ಬಕೆಟ್​ ಹಿಡಿತೀಯ ಎಂದಿದ್ದ ಸಂಗೀತಾಗೆ ಕಾರ್ತಿಕ್​ ಸುತ್ತಿಗೆ ಏಟು; ಬಿಗ್ ಬಾಸ್​ ಸದಸ್ಯರಿಗೆ ದೊಡ್ಡ ಶಾಕ್​

Updated on: Dec 17, 2023 | 10:04 AM

‘ವಿನಯ್​ಗೆ ಕಾರ್ತಿಕ್​ ಬಕೆಟ್​ ಹಿಡಿಯುತ್ತಾನೆ’ ಎಂದು ಸಂಗೀತಾ ಶೃಂಗೇರಿ ಅವರು ಈ ಮೊದಲು ಹೇಳಿದ್ದರು. ಅದಕ್ಕೆ ಕಾರ್ತಿಕ್​ ಕೋಪಗೊಂಡಿದ್ದಾರೆ. ಕಿಚ್ಚ ಸುದೀಪ್​ ಎದುರಲ್ಲೇ ಕಾರ್ತಿಕ್​ ಮಹೇಶ್​ ಕೋಪ ತೋರಿಸಿದ್ದಾರೆ. ಸುತ್ತಿಗೆ ಹಿಡಿದುಕೊಂಡು ಸಂಗೀತಾ ವಿರುದ್ಧ ಅವರು ಆರ್ಭಟಿಸಿದ್ದ ನೋಡಿ ಎಲ್ಲರಿಗೂ ಶಾಕ್​ ಆಗಿದೆ.

‘777 ಚಾರ್ಲಿ’ ಸಿನಿಮಾ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ಬಿಗ್ ಬಾಸ್​ ಮನೆಯಲ್ಲಿ ನಟ ಕಾರ್ತಿಕ್​ ಮಹೇಶ್​ ಜೊತೆ ಕ್ಲೋಸ್​ ಆಗಿದ್ದರು. ಆದರೆ 10ನೇ ವಾರದಲ್ಲಿ ಅವರ ನಡುವೆ ಬಿರುಕು ಮೂಡಿದೆ. ಸಂಗೀತಾ ಇಲ್ಲದೇ ಕಾರ್ತಿಕ್​ ಮಹೇಶ್​ (Karthik Mahesh) ಇಲ್ಲ ಎಂದು ಕೆಲವರು ಆಡಿಕೊಂಡ ಮಾತನ್ನು ಸುಳ್ಳು ಮಾಡುವ ಸಲುವಾಗಿ ಕಾರ್ತಿಕ್​ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ‘ವಿನಯ್​ಗೆ ಕಾರ್ತಿಕ್​ ಬಕೆಟ್​ ಹಿಡಿಯುತ್ತಾನೆ’ ಎಂದು ಸಂಗೀತಾ ಈ ಮೊದಲು ಹೇಳಿದ್ದರು. ಅದಕ್ಕೆ ಕಾರ್ತಿಕ್​ ಕೋಪಗೊಂಡಿದ್ದಾರೆ. ಸಂಗೀತಾ ಅವರ ಪ್ರತಿಕೃತಿಗೆ ಸುತ್ತಿಗೆಯಿಂದ ಹೊಡೆಯುವ ಮೂಲಕ ಕಾರ್ತಿಕ್​ ಕೋಪ ತೀರಿಸಿಕೊಂಡಿದ್ದಾರೆ. ಇದರಿಂದ ಬಿಗ್​ ಬಾಸ್ (Bigg Boss Kannada)​ ಮನೆಯಲ್ಲಿ ಇರುವ ಎಲ್ಲ ಸ್ಪರ್ಧಿಗಳಿಗೆ ಶಾಕ್​ ಆಗಿದೆ. ಈ ಸಂಚಿಕೆ ಡಿಸೆಂಬರ್​ 17ರಂದು ರಾತ್ರಿ 9 ಗಂಟೆಗೆ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕವೂ ಶೋ ವೀಕ್ಷಿಸಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More