆ ಸಹಕರಿಸುತ್ತಿಲ್ಲ ಎನ್ನಲಾಗುತ್ತಿದ್ದು, ಒಂದೇ ಸಾಲಿನ ಉತ್ತರ ನೀಡುತ್ತಿದ್ದಾರೆ.
ಬೆಂಗಳೂರು, ಮೇ 05: ಮಹಿಳೆ ಕಿಡ್ನ್ಯಾಪ್ ಕೇಸ್ನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣರನ್ನು (HD Revanna) ಬಂಧಿಸಿರುವ ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ಮಾಡಲಾಗಿದೆ. ನಿನ್ನೆ ರಾತ್ರಿ ರೇವಣ್ಣಗೆ ಪ್ರಶ್ನೆಗಳ ಮಳೆ ಸುರಿಸಲಾಗಿದ್ದು ಎಸ್‌ಐಟಿ (SIT) ಪ್ರಶ್ನೆಗೆ ರೇವಣ್ಣ ಸರಿಯಾಗಿ ಉತ್ತರ ನೀಡಿಲ್ಲ ಅಂತಾ ಹೇಳಲಾಗಿದೆ. ಇತ್ತ ಸಾಂತ್ವನ ಕೇಂದ್ರದಲ್ಲಿ ಸಂತ್ರಸ್ತೆ ಮಹಿಳೆಯನ್ನು ವಿಚಾರಣೆ ಮಾಡಲಾಗಿದ್ದು, ಸರಿಯಾಗಿ ಸ್ಪಂದಿಸುತ್ತಿಲ್ಲ. ಎಸ್‌ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಗೊಂದಲದ ಹೇಳಿಕೆ ನೀಡುತ್ತಿರುವ ಕಿಡ್ನ್ಯಾಪ್ ಸಂತ್ರಸ್ತೆ
ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮಹಿಳೆಯನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ನನ್ನ ಕಿಡ್ನ್ಯಾಪ್ ಯಾರು ಮಾಡಿಲ್ಲ ನಾನೇ ಹೋಗಿದ್ದು ಅಂತ ಒಂದು ಭಾರಿ ಹೇಳಿದರೆ, ಇನ್ನೊಂದು ಭಾರಿ ಯಾರೋ ಸ್ಥಳೀಯರು ಬಂದು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಸಂತ್ರಸ್ತೆಯ ಉತ್ತರಗಳಿಗೆ ಅಧಿಕಾರಗಳಲ್ಲಿ ಗೊಂದಲ ಮೂಡಿದೆ.
ಇದನ್ನೂ ಓದಿ: ಸಂತ್ರಸ್ತೆ ಹೇಳಿಕೆ ಮೇಲೆ ರೇವಣ್ಣ ಕಿಡ್ನ್ಯಾಪ್ ಕೇಸ್ ಭವಿಷ್ಯ, ಅಪ್ಪ-ಮಗನ ಹಣೆಬರಹ ಬರೆಯಲಿರುವ ಮಹಿಳೆ
ವಿಚಾರಣೆ ವೇಳೆ ಬೇರೆ ಬೇರೆ ಹೇಳಿಕೆಗಳನ್ನ ಕೊಡುತ್ತಿರುವ ಹಿನ್ನಲ್ಲೆ ಸಂತ್ರಸ್ತೆಗೆ ಅಧಿಕಾರಿಗಳು ರೆಸ್ಟ್ ಕೊಟ್ಟು ತೆರಳಿದ್ದಾರೆ. ವಿಚಾರಣೆ ಮಾಡದೇ ನೀವು ರೇಸ್ಟ್ ಮಾಡಿ ನಂತರ ಪ್ರಶ್ನೆ ಕೇಳುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಆರೋಪ, ಕಿಡ್ನ್ಯಾಪ್ ಕೇಸ್: ಹೆಚ್ಡಿ ರೇವಣ್ಣ ಮುಂದಿರುವ ಹಾದಿಗಳೇನು?
ಲೈಂಗಿಕ ದೌರ್ಜನ್ಯ, ಕಿಡ್ನ್ಯಾಪ್ ಕೇಸ್ನಲ್ಲಿ ಮಹಿಳೆಯ ಹೇಳಿಕೆ ಬಹುಮುಖ್ಯ ಪಾತ್ರ ವಹಿಸಲಿದೆ. ಕಿಡ್ನ್ಯಾಪ್ ಮಾಡಿ ಬೆದರಿಕೆ ಇಟ್ಟಿದ್ದರು ಎಂದು ಸಂತ್ರಸ್ತೆ ಹೇಳಿದರೆ ರೇವಣ್ಣಗೆ ಮತ್ತಷ್ಟು ಗಂಡಾಂತರ ಕಟ್ಟಿಟ್ಟ ಬುತ್ತಿ. ತನ್ನ ಮೇಲೆ ರೇಪ್ ಆಗಿದೆ ಎಂದು ಸಾಕ್ಷ್ಯ ನೀಡಿದರೆ ಸಂಕಷ್ಟ ರೇವಣ್ಣಗೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗಲಿದೆ.
ಒಂದೇ ಸಾಲಿನ ಉತ್ತರ ಕೊಡುತ್ತಿರುವ ರೇವಣ್ಣ
ಹೆಚ್.ಡಿ.ರೇವಣ್ಣಗೆ ನಿನ್ನೆಯಿಂದ ವಿಚಾರಣೆ ಮಾಡಿದ್ದು, ಇಂದು ಕೂಡ ಮತ್ತೆ ವಿಚಾರಣೆ ಮಾಡಿದ್ದಾರೆ. ಎಸ್‌ಐಟಿ ಪ್ರಶ್ನೆಗಳಿಗೆ ರೇವಣ್ಣ ಒಂದೇ ಸಾಲಿನ ಉತ್ತರ ಕೊಡುತ್ತಿದ್ದಾರೆ. ಕಿಡ್ನ್ಯಾಪ್‌ಗೂ ನನಗೂ ಸಂಬಂಧವಿಲ್ಲ, ಯಾರನ್ನೂ ಕಿಡ್ನ್ಯಾಪ್ ಮಾಡಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೆ ಒಂದೇ ಸಾಲಿನ ಉತ್ತರ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.