ರೇವಣ್ಣ ಒಂಟಿ ಸಲಗ, ಎಲ್ಲಿ ಬಾಯಾರಿತೋ ಅಲ್ಲಿ ನೀರು ಕುಡಿಯೋ ಬಸವ ಇದ್ದಂಗೆ: ಗ್ರಾಮಸ್ಥನೊಬ್ಬನ ಅಭಿಮಾನದ ಮಾತು

ರೇವಣ್ಣ ಒಂಟಿ ಸಲಗ, ಎಲ್ಲಿ ಬಾಯಾರಿತೋ ಅಲ್ಲಿ ನೀರು ಕುಡಿಯೋ ಬಸವ ಇದ್ದಂಗೆ: ಗ್ರಾಮಸ್ಥನೊಬ್ಬನ ಅಭಿಮಾನದ ಮಾತು

ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 05, 2024 | 12:28 PM

Villager defending Revanna family in sex scandal case: ಎಚ್.ಡಿ. ರೇವಣ್ಣ ಬಂಧನ ಆಗಿರುವುದು ಹೊಳೆನರಸೀಪುರದಲ್ಲಿ ಮೂದಿ ಮುಚ್ಚಿದ ಕೆಂಡಂತಹ ಸ್ಥಿತಿ ನಿರ್ಮಿಸಿದೆ. ದೇವೇಗೌಡರ ಕುಟುಂಬದ ಅನ್ನ ತಿಂದು ದ್ರೋಹ ಮಾಡುತ್ತಿದ್ದಾರೆ ಎಂದು ಹೊಳೆನರಸೀಪುರದಲ್ಲಿ ಕೆಲ ವ್ಯಕ್ತಿಗಳು ಆರೋಪ ಮಾಡುತ್ತಿದ್ದಾರೆ. ರೇವಣ್ಣ ವಿರುದ್ಧ ಮಾಡಲಾಗಿರುವ ಲೈಂಗಿಕ ಕಿರುಕುಳ ಆರೋಪಗಳನ್ನೂ ಕೆಲವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಹಾಸನ, ಮೇ 5: ದೇವೇಗೌಡರ ಕುಟುಂಬದ ಮೇಲೆ ಬಿರುಗಾಳಿ ಎದ್ದಿದೆ. ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ (Prajwal Revanna sex scandal) ಸಿಲುಕಿದ್ದಾರೆ. ಎಚ್.ಡಿ. ರೇವಣ್ಣ (HD Revanna) ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಕರಣಗಳಲ್ಲಿ ಸಿಲುಕಿ ಬಂಧಿತರಾಗಿದ್ದಾರೆ. ಜೆಡಿಎಸ್​ನ ಹಾಸನ ಭದ್ರಕೋಟೆ ಬಿರುಕು ಮೂಡುತ್ತಿದೆಯಾ? ಆದರೆ, ದೇವೇಗೌಡರ ಕುಟುಂಬದ ಬಗ್ಗೆ ಅಪರಿಮಿತವಾದ ನಿಷ್ಠ ಇರಿಸಿಕೊಂಡ ಜನರೂ ಬಹಳ ಇದ್ದಾರೆ. ರೇವಣ್ಣರ ಮೇಲಿನ ಆರೋಪಗಳನ್ನ ಸಮರ್ಥನೆ ಮಾಡಿಕೊಳ್ಳುವ ಹಂತಕ್ಕೂ ಹೋಗುವಂತಹ ನಿಷ್ಠಾವಂತರು ಹೊಳೆನರಸೀಪುರ ಕ್ಷೇತ್ರದಲ್ಲಿದ್ದಾರೆ. ಟಿವಿ9 ಕನ್ನಡದ ಜೊತೆಗೆ ಮಾತನಾಡಿದ ಕೆಲ ಗ್ರಾಮಸ್ಥರು ದೇವೇಗೌಡರ ಕುಟುಂಬದ ಮೇಲೆ ಕಾಂಗ್ರೆಸ್ ಮಾಡಿರುವ ಚಿತಾವಣಿ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೇವಣ್ಣ ಒಂಟಿ ಸಲಗ ಇದ್ದಂತೆ. ಎಲ್ಲಿ ಬಾಯಾರುತ್ತೋ ಅಲ್ಲಿ ನೀರು ಕುಡಿಯೋ ಬಸವ ಇದ್ದಂಗೆ. ಅವ್ರು ಯಾವ್ದಕ್ಕೂ ಹೆದರ್ಬಾರ್ದು ಎಂದು ಗ್ರಾಮಸ್ಥರೊಬ್ಬರು ಪ್ರತಿಕ್ರಿಯಿಸಿದ್ದಾರೆ. ದೇವೇಗೌಡರು ಚಿನ್ನದಂತಹ ಮನುಷ್ಯ. ರೇವಣ್ಣ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅಂಥ ಕುಟುಂಬದವರಿಗೆ ಈ ಅನ್ಯಾಯ ಆಗಬಾರದಿತ್ತು ಎಂದು ಇವರು ಹಲುಬುತ್ತಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ ಬಗ್ಗೆ ಮಾತನಾಡುವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗೇ ಆಗುತ್ತೆ ಎಂದ ಮಲ್ಲಿಕಾರ್ಜುನ ಖರ್ಗೆ

ಇದೇ ವೇಳೆ ಎಚ್ ಡಿ ರೇವಣ್ಣ ಬಂಧನದ ಬಳಿಕ ಹೊಳೆನರಸೀಪುರ ಒಂದು ರೀತಿಯಲ್ಲಿ ಬೂದಿ ಮುಚ್ಚಿದ ಕೆಂಡಂತಹ ಪರಿಸ್ಥಿತಿಯಲ್ಲಿದೆ. ಮುನ್ನೆಚ್ಚರಿಕೆಯಾಗಿ ದಕ್ಷಿಣ ವಲಯ ರಾಜ್ಯ ಐಜಿಪಿ ಅಮಿತ್ ಸಿಂಗ್ ಅವರು ಇಂದು ಭಾನುವಾರ ಬೆಳಗ್ಗೆಯಿಂದಲೇ ಹೊಳೆನರಸೀಪುರದಲ್ಲಿ ಮೊಕ್ಕಾಂ ಹೂಡಿದ್ದಾರೆ. ಐಜಿಪಿ ಜೊತೆಗೆ ಎಸ್​ಪಿ, ಎಎಸ್​ಪಿ ಮೊದಲಾದ ಹಲವು ಅಧಿಕಾರಿಗಳು ಪಟ್ಟಣದಲ್ಲಿದ್ದಾರೆ. ನೂರಾರು ಪೊಲೀಸರು ವಿವಿಧೆಡೆ ನಿಯೋಜನೆಗೊಂಡಿದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ