ಫಿನಾಲೆ ಸಮೀಪಿಸಿದಂತೆ ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಹೆಚ್ಚುತ್ತಿದೆ ದ್ವೇಷದ ಬೆಂಕಿ
ನಾಮಿನೇಷನ್ ವಿಚಾರದಲ್ಲಿ ಕಾರ್ತಿಕ್-ಸಂಗೀತಾ ಕಿತ್ತಾಡಿಕೊಂಡಿದ್ದಾರೆ. ನಾಮಿನೇಟ್ ಮಾಡಲು ಕಾರ್ತಿಕ್ ಹೆಸರನ್ನು ಸಂಗೀತಾ ಅವರು ತೆಗೆದುಕೊಂಡಿದ್ದಾರೆ. ಸಂಗೀತಾ ಹೆಸರನ್ನು ಕಾರ್ತಿಕ್ ಅವರು ತೆಗೆದುಕೊಂಡಿದ್ದಾರೆ. ಇವರ ಮಧ್ಯೆ ವಾದ-ವಿವಾದ ನಡೆದಿದೆ.
ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಆದರೆ, ಇತ್ತೀಚೆಗೆ ಈ ಗೆಳೆತನ ಕೊನೆಯಾಗಿದೆ. ಇಬ್ಬರೂ ಬೇರೆ ಆಗಿದ್ದಾರೆ. ಇವರು ಒಟ್ಟಾಗಿ ಕುಳಿತು ಮಾತನಾಡೋದು ಇತ್ತೀಚೆಗೆ ಸಂಪೂರ್ಣವಾಗಿ ನಿಂತಿದೆ. ಈಗ ನಾಮಿನೇಷನ್ ವಿಚಾರದಲ್ಲಿ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ನಾಮಿನೇಟ್ ಮಾಡಲು ಕಾರ್ತಿಕ್ ಹೆಸರನ್ನು ಸಂಗೀತಾ ಅವರು ತೆಗೆದುಕೊಂಡಿದ್ದಾರೆ. ಸಂಗೀತಾ ಹೆಸರನ್ನು ಕಾರ್ತಿಕ್ (Karthik Mahesh) ಅವರು ತೆಗೆದುಕೊಂಡಿದ್ದಾರೆ. ಇವರ ಮಧ್ಯೆ ವಾದ-ವಿವಾದ ನಡೆದಿದೆ. ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಇಂದು (ಜನವರಿ 1) ಎಪಿಸೋಡ್ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ