AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ಪ್ರಕರಣ: ಸಂತ್ರಸ್ತೆ ರಕ್ಷಣೆಯಾದ ಮೈಸೂರಿನ ತೋಟದ ಮನೆಯ ನೆರೆಯವರು ಹೇಳೋದೇನು?

ಪ್ರಜ್ವಲ್ ಪ್ರಕರಣ: ಸಂತ್ರಸ್ತೆ ರಕ್ಷಣೆಯಾದ ಮೈಸೂರಿನ ತೋಟದ ಮನೆಯ ನೆರೆಯವರು ಹೇಳೋದೇನು?

ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 05, 2024 | 1:56 PM

Share

HD Revanna PA Rajagopal's farmhouse: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮಹಿಳೆಯೊಬ್ಬರನ್ನು ಎಸ್​ಐಟಿ ಪೊಲೀಸರು ರಕ್ಷಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಎಚ್.ಡಿ. ರೇವಣ್ಣ ಅವರ ಪಿಎ ರಾಜಗೋಪಾಲ್ ಎಂಬುವವರ ಕೆ ಆರ್ ನಗರ ತೋಟದ ಮನೆಯಲ್ಲಿ ಸಂತ್ರಸ್ತೆ ಇದ್ದರೆನ್ನಲಾಗಿದೆ. ಈ ಫಾರ್ಮ್​ಹೌಸ್​ನ ಪಕ್ಕದ ನಿವಾಸಿಯಾದ ನಟೇಶ್ ಎಂಬುವವರು ಟಿವಿ9 ಜೊತೆ ಮಾತನಾಡಿ ಸಂತ್ರಸ್ತೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಮೈಸೂರು, ಮೇ 5: ಪ್ರಜ್ವಲ್ ರೇವಣ್ಣ ವಿರುದ್ಧದ ರಾಸಲೀಲೆ ಪ್ರಕರಣದಲ್ಲಿ (Prajwal Revanna sex scandal) ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯೊಬ್ಬಳನ್ನು (victim woman) ಎಸ್​ಐಟಿ ಪೊಲೀಸರು ರಕ್ಷಿಸಿದ್ದಾರೆ. ಎಚ್.ಡಿ. ರೇವಣ್ಣ ಅವರ ಆಪ್ತ ಸಹಾಯಕ ರಾಜಗೋಪಾಲ್ (Rajagopal) ಅವರಿಗೆ ಸೇರಿದ ಫಾರ್ಮ್ ಹೌಸ್​ನಲ್ಲಿದ್ದ ಸಂತ್ರಸ್ತ ಮಹಿಳೆಯನ್ನು ರಕ್ಷಿಸಲಾಗಿದೆ. ಈ ತೋಟದ ಮನೆಯ ಅಕ್ಕಪಕ್ಕದ ನಿವಾಸಿಗಳು ಸಂತ್ರಸ್ತೆಯನ್ನು ಕಂಡಿದ್ದಾರೆ. ನಟೇಶ್ ಎಂಬ ವ್ಯಕ್ತಿ ಟಿವಿ9 ಜೊತೆ ಮಾತನಾಡಿ, ತಾನು ಸಂತ್ರಸ್ತೆ ಜೊತೆ ಮಾತನಾಡಿಯೂ ಇದ್ದೇನೆ ಎಂದಿದ್ದಾರೆ. ಆ ಮಹಿಳೆ ತಾನು ಎಚ್.ಡಿ. ಕೋಟೆಯವ್ರು ಅಂತ ಹೇಳಿಕೊಂಡ್ರು. ಯಜಮಾನ್ರು ತೋಟದಲ್ಲವ್ರೆ, ಅವ್ರಿಗೆ ದುಡ್ಡು ಕೊಡೋಕೆ ಬಂದಿದೀನಿ ಅಂತ ಅಂತ ಅಂದ್ರು. ಆವಕ್ಕನ ಜೊತೆ ಎರಡು ದಿನ ಮಾತನಾಡಿಸಿದೀನಿ ಎಂದು ನಟೇಶ್ ಹೇಳಿದ್ದಾರೆ.

ಎಚ್.ಡಿ. ರೇವಣ್ಣ ಸೂಚನೆ ಮೇರೆಗೆ ರಾಜಗೋಪಾಲ್ ಈ ಮಹಿಳೆಯನ್ನು ಅಪಹರಿಸಿರಬಹುದು ಎಂಬ ಶಂಕೆ ಇದೆ. ಸಂತ್ರಸ್ತೆಯನ್ನು ಎಸ್​ಐಟಿ ಪೊಲೀಸರು ರಕ್ಷಣೆ ಮಾಡಿದಾಗಿನಿಂದ ರಾಜಗೋಪಾಲ್ ನಾಪತ್ತೆಯಾಗಿದ್ದಾರೆ. ಗ್ರಾಮಸ್ಥ ನಟೇಶ್ ಪ್ರಕಾರ ರಾಜಗೋಪಾಲ್ ಇಲ್ಲಿ ಬಡವರಿಗೆ ಬಹಳ ಸಹಾಯ ಮಾಡುತ್ತಾರಂತೆ. ಹಾಗೆಯೇ ರೇವಣ್ಣ ಈ ತೋಟದ ಮನೆಗೆ ಬಂದಿದ್ದನ್ನು ಒಮ್ಮೆಯೂ ನೋಡಿಲ್ಲ. ತೋಟದ ಮನೆಗೆ ಬಂದಿದ್ದ ಮಹಿಳೆ ಅತ್ಯಾಚಾರ ಸಂತ್ರಸ್ತೆ ಎಂದು ಗೊತ್ತಾಗಿದ್ದೇ ಈಗ ಎಂದು ಇವರು ಹೇಳುತ್ತಾರೆ.

ಇದನ್ನೂ ಓದಿ: ರೇವಣ್ಣ ಒಂಟಿ ಸಲಗ, ಎಲ್ಲಿ ಬಾಯಾರಿತೋ ಅಲ್ಲಿ ನೀರು ಕುಡಿಯೋ ಬಸವ ಇದ್ದಂಗೆ: ಗ್ರಾಮಸ್ಥನೊಬ್ಬನ ಅಭಿಮಾನದ ಮಾತು

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More